ಮಂಗಳೂರು : ಸಂಗೀತ್ ಭಾರತಿ ಫೌಂಡೇಷನ್ (ರಿ.) ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ಬಸಂತ್ ಉತ್ಸವ್’ ಸಂಗೀತ ಕಾರ್ಯಕ್ರಮವನ್ನು ದಿನಾಂಕ 01 ಫೆಬ್ರುವರಿ 2026ರಂದು ಸಂಜೆ 5-00 ಗಂಟೆಗೆ ಮಂಗಳೂರಿನ ಉರ್ವ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಪೂರ್ವಾಧದಲ್ಲಿ ರಾಷ್ಟ್ರಮಟ್ಟದ ಖ್ಯಾತಿಯ ಕಲಾವಿದರಾದ ಪಂಡಿತ್ ಮಲ್ಯಬನ್ ಚಟರ್ಜಿಯವರ ಶಾಸ್ತ್ರೀಯ ಗಾಯನ, ತದನಂತರ ಪಂಡಿತ್ ಆಶಿಶ್ ಸೇನ್ ಗುಪ್ತಾ ಇವರ ತಬ್ಲಾ ಸೋಲೋ ಕೊನೆಯ ಭಾಗದಲ್ಲಿ ಪಂಡಿತ್ ಪಾರ್ಥ ಬೋಸ್‌ರವರಿಂದ ಸಿತಾರ್ ವಾದನ ನಡೆಯಲಿದೆ. ಈ ಬಸಂತ್‌ಉತ್ಸವ್ ಕಾರ್ಯಕ್ರಮಕ್ಕೆ ಸಾರಂಗಿಯಲ್ಲಿ ಸರ್ಫ್ರಾಜ್ ಖಾನ್ ಮತ್ತು ತಬ್ಲಾದಲ್ಲಿ ಗುರುರಾಜ ಆಡುಕ್ಕಳ ರವರು ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ನರೇಂದ್ರ ಎಲ್. ನಾಯಕ್‌ರವರು ಕೋರಿದ್ದಾರೆ.

