Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ‘ಬಗೆದಷ್ಟು ಜೀವಜಲ’ ಸಂಕಲನ

    February 3, 2026

    ಸಾಹಿತಿ ನಾ. ಡಿಸೋಜ ದತ್ತಿ ಮಕ್ಕಳ ಕಥಾ ಸ್ಪರ್ಧೆ | ಫೆಬ್ರುವರಿ 10

    February 3, 2026

    ಕಲಾಂಗಣದಲ್ಲಿ ಸುರ್ ಸೊಭಾಣ್ ಮಕ್ಕಳಿಂದ ‘ಸುರ್ ಸುರಾಯ್’

    February 3, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ತುಳು ಕೂಟದಿಂದ ಬಂಗಾರ್ ಪರ್ಬ ವೈಭವ ಸರಣಿ – 09 ‘ತುಳುವೆರೆ ತುಡರ ಪರ್ಬೊ’
    Cultural

    ತುಳು ಕೂಟದಿಂದ ಬಂಗಾರ್ ಪರ್ಬ ವೈಭವ ಸರಣಿ – 09 ‘ತುಳುವೆರೆ ತುಡರ ಪರ್ಬೊ’

    November 21, 2023No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಸುರತ್ಕಲ್ ವಿದ್ಯಾದಾಯಿನೀ ಪ್ರೌಢಶಾಲೆಯಲ್ಲಿ ದಿನಾಂಕ 18-11-2023ರಂದು ಜರಗಿದ ತುಳು ಕೂಟ (ರಿ) ಕುಡ್ಲದ ಬಂಗಾರ್ ಪರ್ಬ ವೈಭವ ಸರಣಿ -09ರ ‘ತುಳುವೆರೆ ತುಡರ ಪರ್ಬೊ’ ಕಾರ್ಯಕ್ರಮವನ್ನು ಅಗರಿ ಶ್ರೀ ರಾಘವೇಂದ್ರ ರಾವ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ತುಳುವಿನಲ್ಲಿ ಪರಂಪರಾನುಗತ ತುಳು ಮಾತನಾಡಲು ಕಷ್ಟವಾದರೂ ನಾವು ಸಮಯ – ಸಂದರ್ಭದಲ್ಲಿ ತುಳು ಭಾಷೆಯನ್ನಾಡಲೇ ಬೇಕಾಗುತ್ತದೆ. ಕೆಲವೊಮ್ಮೆ ತಪ್ಪಿದರೂ ಅದನ್ನು ತಿದ್ದಿಕೊಂಡು ತುಳು ನಮ್ಮದು ಎಂಬ ವಿಶೇಷ ಮಮತೆಯಿಟ್ಟು ಬೆಳಸೋಣ” ಎಂಬ ಸಂದೇಶವನ್ನು ನೀಡಿದರು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸನ್ನಿಧೀಸ್ ಹೋಟೆಲ್ಸ್ (ಪ್ರೈ) ಲಿ. ಇದರ ಜನರಲ್ ಮ್ಯಾನೇಜರ್ ಶ್ರೀ ಭಾಸ್ಕರ ಸಾಲ್ಯಾನರು “ನಾವು ತುಳುವರೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವಾದರೂ ನಾವು ಭಾಷೆಯನ್ನು ಅಷ್ಟಾಗಿ ದುಡಿಸಿಕೊಂಡಿಲ್ಲ. ಎಷ್ಟೇಷ್ಟೋ ಕವಿಗಳು, ಸಾಹಿತಿಗಳು ಬೆಳೆದರೂ ಭಾಷೆ ಹಿಂದುಳಿದಿದೆ. ನಾವು ಗ್ರಾಂಥಿಕವಾದ ತುಳು ಮಾತನಾಡಲು ಅಸಾಧ್ಯವಾದರೂ ನಮ್ಮ ಮನೆಯ ಭಾಷೆಯಾಗಿ ತುಳುವನ್ನು ಸ್ವೀಕರಿಸಬೇಕು. ಖಂಡಿತಾ ದೈನಂದಿನ ಚಟುವಟಿಕೆಗಳಲ್ಲಿ, ಪರಸ್ಪರ ಸಂಭಾಷಣೆಗಳಲ್ಲಿ ತುಳು ಬಳಕೆಯಾಗಬೇಕು. ಅಂತಹಾ ಸ್ಥಿತಿ, ಪರಿಸರ, ಪರಿಸ್ಥಿತಿ ಇದ್ದಾಗ ಮಾತ್ರ ತುಳು ಭಾಷೆಯ ಬೆಳವಣಿಗೆ, ಉಳಿವಿಗೆ ಸಾಧ್ಯ” ಎಂದು ತುಳು ಭಾಂಧವರಿಗೆ ಕರೆ ನೀಡಿದರು.

