16 ಮಾರ್ಚ್ 2023, ಬೆಂಗಳೂರು: ನಾಗರೀಕತೆಯ ಹುಟ್ಟಿನಿಂದಲೂ ಕಾಲ ಒಡ್ಡುತ್ತಿರುವ ವಿವಿಧ ಸವಾಲುಗಳಿಗೆ ಮನುಷ್ಯ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತಲೇ ಬರುತ್ತಿದ್ದಾನೆ. ಅಂತೆಯೇ ಜಗತ್ತು ಈಗಿನ ಸಂಕಷ್ಟ ಪರಿಸ್ಥಿತಿಯನ್ನು ಮೆಟ್ಟಿ ನಿಂತು ಮರುಹುಟ್ಟು ಪಡೆಯುತ್ತಿರುವ ಈ ಕಾಲಘಟ್ಟ, ದೃಶ್ಯ ತಂಡಕ್ಕೂ ಹೊಸ ಹುಟ್ಟೇ ಸರಿ.
ದೃಶ್ಯ ರಂಗತಂಡ: ರಂಗಭೂಮಿಯ ಸಾಧ್ಯತೆಗಳನ್ನರಿತ ಸಮಾನ ಮನಸ್ಕರು ಸೇರಿ, ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮತ್ತು ಪ್ರಾದೇಶಿಕ ಸಂಸ್ಕೃತಿಗಳ ಉಳಿವು ಮತ್ತು ಬೆಳೆವುಗಳನ್ನು ಮುಖ್ಯ ಗುರಿಯಾಗಿಸಿಕೊಂಡು ಆರಂಭಿಸಿದ ತಂಡ ‘ದೃಶ್ಯ’. ಮುಖ್ಯವಾಗಿ ವಿದ್ಯಾರ್ಥಿ, ಯುವಜನರನ್ನು ಗಮನದಲ್ಲಿಟ್ಟುಕೊಂಡು ರೂಪಿತವಾದ ರಂಗತಂಡ ದೃಶ್ಯ, ಸ್ವಾವಲಂಬಿ ಬದುಕಿನ ಇರವು ಮತ್ತು ಬಲಿದಿನ ಏವೇಕವನ್ನು ರಂಗಭೂಮಿಯ ಲೋಕದೃಷ್ಟಿಯಿಂದ ಪಡೆದುಕೊಳ್ಳುವ ಹಂಬಲದಿಂದ ಕಳೆದ 17 ವರ್ಷಗಂದ ಈ ತಂಡ ಹಲವಾರು ರಂಗ ಚಟುವಟಕಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ವಿದ್ಯಾರ್ಥಿಗಳು ಹಾಗೂ ಪರಿಣಿತ ರಂಗನಟ, ನಟಿಯರನ್ನು ಒಟ್ಟಿಗೆ ಸೇರಿಸುತ್ತ, ಹಲವು ರಂಗಶಿಜರಗಳನ್ನು ನಡೆಸುತ್ತ, ಹಲವು ಪ್ರದರ್ಶನಗಳನ್ನು ಸಂಘಟಿಸುತ್ತ ಬಂದ ತಂಡವು ಇದುವರೆಗೂ 25ಕ್ಕೂ ಹೆಚ್ಚು ನಾಟಕಗಳನ್ನು ಸಿದ್ಧಪಡಿಸಿದೆ.
