Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ – ಹಸ್ತಪ್ರತಿ ಶಾಸ್ತ್ರದ ಭೀಷ್ಮ – ಬಿ. ಎಸ್. ಸಣ್ಣಯ್ಯ

    June 18, 2025

    ಮುಂಡಾಜೆಯಲ್ಲಿ ‘ದರ್ಪಣ’ ಕವನ ಸಂಕಲನದ ಲೋಕಾರ್ಪಣೆ | ಜೂನ್ 19

    June 18, 2025

    ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 21

    June 18, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬರಗೂರು ರಾಮಚಂದ್ರಪ್ಪ ಇವರು ‘ಕಾದಂಬರಿ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ
    Awards

    ಬರಗೂರು ರಾಮಚಂದ್ರಪ್ಪ ಇವರು ‘ಕಾದಂಬರಿ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆ

    May 6, 2025No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಳಗಾವಿ : ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಜೀವಮಾನ ಸಾಧನೆಗಾಗಿ 2024ನೇ ಸಾಲಿನ ‘ಕಾದಂಬರಿ ಸಾಹಿತ್ಯ ಪ್ರಶಸ್ತಿ’ಗೆ ಚಿಂತಕ ಪ್ರೊ. ಬರಗೂರು ರಾಮಚಂದ್ರಪ್ಪ ಇವರನ್ನು ಆಯ್ಕೆ ಮಾಡಿದೆ. ಪ್ರಶಸ್ತಿಯು ರೂ. ಐವತ್ತು ಸಾವಿರ ನಗದು, ಸ್ಮರಣಿಕೆ ಹೊಂದಿದ್ದು, ದಿನಾಂಕ 25 ಮೇ 2025ರಂದು ಸಮಾರಂಭ ನಡೆಯಲಿದೆ.

    ಬರಗೂರು ರಾಮಚಂದ್ರಪ್ಪನವರು 18 ಅಕ್ಟೋಬರ್ 1946ರಂದು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ, ತಂದೆ ರಂಗದಾಸಪ್ಪ. ಬೆಂಗಳೂರು ವಿವಿ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಇವರು ಸೇವೆ ಸಲ್ಲಿಸಿದ್ದು, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಇವರು ಕೆಲಸ ನಿರ್ವಹಿಸಿದ್ದಾರೆ. ರಾಯಚೂರಿನಲ್ಲಿ ನಡೆದ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಬಸವರಾಜ ಕಟ್ಟೀಮನಿ ಇವರ ತತ್ವ-ಆದರ್ಶಗಳಂತೆ ಬರೆಯುತ್ತ, ಬದುಕು ನಡೆಸಿದ್ದಾರೆ. 13 ಕಾದಂಬರಿ ರಚಿಸಿದ್ದು, ಈ ಕ್ಷೇತ್ರವನ್ನು ಸಮೃದ್ಧಗೊಳಿಸಿದ್ದಾರೆ. ‘ಸುಂಟರಗಾಳಿ’ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ.

    award baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10
    Next Article ಸಹೋದಯ ಸಭಾಂಗಣದಲ್ಲಿ ಬ್ಯಾರಿ ಪುಸ್ತಕಗಳ ಬಿಡುಗಡೆ | ಮೇ 07
    roovari

    Add Comment Cancel Reply


    Related Posts

    ವಿಶೇಷ ಲೇಖನ – ಹಸ್ತಪ್ರತಿ ಶಾಸ್ತ್ರದ ಭೀಷ್ಮ – ಬಿ. ಎಸ್. ಸಣ್ಣಯ್ಯ

    June 18, 2025

    ಮುಂಡಾಜೆಯಲ್ಲಿ ‘ದರ್ಪಣ’ ಕವನ ಸಂಕಲನದ ಲೋಕಾರ್ಪಣೆ | ಜೂನ್ 19

    June 18, 2025

    ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ | ಜೂನ್ 21

    June 18, 2025

    ಕೊಯ್ಯೂರು ಪಂಚದುರ್ಗಾಪರಮೇಶ್ವರಿ ದೇವಾಲಯದಲ್ಲಿ ಯಕ್ಷಗಾನ ತಾಳಮದ್ದಳೆ

    June 18, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.