ಸಾಣೇಹಳ್ಳಿ : ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿನ ಉಭಯ ಶಾಲಾ ಮಕ್ಕಳಿಗೆ ಭರತನಾಟ್ಯ ತರಗತಿಯು ದಿನಾಂಕ 19-07-2024ರಂದು ಉದ್ಘಾಟನೆಗೊಂಡಿತು.
ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ “ಭರತನಾಟ್ಯ ತರಬೇತಿಯನ್ನು ಪಡೆದ ಮಕ್ಕಳು ನಾಳೆ ತಮ್ಮ ಕಾಲ ಮೇಲೆ ತಾವೇ ನಿಂತುಕೊಂಡು ಜೀವನ ಮಾಡಬಹುದು. ನೃತ್ಯ, ಸಂಗೀತ ಚೆನ್ನಾಗಿ ಕಲಿತರೆ ಮುಂದೆ ಅದು ನಿಮ್ಮ ಜೀವನಕ್ಕೆ ಸಹಕಾರಿಯಾಗಿ ಸ್ವತಂತ್ರ್ಯವಾಗಿ ಉದ್ಯೋಗವನ್ನು ಪ್ರಾರಂಭ ಮಾಡಬಹುದು. ನಾವು ಸಹ ಸಿರಿಗೆರೆಯಲ್ಲಿದ್ದಾಗ ಅಲ್ಲಿಯ ವಿದ್ಯಾರ್ಥಿಗಳಿಗೆ ಭರತನಾಟ್ಯ ಹಾಗೂ ಸಂಗೀತ ಕಲಿಸಲು ತುಂಬ ಪ್ರಯತ್ನ ತುಂಬ ಮಾಡಿದ್ವಿ. ಭರತನಾಟ್ಯ ತರಗತಿಗಳನ್ನು ಪ್ರಾರಂಭ ಮಾಡಬೇಕೆಂದು ಉತ್ಸಾಹ ಬಹಳ ದಿನಗಳಿಂದಲೂ ಇತ್ತು. ಅದು ಇವತ್ತು ನೆರವೇರಿದೆ. ಎಲ್ಲಾ ಮಕ್ಕಳು ಆಸಕ್ತಿಯಿಂದ ಭರತನಾಟ್ಯವನ್ನು ಕಲಿಯಬೇಕು” ಎಂದು ಹೇಳಿದರು.
ಭರತ್ಯನಾಟ್ಯ ಶಿಕ್ಷಕ ನಾಗರಾಜ್ ಭರತನಾಟ್ಯದ ಬಗ್ಗೆ ವಿವರಣೆ ಹಾಗೂ ಭರತನಾಟ್ಯದ ಪ್ರಕಾರಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಸ್ವಾಗತಿಸಿ ನಿರೂಪಿಸಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಬಸವರಾಜ್, ಶಿವಕುಮಾರ್ ಬಿ.ಎಸ್., ಶಿಲ್ಪಾ ಎ.ಎಸ್. ಉಪಸ್ಥಿತರಿದ್ದರು. 200 ಮಂದಿ ವಿದ್ಯಾರ್ಥಿಗಳು ಭರತನಾಟ್ಯದ ತರಗತಿಗೆ ಪ್ರವೇಶ ಪಡೆದರು.