ಟ್ವೆಲ್ಫ್ತ್ ನೈಟ್, ದೇವರ ಹೆಸರಲ್ಲ, ಸ್ಪಷ್ಟವಾಸವದತ್ತ, ಮರುಗಡಲು, ಪೆಟಸ್, ಪೇಯಿಂಗ್ ಗೆಸ್ಟ್, ವರ್ಷಗೀತೆ, ಸಮಾನತೆ, ನಾನು ಮತ್ತು ಹೆಣ್ಣು, ಪುಣ್ಯಕೋಟಿ, ಬಸ್ತಿ, ಚಾಳೇಶ, ಕಂಪು ಕಣಗಿಲೆ, ಕಂಜ್ಜ ಸೇವೆ, ಅಗ್ನಿವರ್ಣ, ರಕ್ತವರ್ಣಿ, ಅಭಿಯಾನ, ಹಾನೂಶ್, ಪ್ರತಿಜ್ಞಾಯೌಗಂಧರಾಯಣ, ವಿದಿಶೇಯ ವಿದೂಷಕ, ಧಾಣಾ-ಡಂಗುರ, ರಕ್ತ-ಧ್ವಜ ಇವು ತಂಡದ ಪ್ರಮುಖ ಪ್ರಯೋಗಗಳಾಗಿವೆ. ದೃಶ್ಯ, ರಂಗಪ್ರದರ್ಶನಗಳನ್ನು ಕರ್ನಾಟಕದಲ್ಲಷ್ಟೇ ಅಲ್ಲದೇ ದೂರದ ತ್ರಿಪುರ, ಮುಂಬೈ, ದಿಲ್ಲಿ, ಉತ್ತರ ಪ್ರದೇಶಗಳಲ್ಲೂ ಪ್ರದರ್ಶನ ನೀಡಿ ಯಶಸ್ವಿಯಾಗಿದೆ. ನಾಟಕ ಕಟ್ಟುವುದು ಬದುಕು ಕಟ್ಟುವ ಕಲೆಯ ಮುಂಚಾಚು ಅಂತಲೇ ಪರಿಭಾವಿಸುವ ನಾವು ಸಾಹಿತ್ಯ, ಸಂಸ್ಕೃತಿಯ ಹಲವು ಸಂಗತಿಗಳನ್ನು ರಂಗಬದುಕಿನೊಳಗೆ ಒಳಗೊಳ್ಳುತ್ತಲೇ ಬಂದಿದ್ದೇವೆ.
ಮಾರ್ಚ್ 17ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ “ದೃಶ್ಯ ನಾಟಕೋತ್ಸವ 2023” ರಂಗೋತ್ಸವವನ್ನು ದೃಶ್ಯ ರಂಗ ತಂಡವು ಆಯೋಜಿಸುತ್ತಿದ್ದು, ಹಿರಿಯ ಲೇಖಕರಾದ ಡಾ. ವಿಜಯರವರಿಂದ ಉದ್ಘಾಟಿಸಲ್ಪಡುವ ನಾಟಕೋತ್ಸವವು “ದೃಶ್ಯ ರಂಗಸ್ವರ”, ರಂಗ ಸಂಗೀತ ಕಾರ್ಯಕ್ರಮದಿಂದ ಪ್ರಾರಂಭವಾಗಿ, “ರಂಗ ಗೌರವ” ಕಾರ್ಯಕ್ರಮದ ಮುಖೇನ ರಂಗಸಾಧಕರನ್ನು ಸನ್ಮಾನಿಸಿ, ತದನಂತರ ವಿಲಿಯಂ ಶೇಕ್‌ಸ್ಪಿಯರ್‌ನ “ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್” ನಾಟಕದೊಂದಿಗೆ ಮುಕ್ತಾಯಗೊಳ್ಳುತ್ತದೆ.
