ಬೆಂಗಳೂರು : ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರ, ರಾಷ್ಟ್ರೀಯ ನಾಟಕ ಶಾಲೆ ನವದೆಹಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ‘ಭಾರತ ರಂಗ ಮಹೋತ್ಸವ 2026 ಹಾಗೂ ರಂಗ ಪರಿಷೆ’ ದಿನಾಂಕ 01ರಿಂದ 06 ಫೆಬ್ರವರಿ 2026ರವರೆಗೆ ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ. ಮಳವಳ್ಳಿ ಸುಂದರಮ್ಮ ವೇದಿಕೆಯಲ್ಲಿ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮನೋತ್ಸವ ಸಂಭ್ರಮ ಕವಿಗೋಷ್ಠಿ, ಕರ್ನಾಟಕ ಲಲಿತಕಲಾ ಅಕಾಡೆಮಿ ವತಿಯಿಂದ ಪ್ರಸಿದ್ಧ ಕಲಾವಿದರ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ರಚನೆ ಪ್ರಾತ್ಯಕ್ಷಿಕೆ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ಯಕ್ಷಗಾನ ಪ್ರದರ್ಶನ, ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶನ ಕಲಾ ವಿಭಾಗದಲ್ಲಿ ಪ್ರತಿದಿನ ಬೆಳಿಗ್ಗೆ 10-30 ಗಂಟೆಗೆ ಭಾರತ ರಂಗ ಮಹೋತ್ಸವದ ನಾಟಕಗಳ ತಂಡಗಳೊಂದಿಗೆ ರಂಗ ಸಂವಾದ ನಡೆಯಲಿದೆ.
ದಿನಾಂಕ 01 ಫೆಬ್ರವರಿ 2026ರಂದು ಮಧ್ಯಾಹ್ನ 3-30 ಗಂಟೆಗೆ ‘ರಂಗ ಪರಿಷೆ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಡಾ. ಸಿದ್ಧಲಿಂಗಯ್ಯ ವೇದಿಕೆಯಲ್ಲಿ ನಡೆಯಲಿದ್ದು, ಮಾನ್ಯ ಶಾಸಕರಾದ ಆರ್. ಮುನಿರತ್ನ ಇವರು ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಮಾನ್ಯ ಉಪಾಧ್ಯಕ್ಷರಾದ ಜಿ.ಆರ್. ಪಾಟೀಲ್ ಉದ್ಘಾಟನೆ ಮಾಡಲಿದ್ದಾರೆ. ಸಂಜೆ 5-00 ಗಂಟೆಗೆ ‘ಭಾರತ ರಂಗ ಮಹೋತ್ಸವ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಶ್ರೀರಂಗ ವೇದಿಕೆಯಲ್ಲಿ ನಡೆಯಲಿದ್ದು, ಹಿರಿಯ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಹುಭಾಷಾ ಕಲಾವಿದ ಪ್ರಕಾಶ್ ರಾಜ್ ಇವರು ರಂಗ ಪರಿಷೆ ವಿಶೇಷ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಬೆಂಗಳೂರಿನ ಅಂತರಂಗ ಹವ್ಯಾಸಿ ನಾಟಕ ತಂಡ ಮತ್ತು ಮೈಸೂರಿನ ಕದಂಬ ರಂಗ ವೇದಿಕೆ (ರಿ.) ಇವರಿಗೆ ರಂಗ ಗೌರವ, ನಾಟ್ಯ ಭೈರವಿ ಕಲಾ ಕುಟೀರದ ವಿದುಷಿ ಮಂಜು ಭೈರವಿ ಎಲ್. ಇವರಿಂದ ಭರತನಾಟ್ಯ ಪ್ರದರ್ಶನ, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆ ವಿದ್ಯಾರ್ಥಿಗಳಿಂದ ನಾಡಗೀತೆ, ಪ್ರಯೋಗ ರಂಗ, ವಿಜಯನಗರ ಬಿಂಬ, ಪ್ರವರ ಥಿಯೇಟರ್ ತರಂಗ, ನೆನಪು ತಂಡದವರಿಂದ ರಂಗಗೀತೆಗಳ ಗಾಯನ ಪ್ರಸ್ತುತಿ ಇದೆ. ನವದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ತಂಡದವರಿಂದ ರಾಜೇಶ್ ಸಿಂಗ್ ಇವರ ನಿರ್ದೇಶನದಲ್ಲಿ ‘ಬಾಬೂಜಿ’ ಹಾಗೂ ಡಾ. ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಸಂಜೆ 7-00 ಗಂಟೆಗೆ ನಿರ್ದಿಗಂತ ಪ್ರಸ್ತುತ ಪಡಿಸುವ ಶಕೀಲ್ ಅಹಮದ್ ಇವರ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಕೊಡಲ್ಲ ಅಂದ್ರ ಕೊಡಲ್ಲ’ ನಾಟಕ ಪ್ರದರ್ಶನಗೊಳ್ಳಲಿದೆ.
