ಬೆಂಗಳೂರು : ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಇವರ ಜಂಟಿ ಸಹಯೋಗದೊಂದಿಗೆ ‘ಬೆಂಗಳೂರು ಕಿರುನಾಟಕೋತ್ಸವ’ವನ್ನು ಆಯೋಜಿಸುತ್ತಿದ್ದು, ನಿರೂಪಣಾ ವಿಷಯ : ಸಮಗ್ರತೆ ಆಗಿರುತ್ತದೆ. ದಿನಾಂಕ 27 ಜೂನ್ 2025 ನೋಂದಾವಣೆಗಾಗಿ ಕೊನೆಯ ದಿನಾಂಕವಾಗಿದ್ದು, 29 ಜೂನ್ 2025ರಂದು ಪ್ರಾಥಮಿಕ ಹಂತದ ಸ್ಪರ್ಧೆ ಹಾಗೂ 12 ಜುಲೈ 2025ರಂದು ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9902590303 ಮತ್ತು 9686869676 ಸಂಖ್ಯೆಯನ್ನು ಸಂಪರ್ಕಿಸಿರಿ.
ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ನಾಟಕ, ಪ್ರೇಕ್ಷಕರ ಆಯ್ಕೆಯ ಅತ್ಯುತ್ತಮ ನಾಟಕ, ಸ್ವರಚಿತ ಅತ್ಯುತ್ತಮ ಕಥೆ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ವಿನ್ಯಾಸ, ಅತ್ಯುತ್ತಮ ನಿರ್ವಹಣೆ ಮತ್ತು ಅತ್ಯುತ್ತಮ ಭಿತ್ತಿ ಪತ್ರ ವಿನ್ಯಾಸ ಮುಂತಾದ ಪ್ರಶಸ್ತಿಗಳು ಈ ನಾಟಕೋತ್ಸವದಲ್ಲಿ ಪ್ರಕಟಗೊಳ್ಳಲಿವೆ.