ಉಡುಪಿ : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ (ರಿ.) ಪೆರ್ಡೂರು ಇದರ ವತಿಯಿಂದ ಮತ್ಸ್ಯರಾಜ್ ಗ್ರೂಪ್ ಮಲ್ಪೆ ಇವರ ಸಹಯೋಗದಲ್ಲಿ ಶ್ರೀಮನ್ಮಹಾಶಿವರಾತ್ರಿಯ ಪಯುಕ್ತ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ‘ಆಹ್ವಾನಿತ ತಂಡಗಳ ಭಜನೆ ಸ್ಪರ್ಧೆ’ಯನ್ನು ದಿನಾಂಕ 10-03-2024ರಂದು ಪೂರ್ವಾಹ್ನ 9-00 ಗಂಟೆಗೆ ಉಡುಪಿ ಬನ್ನಂಜೆಯ ಶ್ರೀ ನಾರಾಯಣಗುರು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಉದ್ಘಾಟನಾ ಸಮಾರಂಭದ ನಂತರ ಶ್ರೀ ಭೈರವನಾಥೇಶ್ವರ ಸಂಗೀತ ಶಾಲಾ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಗಂಟೆ 9-30ರಿಂದ ಭಜನಾ ಸ್ಪರ್ಧೆಯು ಆರಂಭವಾಗಲಿದ್ದು, ಸಂಜೆ ಗಂಟೆ 5.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಭಜನಾ ಕ್ಷೇತ್ರದ ಹಿರಿಯ ಸಾಧಕರಾದ ಮಲ್ಪೆ ಶ್ರೀರಾಮ ಭಜನಾ ಮಂಡಲಿಯ ಮಾಲಕರಾದ ಶ್ರೀ ಸೋಮಪ್ಪ ಕುಂದರ್ ತೊಟ್ಟಂ ಮತ್ತು ಉಡುಪಿಯ ಕನ್ನರ್ಪಾಡಿ ಜಯ ದುರ್ಗೆ ಭಜನಾ ಮಂಡಳಿಯ ಶ್ರೀ ಕಾಳಪ್ಪ ಶೆಟ್ಟಿ ಕನ್ನರ್ಪಾಡಿ ಒಡ್ಡಾಡಿ ಮನೆ ಇವರುಗಳನ್ನು ಸನ್ಮಾನಿಸಲಾಗುವುದು.
ಈ ಭಜನಾ ಸ್ಪರ್ಧೆಯ ಬಹುಮಾನಗಳು : ಪ್ರಥಮ ರೂ.20,000/-, ದ್ವಿತೀಯ ರೂ.15,000/-, ತೃತೀಯ ರೂ.12,000/- ಮತ್ತು ಉತ್ತಮ ಹಾಡುಗಾರ, ಉತ್ತಮ ತಬಲಾ ವಾದಕ ಹಾಗೂ ಉತ್ತಮ ಹಾರ್ಮೋನಿಯಂ ವಾದಕ ಎಂಬ ವೈಯುಕ್ತಿಕ ಬಹುಮಾನಗಳಿವೆ.