ಪುತ್ತೂರು : ಮುಲ್ಕಿಯ ನೃತ್ಯಗುರು ಶ್ರೀಮತಿ ಅನ್ನಪೂರ್ಣ ರಿತೇಶ್ ಇವರ ಶಿಷ್ಯೆ ಉದಯೋನ್ಮುಖ ಪ್ರತಿಭೆ ಕು. ರಿದ್ಧಿ ಹೆಚ್. ಶೆಟ್ಟಿಯವರ ಮನಮೋಹಕ ಭರತನಾಟ್ಯ ಕಾರ್ಯಕ್ರಮ ದಿನಾಂಕ 11 ಜನವರಿ 2025ರಂದು ದರ್ಬೆಯ ಶಶಿಶಂಕರ ಸಭಾಂಗಣದಲ್ಲಿ ನೃತ್ಯಾಂತರಂಗದ 120ನೇ ಸರಣಿಯಲ್ಲಿ ನಡೆಯಿತು.
ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯವರು ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ವಿದ್ವಾನ್ ದೀಪಕ್ ಕುಮಾರ್ ರವರು ನಿರ್ವಹಣೆಗೈದರು. ಈ ಕಾರ್ಯಕ್ರಮದ ಅಭ್ಯಾಗತರಾಗಿ ಬಂದಿದ್ದ ಪುತ್ತೂರು ಇನ್ನರ್ ವೀಲ್ ನ ಅಧ್ಯಕ್ಷೆಯಾದ ಶ್ರೀಮತಿ ರಾಜೇಶ್ವರಿ ಆಚಾರ್ ಇವರು ಕಲಾವಿದೆಯ ನೃತ್ಯ ವೈಖರಿಯನ್ನು ಶ್ಲಾಘಿಸಿದರು. ಈ ಕಾರ್ಯಕ್ರಮದಲ್ಲಿ ವಿಭಾಶ್ರೀಯವರು ನಿರೂಪಣೆಗೈದು, ಕು. ಮಾತಂಗಿ – ಶಂಖನಾದ, ಶೌರೀಕೃಷ್ಣ- ಪಂಚಾಂಗ ವಾಚನ, ಭಾರ್ಗವಿ ಶೆಣೈ – ಪಾರ್ಥನೆ, ಸೃಷ್ಟಿ ಎನ್.ವಿ. – ವಿಷಯ ಮಂಡನೆ, ಶೋನಲ್ ರೈ ಮತ್ತು ವೃದ್ಧಿ ರೈ ಪರಿಚಯ ಮಾಡಿದರು. ಕಲಾವಿದೆಯ ಗುರು ವಿದುಷಿ ಅನ್ನಪೂರ್ಣ ರೀತೇಶ್ ನೃತ್ಯಗಳ ಬಗ್ಗೆ ಮಾಹಿತಿ ನೀಡಿದರು.