ಬೈಂದೂರು: ಸುರಭಿ ರಿ. ಬೈಂದೂರು, ರಂಗಸ್ಥಳ ಉಪ್ಪಂದ ಹಾಗೂ ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇವರ ಸಹಯೋಗದಲ್ಲಿ ಭಾವ ಕವಿ ಪ್ರಸಿದ್ಧ ಸಾಹಿತಿ ಡಾ. ಎಚ್.ಎಸ್.ವೆಂಕಟೇಶ್ ಮೂರ್ತಿ ಇವರಿಗೆ “ಭಾವ ನಮನ” ಕಾರ್ಯಕ್ರಮ ದಿನಾಂಕ 14 ಜೂನ್ 2025ರಂದು ಉಪ್ಪುಂದದ ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು “ರಂಗಸ್ಥಳ” ಉಪ್ಪಂದ ಇದರ ಅಧ್ಯಕ್ಷರಾದ ಯು. ಎಚ್. ರಾಜಾರಾಮ ಭಟ್ ವಹಿಸಿದ್ದು, ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ ಅಧ್ಯಕ್ಷರಾದ ಶ್ರೀ ಪ್ರಕಾಶ್ ಚಂದ್ರ ಶೆಟ್ಟಿ ಶುಭಶಂಸನೆಗೈದು, ಡಾ. ವೆಂಕಟೇಶ್ ಮೂರ್ತಿ ಇವರ ಸಾಹಿತ್ಯ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಚ್. ಎಸ್. ವಿ. ಯವರ ಕುರಿತು “ನುಡಿ ನಮನ” ಸಲ್ಲಿಸಿದ ಅಧ್ಯಾಪಕ ಸಂದೀಪ ದೇವಾಡಿಗ ಎಚ್.ಎಸ್.ವಿ ಅವರ ಬಗ್ಗೆ ನುಡಿ ನಮನದಲ್ಲಿ ಮಾತನಾಡುತ್ತಾ ಎಚ್.ಎಸ್.ವಿ ಯವರು “ಅಜರಾಮರ” ಎನ್ನುವ ಮಾತನ್ನು ಹೇಳಿದರು. ಆಶಯ ನುಡಿಗಳನ್ನಾಡಿದ ಬೈಂದೂರು ‘ಸುರಭಿ’ ಇದರ ಅಧ್ಯಕ್ಷರಾದ ಆನಂದ ಮದ್ದೋಡಿ ಕಾರ್ಯಕ್ರಮದ ಕುರಿತು ತಿಳಿಸಿದರು. ಶ್ರೀ ಸಂದೀಪ ದೇವಾಡಿಗ ಸ್ವಾಗತಿಸಿ, ಧನ್ಯವಾದವನ್ನು ‘ರಂಗಸ್ಥಳ ಉಪ್ಪಂದ’ ಇದರ ಕಾರ್ಯದರ್ಶಿಗಳಾದ ಶ್ರೀ ಗಣೇಶ್ ಉಪ್ಪುಂದ ನೆರವೇರಿಸಿದರು.
ಕಾರ್ಯಕ್ರಮದ ಮಧ್ಯದಲ್ಲಿ ಹಾಗೂ ಕೊನೆಯಲ್ಲಿ “ರಾರಾ ಮೆಲೋಡಿಸ್” ಉಪ್ಪುಂದ ಇದರ ಕಲಾವಿದರಾದ ಶ್ರೀ ರವಿ ಹೊಸ್ಕೋಟೆ, ಶ್ರೀಮತಿ ರಮ್ಯರವಿ ಹೊಸ್ಕೋಟೆ, ಶ್ರೀ ಚಂದ್ರ ಬಂಕೇಶ್ವರ ಇವರಿಂದ ಎಚ್.ಎಸ್.ವಿ ಅವರ ವಿವಿಧ ಆಯ್ದ ಭಾವಗೀತೆಗಳ ಗುಚ್ಛವನ್ನು ಪ್ರಸ್ತುತಪಡಿಸಿದ್ದರು.\