ದಿನಾಂಕ 02 ಫೆಬ್ರವರಿ 2026ರಂದು ಸಂಜೆ 5-30 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ನಡೆಯುವ ‘ಭಾರತ ರಂಗ ಮಹೋತ್ಸವ’ದಲ್ಲಿ ದಾವಣಗೆರೆ ‘ಪ್ರತಿಮಾ ಸಭಾ’ ಮತ್ತು ಶಿವಮೊಗ್ಗ ‘ಕಲಾ ಜ್ಯೋತಿ’ ಇವರಿಗೆ ರಂಗ ಗೌರವ, ಬೆಂಗಳೂರಿನ ಬೆಸ್ಕಾಂ ತಂಡದಿಂದ ವಿದ್ಯುತ್ ಸುರಕ್ಷತೆ ಕುರಿತು ‘ಶಕ್ತಿಮಿತ್ರ’ ಕಿರು ನಾಟಕ ಪ್ರದರ್ಶನ, ಬೆಂಗಳೂರಿನ ಕುಮಾರಿ ಸುಮೇಧ ಮತ್ತು ತಂಡದಿಂದ ಗಮಕ – ವಾಚನ ಹಾಗೂ ಚೆನ್ನೈಯ ರಂಗ ಮಂದಿರ ಸಾದಿರ್ ಮೇಳಂ ತಂಡದವರಿಂದ ಡಾ. ಸ್ವರ್ಣಮಲ್ಯ ಗಣೇಶ್ ಇವರ ನಿರ್ದೇಶನದಲ್ಲಿ ‘ನಮೈ ಮರಂದರೈ ನಂ ಮರಕ್ಕಮಟ್ಟಂ’ ತಮಿಳು ನಾಟಕ ಹಾಗೂ ಡಾ. ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಸಂಜೆ 7-00 ಗಂಟೆಗೆ ಕಲಾಗಂಗೋತ್ರಿ ಪ್ರಸ್ತುತ ಪಡಿಸುವ ಡಾ. ಬಿ.ವಿ. ರಾಜಾರಾಂ ಇವರ ನಿರ್ದೇಶನದಲ್ಲಿ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನ ನಡೆಯಲಿದೆ. ಡಾ. ಸಿದ್ಧಲಿಂಗಯ್ಯ ವೇದಿಕೆಯಲ್ಲಿ ನಡೆಯುವ ಯುವ ರಂಗ ಸಂಭ್ರಮದಲ್ಲಿ ಸಂಜೆ 7-00 ಗಂಟೆಗೆ ಡಾ. ಬೇಲೂರು ರಘುನಂದನ್ ಇವರ ರಚನೆ ಮತ್ತು ನಿರ್ದೇಶನದಲ್ಲಿ ವಿಜಯನಗರದ ಸ.ಪ್ರ.ದ. ಕಾಲೇಜಿನ ರಂಗಚಿರಂತನ ತಂಡ ‘ಸಾಲು ಮರಗಳ ತಾಯಿ ತಿಮ್ಮಕ್ಕ’ ಮತ್ತು ಮಾಲತೇಶ ಬಡಿಗೇರ ಇವರ ನಿರ್ದೇಶನದಲ್ಲಿ ಸಮನ್ವಯ ಸಾಂಸ್ಕೃತಿಕ ಟ್ರಸ್ಟ್ ತಂಡ ‘ಧನ್ವಂತರಿ ಚಿಕಿತ್ಸೆ’ ನಾಟಕ ಪ್ರದರ್ಶನ ನೀಡಲಿದೆ.
