ಮಂಗಳೂರು : ಭರತಾಂಜಲಿ (ರಿ.) ಕೊಟ್ಟಾರ ಇವರ ವತಿಯಿಂದ ಕಿಂಕಿಣಿ ತ್ರಿಂಶತ್ ಸಂಭ್ರಮದ ಹಿನ್ನೆಲೆಯಲ್ಲಿ ಮೀರಾ ಶ್ರೀನಾರಾಯಣನ್ ಇವರಿಂದ ಏಕವ್ಯಕ್ತಿ ಪ್ರದರ್ಶನವು ದಿನಾಂಕ 09 ನವೆಂಬರ್ 2025ರಂದು ಮಂಗಳೂರಿನ ಡಾನ್ ಬಾಸ್ಕೋ ಹಾಲ್ ನಲ್ಲಿ ನಡೆಯಲಿದೆ.
ಈ ನೃತ್ಯ ಸಂಭ್ರಮವನ್ನು ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಕೃಷ್ಣ ಬಾಪಿ ರಾಜು ಜಿ. ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


