ಮಂಗಳೂರು : ಮಂಗಳೂರಿನ ಪುರಭವನದಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ದಿನಾಂಕ 14 ಫೆಬ್ರವರಿ 2025 ರಂದು ನಡೆದ 10 ಪುಸ್ತಕಗಳ ಲೋಕರ್ಪಣಾ ಕಾರ್ಯಕ್ರಮದಲ್ಲಿ ಕರುಣಾಕರ ಬಳ್ಕೂರು ಇವರ ಎರಡನೇಯ ಕೃತಿ ‘ಬೆಳಕು’ ಕವನ ಸಂಕಲನವನ್ನು ಅರೆಹೊಳೆ ಪ್ರತಿಷ್ಠಾನದ ರೂವಾರಿ ಶ್ರೀ ಅರೆಹೊಳೆ ಸದಾಶಿವ ರಾವ್ ಬಿಡುಗಡೆಗೊಳಿಸಿ ಮಾತನಾಡುತ್ತಾ “ಈ ಕವನ ಸಂಕಲನವು ಅರ್ಥಪೂರ್ಣವಾಗಿದೆ. ಕಾರಣ ತಂದೆ ತಾಯಿ ಮಕ್ಕಳನ್ನು ಬೆಳಕಾಗಿ ಮುನ್ನಡೆಸಬೇಕು ಎಂಬ ಪ್ರಜ್ಞೆಯನ್ನು ಈ ಕೃತಿ ನಮ್ಮಲ್ಲಿ ಮೂಡಿಸುತ್ತಾರೆ.
ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ಧಕಟ್ಟೆ ಬಂಟ್ವಾಳ ತಾಲೂಕು ಇಲ್ಲಿನ ಕನ್ನಡ ಉಪನ್ಯಾಸಕರಾದ ಸಂಜಯ ಬಿಳಿಕಿಕೊಪ್ಪ ಇವರು ‘ಬೆಳಕು’ ಕವನ ಸಂಕಲನವನ್ನು ಪರಿಚಯ ಮಾಡುತ್ತಾ “ಬೆಳಕು ಇರುವಂತದ್ದೇ. ಆದರೆ ಆ ಬೆಳಕು ಕೆಲವರಿಗೆ ಕತ್ತಲಾಗಬಹುದು ಮತ್ತು ಕೆಲವರಿಗೆ ಗುರುತಿಸಲಾಗದ ಸ್ಥಿತಿಯಲ್ಲಿ ಇರಬಹುದು. ಆ ಸಂದರ್ಭದಲ್ಲಿ ಬಳ್ಕೂರು ಬರೆದ ಕವನಗಳಲ್ಲಿ ಅರ್ಥೈಸಿಕೊಳ್ಳಬಹುದು ಎನ್ನುವುದು ಇಲ್ಲಿನ ಕವನಗಳ ಮೂಲಕ ತಿಳಿಯಪಡಿಸಿದ್ದಾರೆ. ಸಹೃದಯರಲ್ಲಿ ಇವರ ಕವನಗಳು ಬೆಳಕು ಮೂಡಿಸಲಿ ಎಂದು ಶುಭ ಹಾರೈಸುತ್ತೇನೆ. ಸಮಾಜದ ನಡುವೆ ಇರುವ ವಸ್ತುಗಳನ್ನು ಇಲ್ಲಿನ ಕವನಗಳಲ್ಲಿ ಬಳಸಿಕೊಳ್ಳುತ್ತ ಕೆಲವೊಂದು ವಿರೋಧ ಭಾಸವನ್ನು ಗುರುತಿಸಿದ್ದಾರೆ. ಸಮಕಾಲೀನತೆ, ಪ್ರಕೃತಿ, ರಮ್ಯತೆ, ವಿಶ್ವ ಸಂದೇಶ ಹೀಗೆ ಹಲವು ಅಂಶಗಳನ್ನು ಸರಳವಾಗಿ ತಮ್ಮ ಕವನಗಳಲ್ಲಿ ಗುರುತಿಸಿದ್ದಾರೆ .ಲೇಖಕರಾದ ಡಾ. ಬಿ. ಎ. ವಿವೇಕ್ ರೈ ಅವರು ಇದಕ್ಕೆ ಮುನ್ನುಡಿ ಬರೆದಿರುವುದು ವಿಶೇಷ” ಎಂದರು.
ವೇದಿಕೆಯಲ್ಲಿ ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ಶಶಿರಾಜ್ ರಾವ್ ಕಾವೂರ್, ‘ಬೆಳಕು’ ಸಂಕಲನದ ಲೇಖಕರಾದ ಕವಿ ಕರುಣಾಕರ ಬಳ್ಕೂರು , ಶಿಲ್ಪ ಕೆ. ಬಳ್ಕೂರು, ಅಥರ್ವ ಕೆ. ಬಳ್ಕೂರು, ಅದ್ವೈತ್ ಕೆ. ಬಳ್ಕೂರು ಉಪಸ್ಥಿತರಿದ್ಧರು. ಕೆನರಾ ಪದವಿ ಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ರಘು ಇಡ್ಕಿದು ಇವರು ಕಾರ್ಯಕ್ರಮ ನಿರೂಪಿಸಿದರು. ಗಾಯಕಿ ಪುಷ್ಪಲತಾ ಕಾರಂತ್ ಕೆಲವು ಕವನಗಳನ್ನು ಹಾಡಿದರು.
Subscribe to Updates
Get the latest creative news from FooBar about art, design and business.
Previous Articleಕುಶಾಲನಗರದಲ್ಲಿ ಕೊಡಗು ‘ಕಾವ್ಯ ಸಂಸ್ಕೃತಿ ಯಾನ’
Next Article ನಿರಂಜನ ಬದುಕಿನ ‘ನೂರರ’ ಅವಲೋಕನ