Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕುಮಾರಿ ವಸುಂಧರಾ ಇವರ ಅದ್ಭುತ ನೃತ್ಯಾಭಿನಯ
    Bharathanatya

    ಕುಮಾರಿ ವಸುಂಧರಾ ಇವರ ಅದ್ಭುತ ನೃತ್ಯಾಭಿನಯ

    July 27, 2024No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಉಡುಪಿ : ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ‘ನೃತ್ಯಶಂಕರ’ ಸಾಪ್ತಾಹಿಕ ನೃತ್ಯ ಸರಣಿ 55ರಲ್ಲಿ ದೇವಸ್ಥಾನದ ವಸಂತಮಂಟಪದಲ್ಲಿ 22 ಜುಲೈ 2024ರಂದು ನಡೆಯಿತು. ವಿದುಷಿ ಕು. ವಸುಂಧರಾರವರು ತನ್ನ ನೃತ್ಯಾಭಿನಯನದ ಮೂಲಕ ಪೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದರು.

    ನಾಟ್ಯಾಧಿ ದೇವತೆಯಾದ ಶಿವನಿಗೆ ಹೂ, ಮೈ, ಮನಗಳನ್ನು ಅರ್ಪಿಸಿ, ದೇವತೆಗಳಿಗೆ ಗುರುಗಳಿಗೆ ತಂದೆ-ತಾಯಿಯರಿಗೆ ನಮಸ್ಕರಿಸಿ, ಬಂದಂತ ಎಲ್ಲಾ ಕಲಾಭಿಮಾನಿಗಳನ್ನು ಸ್ವಾಗತಿಸುವ ಪುಷ್ಪಾಂಜಲಿ ಮೂಲಕ ನೃತ್ಯ ಪ್ರಾರಂಭಿಸಿದರು. ಪದವರ್ಣ ಪ್ರಸ್ತುತಿಯಲ್ಲಿ ವರ್ಣವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ಇಲ್ಲಿ ರುಕ್ಮಿಣಿಯು ತನ್ನ ಬಾಲ್ಯದಿಂದ ಕೃಷ್ಣನ ಕಥೆ, ಮಹಿಮೆಗಳನ್ನು ಕೇಳುತ್ತಾ, ಅಪಾರವಾಗಿ ಆತನನ್ನು ಪ್ರೀತಿಸತೊಡಗಿದಳು. ಆತನನ್ನೇ ತನ್ನ ಕಲ್ಪನೆ ಚಿತ್ರಿಸಿದಂತೆ ಪಟವೊಂದರಲ್ಲಿ ಚಿತ್ರಿಸಿ ಅದರೊಂದಿಗೆ ಮಾತನಾಡುವ ವೇಳೆ ಸಖಿಯು ಸತಾಯಿಸಿದಾಗ, ಅಣ್ಣ ರುಕ್ಮನು ಬಂದು ಆ ಚಿತ್ರಪಟವನ್ನು ಹರಿದು ಆಕೆಯನ್ನು ಕೋಣೆಯಲ್ಲಿರಿಸಿದನು. ಅದೇ ವೇಳೆ ಅಲ್ಲಿಂದಲೇ ಹಾದು ಹೋಗುತ್ತಿದ್ದ ದೇವಾಲಯದ ಅರ್ಚಕರಲ್ಲಿ ಬಾಗಿಲುಗಳ ತೆರೆಯಲು ಹೇಳಿ, ತನ್ನ ಸ್ವಯಂವರದ ಮೊದಲೇ ದೇವಿಯ ದೇವಸ್ಥಾನಕ್ಕೆ ಬಂದು ತನ್ನನ್ನು ಕರೆದುಕೊಂಡು ಹೋಗುವಂತೆ ಪತ್ರವನ್ನು ಬರೆದು ಅದನ್ನು ಕೃಷ್ಣನಿಗೆ ತಲುಪಿಸಲು ಅರ್ಚಕರಲ್ಲಿ ಹೇಳುತ್ತಾಳೆ.

    ಎಲ್ಲರ ಮನವ ಅರ್ಥೈಸಿಕೊಳ್ಳುವವನು ತನ್ನ ಮನವ ಏಕೆ ಅರ್ಥೈಸಿಕೊಳ್ಳುತ್ತಿಲ್ಲ ಇದು ನ್ಯಾಯವೇನು ಕೃಷ್ಣ.. ಎಂದು ಅಪಾರ ಪ್ರೇಮ ಕುತೂಹಲದಿಂದ, ಇತ್ತ ರುಕ್ಮಿಣಿಯು ತನ್ನ ಮನದೊಡೆಯನ ನೆನೆಯುತ್ತಿರಲು ಅತ್ತ ಮನದರಸಿಯ ಕರೆದೊಯ್ಯಲು ಕೃಷ್ಣ ಬರುವನೆ ಎಂಬ ನೃತ್ಯವನ್ನು ಅತ್ಯಂತ ಮನೋಜ್ಞವಾಗಿ ಅಭಿನಯಿಸಿದರು.