ದಿನಾಂಕ 03 ಫೆಬ್ರವರಿ 2026ರಂದು ಸಂಜೆ 5-30 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ನಡೆಯುವ ‘ಭಾರತ ರಂಗ ಮಹೋತ್ಸವ’ದಲ್ಲಿ ಉತ್ತರ ಕನ್ನಡ ಜಿಲ್ಲೆ ಮಂಚಿಕೇರಿ ಶ್ರೀ ರಾಜರಾಜೇಶ್ವರಿ ರಂಗ ಸಮೂಹ ಮತ್ತು ಬಾಗಲಕೋಟೆ ಜಿಲ್ಲೆ ಇಳಕಲ್ ಸ್ನೇಹರಂಗ ಇವರಿಗೆ ರಂಗ ಗೌರವ, ಬೆಂಗಳೂರಿನ ರೂಪಾಂತರ ತಂಡದಿಂದ ಹಾಗೂ ಬೆಂಗಳೂರಿನ ವೇದಿಕೆ ಫೌಂಡೇಶನ್ ಇವರಿಂದ ಲಂಕೇಶ್ ರವರ ‘ಟಿ. ಪ್ರಸನ್ನನ ಗೃಹಸ್ಥಾಶ್ರಮ’ ಕಿರು ನಾಟಕ ಪ್ರದರ್ಶನ, ಪೋಲ್ಯಾಂಡ್ ಥಿಯೇಟರ್ ಮಲಬಾರ್ ಹೊಟೇಲ್ ತಂಡದಿಂದ ಲಿಕಾಸ್ ಚೋಕ್ಟೊಸ್ಕಿ ಇವರ ರಂಗಪಠ್ಯ ಮತ್ತು ನಿರ್ದೇಶನದಲ್ಲಿ ‘ಉಮಾದೇವಿ ಅಬ್ಸರ್ವ್ಸ್ ವಾಂಡ ಡೈನೌಸ್ಕ’ ಹಾಗೂ ಡಾ. ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಬಿ.ವಿ. ಕಾರಂತ ಇವರ ನಿರ್ದೇಶನದಲ್ಲಿ ‘ಬೆನಕ’ ಪ್ರಸ್ತುತ ಪಡಿಸುವ ‘ಸತ್ತವರ ನೆರಳು’ ನಾಟಕ ಪ್ರದರ್ಶನಗೊಳ್ಳಲಿದೆ. ಡಾ. ಸಿದ್ಧಲಿಂಗಯ್ಯ ವೇದಿಕೆಯಲ್ಲಿ ನಡೆಯುವ ಯುವ ರಂಗ ಸಂಭ್ರಮದಲ್ಲಿ ಸಂಜೆ 7-00 ಗಂಟೆಗೆ ಮಧು ಎಂ. ಇವರ ನಿರ್ದೇಶನದಲ್ಲಿ ಯಲಹಂಕದ ಸ.ಪ್ರ.ದ. ಕಾಲೇಜಿನ ತಂಡ ‘ಶೂದ್ರ ತಪಸ್ವಿ’ ಮತ್ತು ಐ.ಟಿ. ರಾಮಮೂರ್ತಿ ಇವರ ನಿರ್ದೇಶನದಲ್ಲಿ ಅಹಿಂದಾ ಕಲಾ ತಂಡ ‘ರಣದುಂಧುಭಿ’ ಐತಿಹಾಸಿಕ ನಾಟಕ ಪ್ರದರ್ಶನ ನೀಡಲಿದೆ.
ದಿನಾಂಕ 04 ಫೆಬ್ರವರಿ 2026ರಂದು ಸಂಜೆ 5-30 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ನಡೆಯುವ ‘ಭಾರತ ರಂಗ ಮಹೋತ್ಸವ’ದಲ್ಲಿ ಉಡುಪಿಯ ರಂಗಭೂಮಿ (ರಿ.) ಮತ್ತು ಚಾಮರಾಜನಗರದ ಶಾಂತಲಾ ಕಲಾವಿದರು ಇವರಿಗೆ ರಂಗ ಗೌರವ, ಬೆಂಗಳೂರಿನ ರಂಗ ಬದುಕು ಟ್ರಸ್ಟ್ ತಂಡದಿಂದ ವೃತ್ತಿ ರಂಗಭೂಮಿ ರಂಗಗೀತೆಗಳ ಗಾಯನ, ಬೆಂಗಳೂರಿನ ಪದ ದೇವರಾಜ ಮತ್ತು ತಂಡದಿಂದ ಪೌರಾಣಿಕ ರಂಗಗೀತೆಗಳ ಗಾಯನ, ಬೆಂಗಳೂರಿನ ರಂಗ ಚಕ್ರ ತಂಡದಿಂದ ರಂಗಗೀತೆಗಳ ಗಾಯನ, ಶ್ರೀಮತಿ ಮಹಾದೇವಿ ರಾಠೋಡ್ ಮತ್ತು ತಂಡ ಹಾಗೂ ಬಂಜಾರ ಮಹಿಳಾ ನೃತ್ಯ ಮಂದೇವಾಲ ತಾಂಡ ಕಲಬುರಗಿ ಇವರಿಂದ ಲಂಬಾಣಿ ನೃತ್ಯ, ಕೋಲ್ಕತ್ತ ಭಗ್ವಟಿ ನೃತ್ಯ ಮಂದಿರ ತಂಡದಿಂದ ಸೋಮಗಿರ ರಂಗಪಠ್ಯ ಮತ್ತು ನಿರ್ದೇಶನದಲ್ಲಿ ‘ರುದ್ರಗಣಿಕ’ ಮೂಕ ನಾಟಕ ಹಾಗೂ ಡಾ. ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಪ್ರಕಾಶ್ ಗರುಡ ಇವರ ರಂಗರೂಪ ಮತ್ತು ನಿರ್ದೇಶನದಲ್ಲಿ ಧಾರವಾಡದ ರಂಗಾಯಣ ತಂಡದಿಂದ ‘ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ’ ನಾಟಕ ಪ್ರಸ್ತುತಗೊಳ್ಳಲಿದೆ. ಡಾ. ಸಿದ್ಧಲಿಂಗಯ್ಯ ವೇದಿಕೆಯಲ್ಲಿ ನಡೆಯುವ ಯುವ ರಂಗ ಸಂಭ್ರಮದಲ್ಲಿ ಸಂಜೆ 7-00 ಗಂಟೆಗೆ ಡಾ. ಎಸ್.ವಿ. ಕಶ್ಯಪ ಇವರ ರಚನೆ ಮತ್ತು ನಿರ್ದೇಶನದಲ್ಲಿ ವಿಜಯನಗರ ಬಿಂಬ ತಂಡ ‘ಶತಮರ್ಕಟ’ ನಾಟಕ ಪ್ರದರ್ಶನ ನೀಡಲಿದೆ.
ದಿನಾಂಕ 05 ಫೆಬ್ರವರಿ 2026ರಂದು ಸಂಜೆ 5-00 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ನಡೆಯುವ ‘ಭಾರತ ರಂಗ ಮಹೋತ್ಸವ’ದಲ್ಲಿ ಕೋಲಾರದ ಅದಿಮ ಸಾಂಸ್ಕೃತಿಕ ಕೇಂದ್ರ ಮತ್ತು ಹೊಸಪೇಟೆ ಭಾವೈಕ್ಯತಾ ವೇದಿಕೆ ಇವರಿಗೆ ರಂಗ ಗೌರವ, ಪಂಡಿತ್ ವಿಶ್ವನಾಥ್ ನಾಕೋಡ್ ಇವರಿಂದ ಹಿಂದೂಸ್ತಾನಿ ಗಾಯನ ಮತ್ತು ಸುಗಮ ಸಂಗೀತ, ಬೆಂಗಳೂರಿನ ನೂಪುರ ಫೈನ್ ಆರ್ಟ್ಸ್ ಅಕಾಡೆಮಿ (ರಿ.) ಇವರಿಂದ ‘ಕನಕ ವೈಭವ’ : ನೃತ್ಯ ರೂಪಕ, ಬೆಂಗಳೂರಿನ ರಂಗ ಸಂಗ್ರಹ ತಂಡದಿಂದ ‘ಸ್ವಚ್ಛ .. ಮಾಡಬೇಕ’ ಹಾಗೂ ಬೆಂಗಳೂರಿನ ಪ್ರಕೃತಿ ಕಲಾ ತಂಡದಿಂದ ‘ಹಸಿವು ಕನಸು’ (ಭಾಗ -2) ಕಿರು ನಾಟಕ ಪ್ರದರ್ಶನ, ಬ್ರೆಜಿಲ್ ಝೆಂಟುರೋ ತಂಡದಿಂದ ಆಂಡ್ರಿ ಹೈಡಮಸ್ ನಿರ್ದೇಶನದಲ್ಲಿ ‘ಫಾಸ್ಟ್ ಪ್ರೆಸೆಂಟ್ ಝೆಂಟುರೋ’ ಪೋರ್ಚುಗೀಸ್ ಭಾಷೆಯ ನಾಟಕ ಹಾಗೂ ಡಾ. ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಪ್ರೊ. ಕೆ. ರಾಮಕೃಷ್ಣಯ್ಯ ನಿರ್ದೇಶನದಲ್ಲಿ ಪ್ರದರ್ಶನ ಕಲಾ ವಿಭಾಗ ಬೆಂ.ವಿ.ವಿ. ತಂಡದಿಂದ ‘ಮಂಟೇಸ್ವಾಮಿ ಕಥಾ ಪ್ರಸಂಗ’ ನಾಟಕ ಪ್ರದರ್ಶನಗೊಳ್ಳಲಿದೆ. ಡಾ. ಸಿದ್ಧಲಿಂಗಯ್ಯ ವೇದಿಕೆಯಲ್ಲಿ ನಡೆಯುವ ಯುವ ರಂಗ ಸಂಭ್ರಮದಲ್ಲಿ ಸಂಜೆ 7-00 ಗಂಟೆಗೆ ಆಕ್ಷರ್ ಕೆ.ಎನ್. ಇವರ ನಿರ್ದೇಶನದಲ್ಲಿ ದೃಶ್ಯಾಂತರ ಚಾಣಕ್ಯ ವಿಶ್ವ ವಿದ್ಯಾಲಯ ತಂಡ ‘ಸಂದಿಗ್ಧ’ ನಾಟಕ ಪ್ರದರ್ಶನ ನೀಡಲಿದೆ.
