03 ಮಾರ್ಚ್ 2023, ಅಜೆಕಾರು/ಕಿನ್ನಿಗೋಳಿ: 13ನೇ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಮೂಲ್ಕಿ ಪುನರೂರಿನಲ್ಲಿ ಮಾರ್ಚ್ 05ರಂದು ಭಾನುವಾರ ಪ್ರಸಿದ್ಧ ಕಲಾವಿದ ಅರುವ ಕೊರಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಡಾ.ವೀರಪ್ಪ ಮೊಯಿಲಿ ಮತ್ತು ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರಿಗೆ ಜೀವಮಾನದ ಸಾಧನೆಗಾಗಿ ವಿಶ್ವ ತುಳುವ ರತ್ನ ಗೌರವ ನೀಡಲಾಗುತ್ತಿದೆ. ಮಾಧ್ಯಮ ಕ್ಷೇತ್ರದ ಸಾಧಕರಾದ ಯು.ಸತೀಶ ಪೈ ಮತ್ತು ಸಂಧ್ಯಾ ಎಸ್ ಪೈ ಅವರಿಗೆ ವಿಶ್ವ ದಂಪತಿ ಗೌರವ ಸಲ್ಲ ಲಿದೆ ಎಂದು ಸಂಘಟಕ ಅ.ಕ.ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಅಧ್ಯಕ್ಷ ಡಾ.ಶೇಖರ ಅಜೆಕಾರು ತಿಳಿಸಿದ್ದಾರೆ. ವಿವಿದೆಡೆಯ 25 ಮಕ್ಕಳು ಪ್ರತಿಭಾ ಪ್ರದರ್ಶನ ನೀಡಲಿದ್ದು ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಗುತ್ತಿದ್ದು ರಾಜ್ಯದ ವಿವಿಧ ಜಿಲ್ಲೆಗಳ 33 ಯುವ ಸಾಧಕರು ಭಾಗವಹಿಸುವರು.ಪಂಚ ಭಾಷಾ ಕವಯತ್ರಿ ಅರುಷ ಎನ್ ಶೆಟ್ಟಿ ಅವರು 60ಕ್ಕೂ ಕವಿಗಳು ಭಾಗವಹಿಸುವ ಗೋಷ್ಠಿಯ ಅಧ್ಯಕ್ಷತೆ ವಹಿಸುವರು.
ಕರ್ನಾಟಕ ಸಾಧನಾ ರತ್ನ ಗೌರವ 2023 ಕ್ಕೆ ಪಾತ್ರರಾಗುವ ವರ ವಿವರ:
ಶ್ರೀಹರಿ ನಾರಾಯಣ ಆಸ್ರಣ್ಣ ಕಟೀಲು- ಧಾರ್ಮಿಕ,
ಕೂರ್ಮಾ ರಾವ್ ಎಂ~ ಆಡಳಿತ ಸೇವೆ,
ಎರ್ಮಾಳ್ ರೋಹಿತ್ ಹೆಗ್ಡೆ- ಕಂಬುಲ,
ಕರ್ನಿರೆ ವಿಶ್ವನಾಥ ಶೆಟ್ಟಿ ಮುಂಬಯಿ- ಹೊರನಾಡಿ ನಲ್ಲಿ ತುಳುನಾಡ ಸೇವೆ,
ಪ್ರೊ.ಜಿ.ಆರ್ ರೈ- ಮಂಗಳೂರು- ಸಂಘಟನೆ,
ವಾಲ್ಟರ್ ನಂದಳಿಕೆ, ಮಂಗಳೂರು-ಮಾಧ್ಯಮ,
ಮೀನಾಕ್ಷಿ ಶ್ರೀಯಾನ್ ಮುಂಬಯಿ-ನೃತ್ಯ ಗುರು,
ಪ್ರದೀಪ್ ಬೇಕಲ್ ಕಾಸರಗೋಡು- ಮಾಧ್ಯಮ,
ಕೋಟ ಶ್ರೀನಿವಾಸ ಪೂಜಾರಿ-ಜನ ಪ್ರತಿನಿಧಿ,
ಅರವಿಂದ ಪೂಂಜಾ- ಉದ್ಯಮ,
ಡಾ.ವೈ, ಎನ್. ಶೆಟ್ಟಿ ಮೂಲ್ಕಿ-ವಿದ್ವತ್,
ಶ್ರೀಪತಿ ಭಟ್-ಮೂಡುಬಿದಿರೆ- ಉದ್ಯಮ,
ಕುಡುಮಲ್ಲಿಗೆ ಕೃಷ್ಣ ಶೆಟ್ಟಿ-ಕಾವೂರು-ಯಕ್ಷ ಜ್ಞಾನ
ಮೋನಪ್ಪ ಕರ್ಕೆರ ಪುತ್ತೂರು-ಕೃಷಿ,
ಕೆ. ಪ್ರಕಾಶ್ಚಂದ್ರ ಶೆಟ್ಟಿ-ಕಂಬದಕೋಣೆ -ಸಹಕಾರ,
ಡಾ.ಬಸವರಾಜ ಶೆಟ್ಟಿಗಾರ್ ಕೋಟೇಶ್ವರ -ವಾಸ್ತು,
ಜಿ.ಶ್ರೀಯಾನ್ -ಸ್ವಾಭಿಮಾನ,
ಬಾಹುಬಲಿ ಪ್ರಸಾದ್-ವಕೀಲರು,
ಕೆ.ವಿ.ರಮಣ್- ಕಲಾ ಸೇವೆ ,
ಡಾ.ನಾಗವೇಣಿ, ಮಂಚಿ ಬಂಟ್ವಾಳ- ಸಂಶೋಧನೆ,
ಡಾ.ಜ್ಯೋತಿ ಚೇಳೈರು- ಸಂಶೋಧನೆ.
ಕರ್ನಾಟಕ ಸಂಘ ರತ್ನ ಗೌರವಕ್ಕೆ
ಕನ್ನಡ ವಿಭಾಗ-ಮುಂಬಯಿ ವಿಶ್ವವಿದ್ಯಾಲಯ
ಪೆರ್ಡೂರು ಮೇಳ
ಯುವವಾಹಿನಿ ಮಂಗಳೂರು
ಜೇಸೀಸ್ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ- ಕಾರ್ಕಳ
ತುಳುನಾಡ ರಕ್ಷಣಾ ವೇದಿಕೆ
ಕಾರ್ಯನಿರತ ಪತ್ರಕರ್ತರ ಸಂಘ-ದ.ಕ.
ಮಲೆಕುಡಿಯ ಸಂಘ-ಉಡುಪಿ ಜಿಲ್ಲೆ
ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ –
ಸಂದೇಶ ಪ್ರತಿಷ್ಠಾನ ಮಂಗಳೂರು
ಶ್ರೀ ರಮಾನಾಥ ಸಭಾಭವನ ಟ್ರಸ್ಟ್(ರಿ)
ಸಂಸ್ಥೆಗಳಿಗೆ ನೀಡಲಾಗುತ್ತದೆ.
ಅರುವ ಕೊರಗಪ್ಪ ಶೆಟ್ಟಿ
ಸಮ್ಮೇಳನ ಅಧ್ಯಕ್ಷರು, ಹಿರಿಯ ಯಕ್ಷಗಾನ ಕಲಾವಿದರು
ಶೇಖರ್ ಅಜೆಕಾರ್
ಸಮ್ಮೇಳನ ಸಂಯೋಜಕರು, ರಾಜ್ಯಾಧ್ಯಕ್ಷ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