ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 132ನೇ ಸರಣಿಯಲ್ಲಿ ದಿನಾಂಕ 06 ಜುಲೈ 2025ರಂದು ಶಶಿಶಂಕರ ಸಭಾಂಗಣದಲ್ಲಿ ಉಡುಪಿಯ ಕುಮಾರಿ ಶ್ರೇಷ್ಠ ದೇವಾಡಿಗ ಇವರಿಂದ ಭರತನಾಟ್ಯ ಕಾರ್ಯಕ್ರಮ ಬಹಳಷ್ಟು ಆಕರ್ಷಕವಾಗಿ ನಡೆಯಿತು.
ಉತ್ತಮ ಅಂಗಶುದ್ಧ ಹಾಗೂ ಹಿತಮಿತ ಅಭಿನಯದಿಂದ ಜನರ ಮೆಚ್ಚುಗೆ ಪಡೆದ ಶ್ರೇಷ್ಠ ದೇವಾಡಿಗ ಉಡುಪಿಯ ಡಾ. ಮಂಜರಿಚಂದ್ರರವರ ಶಿಷ್ಯೆ. ಈ ನೃತ್ಯಾಂತರಂಗದಲ್ಲಿ ಅಭ್ಯಾಗತರಾದ ರಂಗಕಲಾವಿದ ಶ್ರೀ ಸದಾಶಿವ ಶಿವಗಿರಿಯವರು ನೃತ್ಯ ಸಂಸ್ಥೆಯ ಸಾಂಸ್ಕೃತಿಕ ಚಟುವಟಿಕೆಯ ಬಗ್ಗೆ ಹಾಗೂ ಮಕ್ಕಳಲ್ಲಿ ಲಲಿತ ಕಲೆಗಳ ಸತ್ಪರಿಣಾಮಗಳ ಬಗ್ಗೆ ಸವಿವರವಾಗಿ ಹೇಳಿದರು. ಕುಮಾರಿ ಅಕ್ಷರಿ ಕೆ. ಇವರು ನಿರೂಪಣೆಗೈದರೆ, ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮ ಆಯೋಜಿಸಿದ್ದರು. ವಿದುಷಿ ಸುಮಂಗಲ ಗಿರೀಶ್ ಅಭಿಪ್ರಾಯ ತಿಳಿಸಿ, ಶೌರೀಕೃಷ್ಣ ಪ್ರಾರ್ಥನೆ, ಕುಮಾರಿ ನಯೋಮಿ ಪಂಚಾಂಗ ವಾಚನ, ಕುಮಾರಿ ಪ್ರಾರ್ಥನಾ ಎಂ. ಮತ್ತು ಬಿಂದು ಕಲಾವಿದರ ಪರಿಚಯ, ವಿದ್ವಾನ್ ಗಿರೀಶ್ ಕುಮಾರ್ ಶಂಖ ನಾದ ಮತ್ತು ಕುಮಾರಿ ಪ್ರಣಮ್ಯ ಪಾಲೆಚ್ಚಾರು ವಿಷಯ ಮಂಡನೆ ಮಾಡಿದರು.