ದಿನಾಂಕ 06 ಫೆಬ್ರವರಿ 2026ರಂದು ಸಂಜೆ 5-30 ಗಂಟೆಗೆ ಶ್ರೀರಂಗ ವೇದಿಕೆಯಲ್ಲಿ ನಡೆಯುವ ‘ಭಾರತ ರಂಗ ಮಹೋತ್ಸವ’ದಲ್ಲಿ ಧಾರವಾಡದ ‘ಅಭಿನಯ ಭಾರತಿ’ ಮತ್ತು ವಿಜಯನಗರ ಜಿಲ್ಲೆ ಹೂವಿನ ಹಡಗಲಿ ‘ರಂಗ ಭಾರತಿ’ ಇವರಿಗೆ ರಂಗ ಗೌರವ, ವಿದುಷಿ ಬಿಂಬ ರಾಘವೇಂದ್ರ ಮತ್ತು ತಂಡದವರಿಂದ ವೀಣಾ ವಾದನ, ಕರ್ನಾಟಕ ಜಾನಪದ ಅಕಾಡೆಮಿಯಿಂದ ಜಾನಪದ ನೃತ್ಯ, ದೃಶ್ಯ ಕಾವ್ಯ ತಂಡ ಮತ್ತು ಬೆಂಗಳೂರಿನ ರಂಗ ಪಯಣ ತಂಡದಿಂದ ರಂಗಗೀತೆಗಳ ಗಾಯನ, ಮೈಸೂರಿನ ರಂಗಾಯಣ ತಂಡದಿಂದ ಚಿದಂಬರರಾವ್ ಜಂಬೆ ಇವರ ನಿರ್ದೇಶನದಲ್ಲಿ ‘ಅಂಬೇಡ್ಕರ್ ಕೊಲಾಜ್’ ನಾಟಕ ಹಾಗೂ ಡಾ. ಗುಬ್ಬಿ ವೀರಣ್ಣ ವೇದಿಕೆಯಲ್ಲಿ ಡಾ. ಟಿ.ಹೆಚ್. ಲವ ಕುಮಾರ್ ಇವರ ನಿರ್ದೇಶನದಲ್ಲಿ ಹಶ್ಮಿ ಥಿಯೇಟರ್ ಘೋರಂ ತಂಡದಿಂದ ‘ಮ್ಯಾಡ್ ಉಮೆನ್ ಆಫ್ ಶಯೋ’ ನಾಟಕ ಪ್ರದರ್ಶನಗೊಳ್ಳಲಿದೆ. ಡಾ. ಸಿದ್ಧಲಿಂಗಯ್ಯ ವೇದಿಕೆಯಲ್ಲಿ ನಡೆಯುವ ಯುವ ರಂಗ ಸಂಭ್ರಮದಲ್ಲಿ ಸಂಜೆ 7-00 ಗಂಟೆಗೆ ರಾಘವೇಂದ್ರ ಜಿ. ಇವರ ನಿರ್ದೇಶನದಲ್ಲಿ ಅಭಿನಯ ತರಂಗ ತಂಡ ‘ತಾರಾ’ ನಾಟಕ ಪ್ರದರ್ಶನ ನೀಡಲಿದೆ.

