ಬೆಂಗಳೂರು : ಸುಸ್ಥಿರ ಪ್ರತಿಷ್ಠಾನ ಬೆಂಗಳೂರು ಕಳೆದ ಮೂರು ವರ್ಷಗಳಿಂದ ಕಲೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಂಗ ತರಬೇತಿ, ವಿಚಾರ ಸಂಕಿರಣ, ನಾಟಕ ನಿರ್ಮಾಣ, ನಿರ್ದೇಶನ ಹಾಗೂ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ.
ಇದರ ಭಾಗವಾಗಿ ಪ್ರಸ್ತುತ ಭಾವ, ಸಂಚಾರಿ ಭಾವ ಹಾಗೂ ನವರಸಗಳ ಬಗೆಗಿನ ಒಂದು ವಾರದ ಭಾವ-ರಸ ವಿಶೇ಼ಷ ಶಿಬಿರವನ್ನು ಆಯೋಜಿಸುತ್ತಿದೆ.
ನಾಡಿನ ಹಿರಿಯ ರಂಗಭೂಮಿ ಮತ್ತು ಚಲನಚಿತ್ರ ನಿರ್ದೇಶಕರು ಹಾಗೂ ನಟನಾ ತರಬೇತುದಾರರಾಗಿರುವ ಜೋಸೆಫ್ ಜಾನ್ ಈ ಶಿಬಿರದ ನಿರ್ದೇಶಕರಾಗಿದ್ದು, ಭಾವ, ರಸಾಧಾರಿತ ವಿವಿಧ ಕೌಶಲ್ಯಗಳನ್ನು ಕಲಿಸಲಿದ್ದಾರೆ.
ಈ ಶಿಬಿರವು ದಿನಾಂಕ 22 ಡಿಸೆಂಬರ್ 2024ರಿಂದ 28 ಡಿಸೆಂಬರ್ 2024ರವರೆಗೆ ಸಂಜೆ ಘಂಟೆ 7.00ರಿಂದ 9.00ರ ವರೆಗೆ ‘ಶೃಂಗ’ ನಂ. 816, 3ನೇ ಮುಖ್ಯ ರಸ್ತೆ, (ತೆರಿಗೆ ಭವನದ ಎದುರು) 11 ನೇ ಬ್ಲಾಕ್ , ನಾಗರಭಾವಿ , ಬೆಂಗಳೂರು ಇಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9148250972, 9035553123, 9449074898 ಸಂಖ್ಯೆಗಳನ್ನು ಸಂಪರ್ಕಿಸಬಹುದು.
ಶಿಬಿರದ ಶುಲ್ಕ ಒಬ್ಬರಿಗೆ ರೂಪಾಯಿ 1,000/-

