ಕಟಪಾಡಿ : ವಿಶ್ವಕರ್ಮ ಒಕ್ಕೂಟ (ರಿ.) ಇದರ ವತಿಯಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ವಿಶ್ವಕರ್ಮ ಸಮುದಾಯದವರಿಗಾಗಿ ‘ಭಜನಾ ವೈಭವ 2025’ ಸಾಂಪ್ರದಾಯಿಕ ಭಜನಾ ಸ್ಪರ್ಧೆಯನ್ನು ದಿನಾಂಕ 22 ಜೂನ್ 2025ರಂದು ಬೆಳಗ್ಗೆ 8-30 ಗಂಟೆಗೆ ಕಟಪಾಡಿ ವೇಣುಗಿರಿಯ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ವಿಜೇತರಿಗೆ ಮತ್ತು ಶಿಸ್ತುಬದ್ಧ ತಂಡಕ್ಕೆ ವಿಶೇಷ ಬಹುಮಾನ ಹಾಗೂ ಭಾಗವಹಿಸುವ ಎಲ್ಲಾ ತಂಡಗಳಿಗೂ ಪ್ರಶಂಸಾ ಪತ್ರ ಹಾಗೂ ಸ್ಮರಣಿಕೆ ನೀಡಲಾಗುವುದು. ತಂಡವನ್ನು ನೋಂದಾಯಿಸಲು 10 ಜೂನ್ 2025 ಕೊನೆಯ ದಿನಾಂಕವಾಗಿರುತ್ತದೆ. ಹೆಚ್ಚಿನ ಮಾಹಿತಿ ಹಾಗೂ ತಂಡ ನೋಂದಾಯಿಸಲು 9845291301, 8277529269, 9880845643 ಮತ್ತು 9632287917 ಸಂಖ್ಯೆಯನ್ನು ಸಂಪರ್ಕಿಸಿರಿ.