ಬೆಂಗಳೂರು : ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳಾದ ರಂಗಚ೦ದಿರ ಮತ್ತು ರ೦ಗಮ೦ಡಲ-ಸಿವಗಂಗ ಟ್ರಸ್ಟ್, ಪ್ರಸ್ತುತ ಪಡಿಸುವ ರಂಗ ಜಂಗಮ ಸಿಜಿಕೆ -73 ರ ನೆನಪು ಕಾರ್ಯಕ್ರಮವು ದಿನಾಂಕ : 27-06-2023ರಂದು ಮಂಗಳವಾರ ಸಂಜೆ ಬೆಂಗಳೂರಿನ ಸಿವಗಂಗ ರಂಗಮಂದಿರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಬಿ.ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ರಾಜ್ಯಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯಯವರು ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ರಂಗ ಪೋಷಕರಾದ ಶ್ರೀಮತಿ ಜಯಲಕ್ಷ್ಮಿ, ರಂಗನಿರ್ದೇಶಕರು /ಸಾಹಿತಿಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾಮಣೆ, ನಾಟಕಕಾರರು/ ರಂಗನಿರ್ದೇಶಕರಾದ ಡಾ. ಬೇಲೂರು ರಘುನಂದನ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ. ಪ್ರಕಾಶಮೂರ್ತಿ, ಕಸಾಪ ಬೆಂಗಳೂರು, ಸಂಘ ಸಂಸ್ಥೆಗಳ ಪ್ರತಿನಿಧಿ ಡಾ. ಮಾಗಡಿ ಗಿರೀಶ್, ಕೆಂಗೇರಿ ಉಪನಗರ, ಭಗೀರಥ ಬಡಾವಣೆ ಡಾ. ದೀಪಕ್ ಬಿ.ವಿ. ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ರಂಗನಿರ್ದೇಶಕರಾದ ಶ್ರೀಮತಿ ನಿರ್ಮಲಾ ನಾದನ್ ಮತ್ತು ಬೆಳಕು ವಿನ್ಯಾಸಕರಾದ ಶ್ರೀ ರವಿಶಂಕರ್ ಎಸ್. ಇವರಿಗೆ ಸಿಜಿಕೆ ಯುವ ರ೦ಗ ಪುರಸ್ಕಾರ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯಲ್ಲಿ ಸೇವೆ ಮಾಡುತ್ತಲೇ ರ೦ಗ ದಾಖಲಿಕಾರಣವನ್ನೂ ಮಾಡುತ್ತಾ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಶ್ರೀ ಎಂ. ಬೋಬಣ್ಣ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಶ್ರೀ ಕೆ. ಲಿಂಗದೇವರು ಇವರಿಗೆ ರಂಗ ಸನ್ಮಾನ ನಡೆಯಲಿರುವುದು. ಈ ಕಾರ್ಯಕ್ರಮವನ್ನು ಚಿತ್ರಕಲಾವಿದರಾದ ಶ್ರೀ ಓ. ವೆಂಕಟೇಶ್ ನಿರೂಪಿಸಲಿರುವರು.
ಸಭಾ ಕಾರ್ಯಕ್ರಮದ ಬಳಿಕ ಕಾಜಾಣ ಅರ್ಪಿಸುವ ರಂಗ ರೂಪ ಡಾ. ಬೇಲೂರು ರಘುನಂದನ್, ಶ್ರೀ ಕೃಷ್ಣಮೂರ್ತಿ ಕವತ್ತಾರ್ ವಿನ್ಯಾಸ ಹಾಗೂ ನಿರ್ದೇಶಿಸಿದ ಬೆಂಗಳೂರಿನ ಹೆಸರಾಂತ ಬಾಲಕಲಾವಿದ ಮಾಸ್ಟರ್ ಗೋಕುಲ ಸಹೃದಯ ಅಭಿನಾಯಿಸುವ ರಂಗ ಪ್ರಯೋಗ ‘ಚಿಟ್ಟೆ’ ಎಂಬ ವಿಶೇಷ ಏಕವ್ಯಕ್ತಿ ಅಭಿನಯದ ಕನ್ನಡ ನಾಟಕದ 89ನೇ ಪ್ರದರ್ಶನ ನಡೆಯಲಿರುವುದು.