ಮಂಗಳೂರು : ತುಳು ಕೂಟ (ರಿ.) ಕುಡ್ಲ ಇದರ ವತಿಯಿಂದ ಆಟಿ ಕಾರ್ಯಕ್ರಮವು ದಿನಾಂಕ 27 ಜುಲೈ 2025ನೇ ರವಿವಾರ ಬೆಳಿಗ್ಗೆ 10-30 ಗಂಟೆಗೆ ಬಲ್ಲಾಳ್ ಭಾಗ್ ನಲ್ಲಿರುವ ‘ಪತ್ತುಮುಡಿ’ ಸಭಾಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀಮತಿ ಸುಮಲತಾ ಎನ್. ಸುವರ್ಣ ಇವರು ಉದ್ಘಾಟಿಸಿದ್ದು, ಮಂಗಳೂರು ದಕ್ಷಿಣ ವಿಧಾನ ಸಭಾ ಶಾಸಕ ವೇದವ್ಯಾಸ ಕಾಮತರು ‘ಬಂಗಾರ ಪಿಂಗಾರ’ ಎಂಬ ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸಲಿದ್ದಾರೆ.
ತುಳು ಕೂಟ (ರಿ.) ಕುಡ್ಲ ಇದರ ಅಧ್ಯಕ್ಷರಾದ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಇವರು ಅಧ್ಯಕ್ಷತೆ ವಹಿಸಲಿದ್ದು, ಗಡಿಕಾರರಾದ ವರ್ಧಮಾನ ದುರ್ಗಾಪ್ರಸಾದ್ ಶೆಟ್ಟರು, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಪದ್ಮರಾಜ್ ಆರ್., ಸೂರ್ಯನಾರಾಯಣ ರಾವ್ ಪತ್ತುಮುಡಿ, ಜಾನಪದ ವಿದ್ಯಾಂಸ ಮುದ್ದು ಮೂಡುಬೆಳ್ಳೆಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಈರ್ವರು ಪ್ರತಿಭೆಗಳನ್ನು ಗೌರವಿಸಲಾಗುತ್ತದೆ ಎಂದು ಕುಡ್ಲ ತುಳುಕೂಟದ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಹಾಗೂ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ತಿಳಿಸಿದ್ದಾರೆ.