ಉತ್ಸವ: ದೃಶ್ಯ ನಾಟಕೋತ್ಸವ 2023
ಉದ್ಘಾಟನೆ: ಡಾ. ವಿಜಯ, ಹಿರಿಯ ಲೇಖಕರು
ಕಾರ್ಯಕ್ರಮಗಳು: ದೃಶ್ಯ ರಂಗಸ್ವರ, ರಂಗ ಗೌರವ, ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್ ನಾಟಕ
ಅತಿಥಿಗಳು: ಡಾ ಬಿ ವಿ ರಾಜಾರಾಮ್, ಶ್ರೀ ಶ್ರೀನಿವಾಸ ಜಿ ಕಪ್ಪಣ್ಣ, ಶ್ರೀ ಟಿ ಜಿ ನರಸಿಂಹ ಮೂರ್ತಿ
ರಂಗ ಗೌರವ: ಶ್ರೀ ಕೆ ಆರ್ ಶ್ರೀನಿವಾಸ್, ಶ್ರೀಮತಿ ಮಾಲತಿ ಸುಧೀರ್, ಶ್ರೀ ಚನ್ನಬಸಯ್ಯಗುಬ್ಬಿ
ಸ್ಥಳ: ರವೀಂದ್ರ ಕಲಾಕ್ಷೇತ್ರ, ಬೆಂಗಳೂರು
ಸಮಯ: ಸಂಜೆ 6:೦೦ಕ್ಕೆ
ದಿನಾಂಕ: 17-03-2023
ನಿರ್ದೇಶಕರ ಬಗ್ಗೆ: 2013-2014ನೇ ಸಾಲನ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಶಸ್ತಿ ಪಡೆದಿರುವ ದಾಕ್ಷಾಯಿಣಿ ಭಟ್ ರವರು ನೀನಾಸಂನಲ್ಲಿ ಪದವಿ ಪಡೆದು, ಹಲವು ವರ್ಷಗಳಿಂದ ರಂಗಭೂಮಿಯನ್ನು ಉಸಿರಾಗಿಸಿಕೊಂಡು, ನಿರಂತರ ಹೊಸ ಪ್ರಯೋಗಕ್ಕೆ ಹಾತೊರೆಯುತ್ತಾ, ರಂಗಭೂಮಿಗೆ ಒಡ್ಡಿಕೊಂಡಿದ್ದಾರೆ. ಗುಣಮುಖ, ಮಿಡ್‌ಸಮ್ಮರ್ ನೈಟ್ಸ್ ಡ್ರಿಮ್, ಸ್ವಪ್ನವಾಸವದತ್ತ, ಪೇಯಿಂಗ್ ಗೆಸ್ಟ್, ಪಂಪನಿಗೆ ಬಿದ್ದ ಕನಸುಗಳು, ಕೊಳ್ಳಿ ಅಮ್ರಪಾಲಿ, ಸ್ಮಶಾನ ಕುರುಕ್ಷೇತ್ರಂ, ಸಾಹೇಬರು ಬರುತ್ತಾರೆ, ನನಗ್ಯಾಕೋ ಡೌಟು, ಹಕ್ಕಿ ಹಾಡು, ಪಂಜರ ಶಾಲೆ, 15 ಕಥೆ, ಧೂತ ಫಟೋತ್ಕಚ, ಗಂಧವಲ್ಲ, ಸಂಸಾರದಲ್ಲಿ ಸನಿದಪ ಹೀಗೆ ಹಲವಾರು ನಾಟಕಗಳನ್ನು ನಿರ್ದೆಶಿಸಿ ಯಶಸ್ವಿ ಪ್ರದರ್ಶನ ನೀಡುವುದರೊಂದಿಗೆ ರಂಗಭೂಮಿಯಲ್ಲಿ ತನ್ನದೇ ಆದ ನಿಲುವನ್ನು ಹೊಂದಿರುವರು. ಮನಸ್ಸಿಗೆ ವೇದ್ಯವಾದ ಸಂಗತಿಗಳು, ದಕ್ಕುವ ಅನುಭವಗಳ ಜೊತೆ, ನಾಟಕ-ಕೃತಿಯನ್ನು ಸಂಸ್ಕೃತಿ ಮತ್ತು ಬದುಕನ್ನು ಬಿಂಬಿಸುವ ರಂಗಕೃತಿಯನ್ನಾಗಿಸುವುದು ಇವರ ವೈಶಿಷ್ಟ್ಯತೆ.
