ಮಡಿಕೇರಿ : ಕನ್ನಡಸಿರಿ ಸ್ನೇಹ ಬಳಗ ಕೊಡಗು ಜಿಲ್ಲೆ ಇದರ ವತಿಯಿಂದ ಲೇಖಕ ಹೇಮಂತ್ ಪಾರೇರರವರ ‘ಬೆಳ್ಳಿಗೆಜ್ಜೆ’ ಕವನ ಸಂಕಲನ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ದಿನಾಂಕ 15 ಜುಲೈ 2025ರಂದು ಸಂಜೆ 4-00 ಗಂಟೆಗೆ ಸೋಮವಾರಪೇಟೆಯ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಲೋಕೇಶ್ ಸಾಗರ್ ಬಿ.ಎಸ್. ಇವರು ವಹಿಸಲಿದ್ದು, ಶ್ರೀಕ್ಷೇತ್ರ ಮಂಜುನಾಥ ದೇವಾಲಯದ ಶ್ರೀಶ್ರೀ ರಾಜೇಶನಾಥ್ ಗುರೂಜಿ ಇವರು ಉದ್ಘಾಟನೆ ಮಾಡಲಿದ್ದಾರೆ. ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಇವರು ಕೃತಿ ಬಿಡುಗಡೆಗೊಳಿಸಲಿದ್ದು, ಕಲಾವಿದರಾದ ಶ್ರೀಮತಿ ಮಿಲನ ಭರತ್ ಇವರು ಕೃತಿ ಪರಿಚಯ ಮಾಡಲಿದ್ದಾರೆ.