ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ನೃತ್ಯ ಕಾರ್ಯಕ್ರಮ ‘ನೃತ್ಯಾಂತರಂಗ 138’ನೇ ಸರಣಿಯಲ್ಲಿ ದಿನಾಂಕ 14 ಡಿಸೆಂಬರ್ 2025ರಂದು ಪ್ರಸ್ತುತಗೊಂಡ ಗುರು ವಿದುಷಿ ವಿದ್ಯಾ ಮನೋಜ್ ರವರ ಶಿಷ್ಯೆ ಹಾಗೂ ಪುತ್ರಿ ಡಾ. ಮಹಿಮಾ ಎಂ. ಪಣಿಕ್ಕರ್ ಇವರ ಬಹಳ ಅಚ್ಚುಕಟ್ಟಾದ ಭರತನಾಟ್ಯ ಕಾರ್ಯಕ್ರಮ ಎಲ್ಲರ ಮನಸ್ಸೂರೆಗೊಂಡಿತು.

ಪುಷ್ಪಾಂಜಲಿ, ನೀಲಿ ಪದಂ, ಕೃಷ್ಣನ ಲಾಲಿ ಪದ, ಜಾವಳಿ ಮತ್ತು ಅಭಂಗ್ ಹೀಗೆ ವಿವಿಧ ರೀತಿಯ ನೃತ್ಯಬಂಧಗಳನ್ನು ಪ್ರಸ್ತುತಪಡಿಸಿದರು. ಅಭ್ಯಾಗತರಾದ ಫಿಲೋಮಿನಾ ಕಾಲೇಜಿನ ನಿವೃತ್ತ ಉಪನ್ಯಾಸಕರಾದ ಪ್ರೊ. ಸಂಪತ್ತಿಲ ಈಶ್ವರ ಭಟ್ ಇವರು ಮೂಕಾಂಬಿಕಾ ಸಂಸ್ಥೆಯ ಕಾರ್ಯವೈಖರಿ ಹಾಗೂ ಕಲಾವಿದೆ ಡಾ. ಮಹಿಮಾರವರ ಸಾಧನೆಯನ್ನು ಶ್ಲಾಘಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಭಾನವಿ ಕೃಷ್ಣ, ಶಂಖನಾದ – ವಿದ್ವಾನ್ ಗಿರೀಶ್ ಕುಮಾರ್, ಓಂಕಾರನಾದ – ವಿದುಷಿ ಪ್ರೀತಿಕಲಾ, ಪ್ರಾರ್ಥನೆ – ಸನ್ನಿಧಿ, ಪಂಚಾಂಗ ವಾಚನ – ಮಾತಂಗಿ, ಪರಿಚಯ – ದೀಕ್ಷಾ ಮತ್ತು ಉತ್ಸವಿ, ವಿಷಯ ಮಂಡನೆ – ವಿದುಷಿ ವಸುಧಾ ಪ್ರಸ್ತುತಿಗೈದರು. ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಿದ್ದರು. ವಿದುಷಿ ವಿದ್ಯಾ ಮನೋಜ್ ಕೃತಜ್ಞತೆ ಸಲ್ಲಿಸಿದರು.

