ವಿಜಯಪುರ : ಕರ್ನಾಟಕ ಗಮಕ ಕಲಾ ಪರಿಷತ್ತು, ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಜಿಲ್ಲಾ ಗಮಕ ಕಲಾ ಪರಿಷತ್ತು, ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ‘ಗಮಕ-ವಾಚನ-ವ್ಯಾಖ್ಯಾನ’ ಕಾರ್ಯಕ್ರಮವು ದಿನಾಂಕ 08 ಮಾರ್ಚ್ 2025ರ ಶನಿವಾರದಂದು ವಿಜಯಪುರದ ಗುಮಾಸ್ತೆ ಕಾಲನಿ, ಆಶ್ರಮ ರಸ್ತೆ, ಸ್ಟಾರ್ ಲೈಟ್ ಪಿಲ್ಲರ ಹತ್ತಿರವಿರುವ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ-37 ಇಲ್ಲಿ ಬೆಳಿಗ್ಗೆ ಘಂಟೆ 10.00 ರಿಂದ ನಡೆಯಲಿಯಿದೆ.
ಸ.ಕ.ಗ.ಮ.ಹಿ.ಪ್ರಾ.ಶಾಲೆ ನಂ-37 ಇದರ ಮುಖ್ಯಾಧ್ಯಾಪಕಿಯಾದ ಶ್ರೀಮತಿ ಶೋಭಾ.ಎಸ್.ನಾಯಿಕ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ‘ಕುಮಾರ ವಾಲ್ಮೀಕಿ ಕೃತ ತೊರವೆ ರಾಮಾಯಣ’ದ ‘ಭರತನ ಬಂಧುಪ್ರೇಮ’ ಪ್ರಸಂಗವನ್ನು ಶ್ರೀಮತಿ ಪುಷ್ಪಾ ಕುಲಕರ್ಣಿ ಗಮಕ ವಾಚನ ಮಾಡಲಿದ್ದು, ಗಮಕ ವಾಗ್ದೇವಿ ಪ್ರಶಸ್ತಿ ಪುರಸ್ಕೃತ ಶ್ರೀ ಕಲ್ಯಾಣರಾವ ದೇಶಪಾಂಡೆ ಗಮಕ ವ್ಯಾಖ್ಯಾನ ಗೈಯ್ಯಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಜಯಪುರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇದರ ಅಧ್ಯಕ್ಷರು ಹಾಗೂ ಮಕ್ಕಳ ಸಾಹಿತಿಗಳಾ ಶ್ರೀ ಜಂಬುನಾಥ ಕಂಚ್ಯಾಣಿ ಬಜಾಗವಹಿಸಲಿದ್ದಾರೆ.

