ಬೆಂಗಳೂರು : ಸಮುದಾಯ ಬೆಂಗಳೂರು ಇವರು ಪ್ರಸ್ತುತ ಪಡಿಸುವ ಕೆ.ಆರ್. ಮೀರಾ ಇವರ ಮಲಯಾಳಂ ಕಥೆ ಆಧಾರಿತ ‘ಭಗವಂತನ ಮರಣ’ ನಾಟಕ ಪ್ರದರ್ಶನವನ್ನು ದಿನಾಂಕ 22 ಫೆಬ್ರವರಿ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮತ್ತು 26 ಫೆಬ್ರವರಿ 2026ರಂದು ಸಂಜೆ 7-30 ಗಂಟೆಗೆ ಬೆಂಗಳೂರಿನ ರಂಗ ಶಂಕರದಲ್ಲಿ ಆಯೋಜಿಸಲಾಗಿದೆ.
ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ಇವರ ರಂಗರೂಪ, ವಿನ್ಯಾಸ, ರಂಗಸಜ್ಜಿಕೆ, ಸಂಗೀತ ಮತ್ತು ನಿರ್ದೇಶನ ಹಾಗೂ ಪದ್ಮಾ ಶಿವಮೊಗ್ಗ ಇವರು ಸಹ ನಿರ್ದೇಶನ ಮಾಡಿರುತ್ತಾರೆ.

