ಬೆಂಗಳೂರು : ಬೆಂಗಳೂರಿನ ಭೈರವಿ ನಾಟ್ಯಶಾಲೆಯು ಪ್ರಸ್ತುತಪಡಿಸುವ “ಭೈರವಿ ನೃತ್ಯೋತ್ಸವ”ವು ದಿನಾಂಕ 26-11-2023ರ ಭಾನುವಾರದಂದು ಬೆಂಗಳೂರಿನ ಗೊಲ್ಲಹಳ್ಳಿಯ ಇಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕೆನರಾ ಗುರುಕುಲ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಲಿದೆ.
ಇದರ ಪ್ರಯುಕ್ತ ಯುವ ನೃತ್ಯ ವಿದ್ವಾಂಸರಾದ ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅವರೊಂದಿಗೆ “ನೃತ್ಯದಲ್ಲಿ ತಾಳಾವಧಾನ”ಎಂಬ ವಿಚಾರದ ಸಂವಾದ ನಡೆಯಲಿದೆ. ತದನಂತರ ಯುವ ಭರತನಾಟ್ಯ ಕಲಾವಿದೆ ಕು. ಮೇಘನಾ ಭಟ್ ಅವರಿಂದ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ನಡೆಯಲಿದೆ.