ಬೆಂಗಳೂರು : ಲೇಖಕ ಆಂಟನ್ ಚೇಖೋವ್ ಇವರ ‘ವಾರ್ಡ್ ನಂ.06’ ನಾಟಕದ ಕನ್ನಡ ಅನುವಾದ ‘ಕತ್ತಲೆ ದಾರಿ ದೂರ’ ನಾಟಕವನ್ನು ಬ್ಯಾಂಗ್ಲೋರ್ ಪ್ಲೇಯರ್ಸ್ ದಿನಾಂಕ 19-08-2023ರಂದು ಬೆಂಗಳೂರಿನ ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ಪ್ರಸ್ತುತಪಡಿಸಲಿದ್ದಾರೆ. ಡಿ.ಆರ್.ನಾಗರಾಜ್ ಕನ್ನಡಕ್ಕೆ ಅನುವಾದಿಸಿರುವ ಈ ನಾಟಕ ನಿರ್ದೇಶನ ಶ್ರೀ ನಿಧಿ ಬಿ.ಎಸ್ ಅವರದ್ದು.
ನಾಟಕದ ಬಗ್ಗೆ :
ಕತ್ತೆಲೆ ದಾರಿ ದೂರ ಕನ್ನಡ ನಾಟಕರಂಗದಲ್ಲಿ ಅದರದ್ದೆ ಆದ ದೂರದ ದಾರಿಯನ್ನು ಹುಡುಕಿಕೊಂಡು ತನ್ನದೇ ಛಾಪನ್ನು ಮೂಡಿಸಿದೆ.
ಈ ಕೃತಿಯು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಮನಸುಗಳ ನಡುವೆ ನಡೆಯುವ ಒಂದು ಕಥೆ. ಭ್ರಷ್ಟ ಅಧಿಕಾರಿಯು ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುವುದು ಈ ನಾಟಕದಲ್ಲಿ ಸ್ಪಷ್ಟವಾಗುತ್ತದೆ.
ಆಂಟನ್ ಚೇಖೋವ್ ಪ್ರಕಾರ ‘ಒಬ್ಬ ಪಾತ್ರಧಾರಿಯ ಕರ್ತವ್ಯ ಪ್ರಶ್ನೆಗಳನ್ನು ಹುಡುಕುವುದೇ ಹೊರತು ಉತ್ತರಗಳನ್ನು ಹುಡುಕುವುದಲ್ಲ.
ಡಿ.ಆರ್.ನಾಗರಾಜ್‌ರವರು ಓದುಗರನ್ನು ಕತ್ತಲೆ ದಾರಿ ದೂರ ಮೂಲಕ ಸಂಕೀರ್ಣ ಪ್ರಶ್ನೆಗಳ ಬಳಿ ಕರೆದೊಯ್ಯುತ್ತಾರೆ.
ಇದರಲ್ಲಿ ಬರುವ ಮುಖ್ಯ ಪಾತ್ರಧಾರಿಗಳು ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಾಂಕೇತಿಕ ಪ್ರತಿನಿಧಿಗಳಾಗಿ ಅವ್ಯವಸ್ಥೆಯ ವಿರುದ್ಧ ದನಿ ಎತ್ತುವ ಮೂಲಕ ಯಶಸ್ವಿಯಾಗುವುದು ನಿಜವಾದ ಸ್ವಾತಂತ್ರ್ಯದ ಅರ್ಥ ಎನ್ನುತ್ತಾರೆ.