ವಿಲಿಯಮ್ ಶೇಕ್ಸ್‌ಪಿಯರ್ ಭಾರತದಲ್ಲಿ ಹೇಗೆ ಕಾಳದಾಸನು ಕವಿ ಶ್ರೇಷ್ಠನೋ, ಹಾಗೆ ಆಂಗ್ಲಭಾಷೆಗೆ ಶೇಕ್ಸ್‌ಪಿಯರ್/ 16ನೇ ಶತಮಾನದ ಆಂಗ್ಲ ಭಾಷೆಯು ತನ್ನ ಇಂದಿನ ರೂಪ ಪಡೆಯುವುದರಲ್ಲಿ ಈ ನಾಟಕಕಾರನ ಪಾಲು ಅಗಣಿತ. ಸರ್ವ ರಸಕ್ಕೂ ಒಗ್ಗುವ ಕೃತಿಗಳನ್ನು ಬರೆದ ಈತನ ಕವಿತೆಗಳನ್ನು ನಾಟಕಗಳನ್ನು ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಅನುವಾದ ರೂಪಾಂತರಗಳ ಮೂಲಕ ಪ್ರಯೋಗಿಸಲಾಗಿದೆ. ಅತಿ ಹೆಚ್ಚು ಪ್ರಯೋಗಗಳನ್ನು ಕಂಡಿರುವ ಕೃತಿಗಳ ಕರ್ತೃ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಈ ಆಂಗ್ಲ ನಾಟಕಕಾರನು, ರಾಷ್ಟ್ರಕವಿಯು ಇಂದಿಗೂ ಕೂಡ ರಂಗ ಜಗತ್ತಿನ ಅತಿ ಎತ್ತರದ ಆಧಾರ ಸ್ಥಂಭಗಳಲ್ಲಿ ಸರ್ವ ಪ್ರಮುಖರಲ್ಲಿ, ಅತಿ ಪ್ರಸಿದ್ಧ ನಾಟಕಕಾರರಲ್ಲಿ ಒಬ್ಬ. 1564ರಲ್ಲಿ ಇಂಗ್ಲಾಂಡಿನ ಸ್ಟ್ಯಾನ್‌ಫರ್ಡ್ ಅಪಾನ್ ಅವನ್ ನಲ್ಲಿ ಜನಿಸಿದ ‘ದಿ ಬಾರ್ಡ್ ಆಫ್ ಅವನ್’, 1589-1616ರ ಮಧ್ಯೆ ಲಂಡನ್ನಿನ ಪ್ರಖ್ಯಾತ “ಲಾರ್ಡ್ ಚೇಂಬರ್ಲೇನ್ಸ್ ಮೆನ್’ ಎಂಬ ರಂಗಸಂಸ್ಥೆಯ ಮೂಲಕ ತನ್ನ ಯಶಸ್ವಿ ರಂಗವೃತ್ತಿಯನ್ನು ಪ್ರಾರಂಭಿಸಿ ಅದರ ಪಾಲುದಾರಲ್ಲ ಒಬ್ಬರಾಗುವ ಮೂಲಕ ತನ್ನ ಮುಖ್ಯ ಕೃತಿಗಳನ್ನು ಬರೆದು ಪ್ರಖ್ಯಾತಿ ಪಡೆದರು.
