ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಕೊಡಮಾಡುವ 2024ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಗೊಂಡಿದೆ. ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ – ಬೆಂಗಳೂರು ಇದರ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ಬ್ಯಾರಿ – ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರಾದ ಬೆಂಗಳೂರಿನ ಡಾ. ಮನ್ಸೂದ್ ಅಹ್ಮದ್ ಮುಲ್ಕಿ (ಬ್ಯಾರಿ ಭಾಷೆ ಮತ್ತು ಸಂಘಟನೆ), ಬ್ಯಾರಿ ಕವಿ ಮತ್ತು ಲೇಖಕ ಹೈದರ್ ಅಲಿ ಕಾಟಿಪಳ್ಳ (ಬ್ಯಾರಿ ಸಾಹಿತ್ಯ), ಹಿರಿಯ ಬ್ಯಾರಿ ಹಾಡುಗಾರ ಹಾಗೂ ಕವಿ ಪಿ. ಎಂ. ಹಸನಬ್ಬ ಮೂಡುಬಿದರೆ (ಬ್ಯಾರಿ ಸಂಸ್ಕೃತಿ ಮತ್ತು ಕಲೆ) ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬ್ಯಾರಿ ಅಕಾಡಮಿಯ ಮಾಜಿ ಸದಸ್ಯರಾದ ಟಿ. ಕೆ. ಶರೀಫ್, ಮುಹಮ್ಮದ್ ಶರೀಫ್ ನಿರ್ಮುಂಜೆ, ಹಂಝ ಮಲಾರ್, ಮರಿಯಮ್ ಇಸ್ಮಾಯಿಲ್ ಮತ್ತು ಲೇಖಕಿ ಶಮೀಮಾ ಕುತ್ತಾರ್ ಗೌರವ ಪ್ರಶಸ್ತಿಯ ಆಯ್ಕೆ ಸಮಿತಿಯಲ್ಲಿದ್ದು ಸಹಕರಿಸಿದ್ದಾರೆ. ಬ್ಯಾರಿ ಅಕಾಡಮಿಯ ಸ್ಥಾಯಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿತ್ತು. ಪ್ರಶಸ್ತಿಯು ಐವತ್ತು ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 10 ಆಗಸ್ಟ್ 2025ರಂದು ಮೈಸೂರಿನಲ್ಲಿ ನಡೆಯಲಿದೆ ಎಂದು ಅಕಾಡಮಿಯ ಅಧ್ಯಕ್ಷ ಉಮರ್ .ಯು. ಎಚ್. ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Previous Articleಪದ್ಮಗಿರಿ ಕಲಾ ಕುಟೀರಕ್ಕೆ ನೀರಿನ ಘಟಕ ಕೊಡುಗೆ
Next Article ಹಿರಿಯ ರಂಗನಟ ಚಿ. ರಮೇಶ್ ಕಲ್ಲಡ್ಕ ನಿಧನ