    ಪುರಂದರ ದಾಸರು ರಚಿಸಿರುವ ಸ್ತುತಿ ‘ಎಂಥ ಚೆಲುವೆಗೆ’ ಈ ನೃತ್ಯವು ಶಿವ ಪಾರ್ವತಿಯರ ವಿವಾಹ ಮಹೋತ್ಸವಕ್ಕೆ ಬಂದಂತಹ ಸಖಿಯರೀರ್ವರ ಸಂಭಾಷಣೆಯನ್ನು ಒಳಗೊಂಡಿದೆ. ಇವರು ಕಲ್ಯಾಣ ಮಹೋತ್ಸವದ ಸಂಭ್ರಮದ ಬಗ್ಗೆ ಮಾತನಾಡಿಕೊಳ್ಳುವ ವೇಳೆ ಎಂತಹ ಚೆಲುವೆ ಪಾರ್ವತಿ, ಆದರೆ ಆಕೆಗೆ ಇಂತಹ ವರವೇನೋ ಎಂದು ಆಡಿಕೊಳ್ಳುವವಳು ಒಬ್ಬಾಕೆಯಾದರೆ, ಕೇವಲ ಹಣ ಸೌಂದರ್ಯ ಮುಖ್ಯವಲ್ಲ, ಗುಣ ವ್ಯಕ್ತಿತ್ವ ಮುಖ್ಯ ಎಂದು ತಿಳಿಸಿ ಹೇಳುವವಳು ಇನ್ನೊಬ್ಬಾಕೆ. ಹೀಗೆ ಇಬ್ಬರೂ ಮದುವೆ ಸಮಾರಂಭವನ್ನು ಸಂಭ್ರಮಿಸುವ ಒಂದು ತಮಾಷೆಯ ಕಥೆಯನ್ನು ಅಭಿನಯದ ಮೂಲಕ ಪ್ರಸ್ತುತ ಪಡಿಸಿದ್ದರು.

    ಪತಿಯು ಮದುವೆಯಾದ ಹೊಸತರಲ್ಲಿ ತನ್ನ ಪತ್ನಿಗೆ ನೀಡುವಂತಹ ಕಾಳಜಿ, ಸಮಯ ಈಗೇಕೆ ನೀಡುವುದಿಲ್ಲ. ತನ್ನದೇ ವ್ಯವಹಾರದ ಲೋಕದಲ್ಲಿ ಮುಳುಗಿರುವ ಪತಿಯೊಂದಿಗೆ ಮಾತನಾಡುವ ಬಯಕೆ ಪತ್ನಿಯದು. ಹೀಗಿರುವಾಗ ವಿಧವಿಧವಾಗಿ ಮಾತನಾಡಲು ಪ್ರಯತ್ನಿಸಿದರೂ ಪತಿ ಮಾತನಾಡದೆ ಇದ್ದಾಗ ಪತ್ನಿ ಬೇಸರದಲ್ಲಿ ಕುಳಿತುಕೊಳ್ಳದೆ, ಉಪಾಯ ಮಾಡಿ ಹೇಗೆ ಮಾತನಾಡುವಂತೆ ಮಾಡಬಹುದೆಂಬ ಪ್ರಸ್ತುತಿ ಜಾವಳಿ ನೃತ್ಯ ಅಭಿನಯ ಅಮೋಘವಾಗಿತ್ತು.

    ವಿದುಷಿ ವಸುಂಧರಾ ಇವರು ಗುರು ವಿದ್ವಾನ್ ಕೊಡವೂರು ಸುಧೀರ್ ರಾವ್ ಹಾಗೂ ವಿದುಷಿ ಮಾನಸಿ ಸುಧೀರ್ ಇವರ ಶಿಷ್ಯೆಯಾಗಿರುವ ಈಕೆ ಕೆ. ಗುರುರಾಜ್ ಭಟ್ ಹಾಗೂ ಶ್ರೀಲತಾ ಭಟ್ ದಂಪತಿಗಳ ಸುಪುತ್ರಿ. ಪ್ರಸ್ತುತ ತನ್ನ ವಿದ್ಯಾಭ್ಯಾಸದ ತುಡಿತವನ್ನು ಕಡಿಮೆ ಮಾಡಿಕೊಳ್ಳದೆ ಬಿ.ಎಡ್ ಕಲಿಯುತ್ತಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಈಕೆ ಕಳೆದ 18 ವರ್ಷಗಳಿಂದ ನೃತ್ಯಭ್ಯಾಸವನ್ನು ನಡೆಸುತ್ತಿದ್ದು, ಇದರಲ್ಲಿ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ತನ್ನ ಶಾಲಾ ಹಾಗೂ ಕಾಲೇಜಿನ ದಿನಗಳಲ್ಲಿ ನೃತ್ಯ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿರುತ್ತಾಳೆ. ಭರತನಾಟ್ಯ ಮಾತ್ರವಲ್ಲದೆ ಯಕ್ಷಗಾನ, ಸಂಗೀತ, ಹರಿಕಥೆಗಳಲ್ಲೂ ಅಭಿರುಚಿಯನ್ನು ಹೊಂದಿದ್ದಾಳೆ. ಇಷ್ಟು ಮಾತ್ರವಲ್ಲದೆ ಕೇಶಾಲಂಕಾರ ವರ್ಣಾಲಂಕಾರದಲ್ಲೂ ಆಸಕ್ತಿ ಬೆಳೆಸಿಕೊಂಡಿದ್ದಾಳೆ.

    ಜನಾರ್ದನ್ ಕೊಡವೂರು

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಎಡನೀರು ಮಠದಲ್ಲಿ ಸಂಗೀತೋತ್ಸವ ಮತ್ತು ಯಕ್ಷಗಾನ ಪ್ರದರ್ಶನ
    Next Article ಸಂಸ್ಕಾರ ಭಾರತೀ ಮಂಗಳೂರು ಇದರ ವತಿಯಿಂದ ಗುರುವಂದನಾ ಕಾರ್ಯಕ್ರಮ
    roovari

    Comments are closed.

    Related Posts

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ ‘ಆಲಾಪ್’ ಶಾಸ್ತ್ರೀಯ ಸಂಗೀತ ಕಛೇರಿ | ಮೇ 10

    May 7, 2025

    ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ‘ಸುಮಂಜುಳ’ | ಮೇ 10

    May 6, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.