ಮೊದಮೊದಲಿಗೆ ‘ದಿ ಟೇಮಿಂಗ್ ಆಫ್ ದಿ ಶ್ರೂ’, ‘ದಿ ಮೆರ್ಚೆಂಟ್ ಆಫ್ ವೆನಿಸ್’, ‘ರಿಚರ್ಡ್ ದಿ ತರ್ಡ್’, ‘ಹೆನ್ರಿ ದಿ 4’, ‘ಹೆನ್ರಿ ದಿ 5’, ‘ಹೆನ್ರಿ ದಿ 6’, ‘ಜೂಲಿಯಸ್ ಸೀಸರ್’, ‘ಕಿಂಗ್ ಲಿಯರ್’, ‘ಮ್ಯಾಕ್ಬೆತ್’, ‘ಹ್ಯಾಮ್ಲೆಟ್’, ‘ರೋಮಿಯೋ ಜೂಲಿಯಿಟ್’, ‘ಒಥೆಲೋ’, ‘ಲವ್ಸ್ ಲೇಬರ್ ಲಾಸ್ಟ್’ ಇತ್ಯಾದಿ ನಾಟಕಗಳನ್ನು ಸೇರಿ 10 ನಾಟಕಗಳನ್ನು ಬರೆದನು, ಕೇವಲ ನಾಟಕಗಳಲ್ಲದೇ ‘ಶೇಕ್ಸ್‌ಪಿಯರ್ ಸಾನೆಟ್ಸ್ ‘ದಿ ಪ್ಯಾಶನೆಟ್ ಪಿಲಿಗ್ರಿಮ್’, ‘ಟು ದಿ ಕ್ಲೀನ್’, ಇತ್ಯಾದಿ ಕವಿತೆಗಳನ್ನು (ಸಾನೆಟ್) ಮಹಾಕಾವ್ಯಗಳನ್ನು ಬರೆದಿದ್ದಾನೆ. ನಾವು ಇವನ ಪ್ರಖ್ಯಾತ ಹಾಸ್ಯ ನಾಟಕಗಳಲ್ಲಿ ಒಂದಾದ “ಎ ಮಿಡ್ಲಮ್ಮರ್ ನೈಟ್ಸ್ ಕ್ರೀಮ್’ ನಾಟಕದ ಪ್ರೊ ಕೆ. ಎಸ್. ನಿಸಾರ್ ಅಹಮದ್‌ರವರ ಕನ್ನಡ ಅವತರಣಿಕೆಯನ್ನು ಪ್ರಯೋಗಿಸುತ್ತಿದ್ದೇವೆ.
ಪ್ರೊ. ಕೆ ಎಸ್ ನಿಸಾರ್ ಅಹಮದ್: ‘ನಿತ್ಯೋತ್ಸವ ಕವಿ’ ಎಂದೇ ಪ್ರಸಿದ್ಧರಾದ ನಿಸಾರ್ ಅಹಮದ್ ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ. 1974ರಲ್ಲಿ ಪ್ರಕಟವಾದ ‘ನಿತ್ಯೋತ್ಸವ’ ಕವನ ಸಂಕಲನ, ನಿಸಾರ್ ಅವರಿಗೆ ಬಹಳ ಜನಪ್ರಿಯತೆ ತಂದು ಕೊಟ್ಟದೆ. ಇಂದು ಕೂಡ ಕನ್ನಡದ ಹಬ್ಬ ಎಲ್ಲೇ ನಡೆದರು ನಿತ್ಯೋತ್ಸವ ಕವಿತೆಯ ಗಾಯನವಿಲ್ಲದೆ ಅದು ಅಪೂರ್ಣ. ನಿಸಾರರ ಅನೇಕ ಕಂತೆಗಳು ಸುಗಮ ಸಂಗೀತದ ಧ್ವನಿ ಸುರುಗಳ ಮೂಲಕ ಕನ್ನಡಿಗರನ್ನು ತಲುಪಿವೆ, ಜನಪ್ರಿಯತೆ ಗಳಿಸಿರುವ ‘ಸುಮಧುರ’ ಮತ್ತು ‘ನವೋಲ್ಲಾಸ’ ಕನ್ನಡದ ಮೊದಲ ನೋಡಿ ಧ್ವನಿ ಸುರುಳಿಗಳು, ಈವರೆಗೆ ಅವರ ಕವನಗಳ ಏಳು ಧ್ವನಿ ಸುರುಳಿಗಳು ಬಿಡುಗಡೆಗೊಂಡಿವೆ.