ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಸ್ಕ್ರತಿ ಪ್ರತಿಷ್ಠಾನ ಬೆಂಗಳೂರು ಆರ್ಟ್ ಪೌಂಡೇಶನ್ ಮತ್ತು ಮಿಂಚುಳ್ಳಿ ಸಾಹಿತ್ಯ ಪತ್ರಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಕಾಡುವ ಕಿರಂ ಕಾರ್ಯಕ್ರಮವು ದಿನಾಂಕ 07-08-2023ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಅಗ್ರಹಾರ ಕೃಷ್ಣಮೂರ್ತಿಯವರು “ಕೀ.ರಂ ನಿಜವಾದ ನಾಡೋಜರಾಗಿದ್ದರು. ಅವರು ಸಾಹಿತ್ಯದ ಜೊತೆ ಇತರ ಶಿಸ್ತುಗಳನ್ನು ಮೇಳೈಸಿ ಆನಂದಿಸುವುದನ್ನು ವಿದ್ಯಾರ್ಥಿಗಳಿಗೆ ಹೇಳಿ ಕೊಡುತ್ತಿದ್ದರು” ಎಂದರು. ಹಿರಿಯ ಸಾಹಿತಿ ಪ್ರೋ.ಎಚ್.ಎಸ್.ಶಿವಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. 2023ನೇ ಸಾಲಿನ ಕಿರಂ ನಾಗರಾಜ ಪ್ರಶಸ್ತಿಯನ್ನು ಹಿರಿಯ ವಿಚಾರವಾದಿಗಳಾದ ಪ್ರೊ. ನರೇಂದ್ರ ನಾಯಕ್, ಹಿರಿಯ ಚಿತ್ರಕಲಾವಿದರಾದ ಸಿ.ಎಸ್.ನಿರ್ಮಲಕುಮಾರಿ, ಹಿರಿಯ ಸಾಹಿತಿಗಳಾದ ಸುಬ್ಬು ಹೊಲೆಯಾರ್, ಆರ್.ಜಿ.ಹಳ್ಳಿ ನಾಗರಾಜ, ನಾಗತಿಹಳ್ಳಿ ರಮೇಶ್ ಮತ್ತು ಸಾಹಿತ್ಯ ಪರಿಚಾರಕರಾದ ಡಾ.ನಾಗೇಶ್ ದಸೂಡಿ ಇವರುಗಳಿಗೆ ಪ್ರದಾನ ಮಾಡಲಾಯಿತು.
ಶಂಕರ ಸಿಹಿಮೊಗೆ ಮತ್ತು ಸೂರ್ಯಕೀರ್ತಿ ಸಂಪಾದಕತ್ವದ ‘ಕಿ.ರಂ. ಹೊಸ ಕವಿತೆ-2023’ ಮತ್ತು ಇಂಗ್ಲಿಷ್ ಕೃತಿಯೊಂದನ್ನು ಹಿರಿಯ ಚಿತ್ರ ಕಲಾವಿದರಾದ ಎಂ.ಎಸ್.ಮೂರ್ತಿ ಬಿಡುಗಡೆಗೊಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ, ಉಪನ್ಯಾಸಕರಾದ ಕೆ.ಎಸ್.ಸಹನ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿಯಾದ ಡಾ.ಕೆ.ಎನ್.ಕವನ, ಉಪನ್ಯಾಸಕಿಯಾದ ಕೆ.ಎನ್.ಚಂದನ ಉಪಸ್ಥಿತರಿದ್ದರು.
ಡಾ.ಪ್ರದೀಪ್ ಮಾಲ್ಗುಡಿ ಪ್ರಸ್ತಾವನೆಗೈದು ಚಿತ್ರ ಕಲಾವಿದರುಗಳಾದ ಒ.ವೆಂಕಟೇಶ್ ಸ್ವಾಗತಿಸಿ ಡಾ.ರುದ್ರೇಶ ಅದರಂಗಿ ನಿರೂಪಿಸಿದರು.ಸಭಾ ಕಾರ್ಯಕ್ರಮದ ಬಳಿಕ ಚಮ್ಮಾರನ ಚಾಲೂಕಿ ಹೆಂಡತಿ ನಾಟಕ ಪ್ರದರ್ಶನವಾಯಿತು ಹಾಗೂ ಐದು ಅನುಸಂಧಾನಗಳಲ್ಲಿ ಕವಿಗೋಷ್ಠಿ ನಡೆಯಿತು.