    “ತುಳು ಈಗ ಬಹಳ ಪರಿಚಿತವಾದ ಭಾಷೆಯಾಗಿದೆ. ತುಳು ಅರಿಯದವರ ಸಂಖ್ಯೆ ವಿರಳ. ಉತ್ತರ ನೀಡಲು ಅಸಮರ್ಥರಾದರೂ ಭಾಷೆಯನ್ನು ಮನನ ಮಾಡಿಕೊಳ್ಳುತ್ತಾರೆ. ಇದು ತುಳು ಭಾಷಾ ಬೆಳವಣಿಗೆಯ ದೃಷ್ಟಿಯಿಂದ ಧನಾತ್ಮಕ ಅಂಶ. ನಾವು ಎಲ್ಲೇ ಹೋಗಲಿ ಅಲ್ಲಿಗೆಲ್ಲಾ ತುಳುವನ್ನು ಒಯ್ಯೋಣ. ತುಳು ಕೂಟ ನಡೆಸುವ ಈ ಯಜ್ಞದಲ್ಲಿ ನಾವೆಲ್ಲರೂ ಕರ ಜೋಡಿಸೋಣ. ಶ್ರದ್ಧೆಯಿಂದ ತುಳು ತೇರನ್ನು ಎಳೆಯೋಣ” ಎ೦ದು ತುಳು ಕೂಡ ಅಧ್ಯಕ್ಷ ಮರೋಳಿ ಬಿ.ದಾಮೋದರ ನಿಸರ್ಗ ತುಳುವರಲ್ಲಿ ಅರಿಕೆ ಮಾಡಿದರು.

    ವಿದ್ಯಾದಾಯಿನೀ ಪ್ರೌಢ ಶಾಲಾ ಸಂಚಾಲಕ ಶ್ರೀ ಸುಧಾಕರ ರಾವ್ ಪೇಜಾವರರು ಶುಭಾಶಂಸನೆಗೈದರು. ಗೋವಿಂದದಾಸ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ವೆಂಕಟ್ರಮಣ ಭಟ್ಟರು ತುಳುವರ ದೀಪಾವಳಿ, ನರಕ ಚತುರ್ದಶಿ, ಗೋಪೂಜೆ, ಬಲಿ ಪಾಡ್ಯಮಿಯ ಬಗ್ಗೆ ಉಪನ್ಯಾಸವಿತ್ತರು. ತುಳು ಕೂಟದ ಖಚಾಂಚಿ ಚಂದ್ರಶೇಖರ ಸುವರ್ಣ, ಪಿ. ಗೋಪಾಲಕೃಷ್ಣ, ಸದಸ್ಯರಾದ ರಮೇಶ ಕುಲಾಲ್ ಬಾಯಾರ್, ವಿಶ್ವನಾಥ ಪೂಜಾರಿ, ವಿಜಯ ಕುಮಾರ್ ಕುಲಾಲ್, ಹೇಮಾ ನಿಸರ್ಗ ಉಪಸ್ಥಿತರಿದ್ದರು.

    ಪ್ರಧಾನ ಕಾರ್ಯದರ್ಶಿ ವರ್ಕಾಡಿ ಶ್ರೀ ರವಿ ಅಲೆವೂರಾಯ ಸಭೆ ನಿರ್ವಹಿಸಿದರು. ಉಪಾಧ್ಯಕ್ಷ ಲ. ಜೆಪ್ಪು ವಿಶ್ವನಾಥ ಶೆಟ್ಟಿ ಪ್ರಸ್ತಾವನೆಗೈದು, ಹಿರಿಯ ಅಧ್ಯಾಪಕರಾದ ವಸಂತ ಕುಮಾರ್ ಧನ್ಯವಾದವಿತ್ತರು. ಸಂಸ್ಕೃತ ಅಧ್ಯಾಪಕರಾದ ದಿವಸ್ಪತಿಯವರು ಅತಿಥಿ ಗಣ್ಯರಿಗೆ ಸ್ಮರಣಿಕೆಗೆಳನ್ನು ನೀಡಿ ಗೌರವಿಸಿದರು.

    ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಶಾಲಾ ವಿದ್ಯಾರ್ಥಿನಿಯರಿಂದ ಹಾಡುಗಳು, ತೋನ್ಸೆ ಶ್ರೀ ಪುಷ್ಕಳ ಕುಮಾರ್ ಮತ್ತು ಬಳಗದಿಂದ ‘ತುಳು ಭಾವಗೀತೆ ಪದರಂಗಿತೊ’ ಹಾಗೂ ವರ್ಕಾಡಿ ರವಿ ಅಲೆವೂರಾಯ ಬಳಗದಿಂದ ‘ಬಲಿ-ವಾಮನ’ ರೂಪಕ ಜರಗಿತು. ಚಂದ್ರಶೇಖರ ಸುವರ್ಣರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು. ವಿದ್ಯಾದಾಯಿನಿ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleರಂಗಭೂಮಿಯ ಒಡನಾಟದ ಕಥನವನ್ನು ಹೇಳುವ ಶ್ರೀಮತಿ ಪೂರ್ಣಿಮಾ ಸುರೇಶ್ ಅವರ ಕೃತಿ ‘ರಂಗ ರಂಗೋಲಿ’ಯ ಲೋಕಾರ್ಪಣೆ
    Next Article ಕಟೀಲಿನ ಸರಸ್ವತೀ ಸದನದಲ್ಲಿ ‘ಯಕ್ಷಗಾನ ಕಲಾರಂಗ’ ಪ್ರಶಸ್ತಿ ಪ್ರದಾನ
    roovari

    Add Comment Cancel Reply


    Related Posts

    ಬೇಕಲದಲ್ಲಿ ‘ಸಮನ್ವಯ ಗಡಿನಾಡ ಜಾನಪದ ಉತ್ಸವ’ | ಫೆಬ್ರುವರಿ 01

    January 31, 2026

    ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ‘ಮಹಿಳಾ ವೈಭವ -2026’ | ಫೆಬ್ರುವರಿ 01 ಮತ್ತು 02

    January 27, 2026

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ಹನ್ನೊಂದನೇ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

    January 27, 2026

    ಬಾಗಲಕೋಟೆಯಲ್ಲಿ ‘ಅಖಿಲ ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನ’ | ಜನವರಿ 25

    January 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.