ಮಂಗಳೂರು : ಸನಾತನ ನಾಟ್ಯಾಲಯ ಇದರ ವತಿಯಿಂದ ‘ಭರತನಾಟ್ಯ’ ಕಾರ್ಯಕ್ರಮವನ್ನು ದಿನಾಂಕ 13 ಜುಲೈ 2025ರಂದು ಸಂಜೆ 5-30 ಗಂಟೆಗೆ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ನೃತ್ಯ ಗುರು ನಾಟ್ಯಾಚಾರ್ಯ ಪಿ. ಕಮಲಾಕ್ಷ ಆಚಾರ್ ಇವರಿಂದ ಗುರು ಸಂಸ್ಮರಣೆ, ಬಾಲ ಸಂರಕ್ಷಣ ಕೇಂದ್ರ ಅನಾಥ ಶ್ರಮದ ಸ್ಥಾಪಕ ಸಂಚಾಲಕರಾದ ಡಾ. ಪಿ. ಅನಂತ ಕೃಷ್ಣ ಭಟ್ ಇವರಿಂದ ಗುರು ನಮನ, ನೃತ್ಯ ನಿರ್ದೇಶಕರಾದ ಶ್ರೀಮತಿ ರಾಧಿಕಾ ಶೆಟ್ಟಿ ಇವರಿಂದ ಗುರು ಪ್ರೇರಣ ಹಾಗೂ ನೃತ್ಯ ಗುರು ಡಾ. ಕೃಪಾ ಫಡ್ಕೆ ಇವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಪ್ರಸ್ತುತಗೊಳ್ಳುವ ಭರತನಾಟ್ಯಕ್ಕೆ ಹಾಡುಗಾರಿಕೆಯಲ್ಲಿ ಶರತ್ ಕುಮಾರ್, ಮೃದಂಗದಲ್ಲಿ ರಾಖೇಶ್ ಹೊಸಬೆಟ್ಟು ಮತ್ತು ಮೇಧಾ ಉಡುಪ ಕೊಳಲಿನಲ್ಲಿ ಸಹಕರಿಸಲಿದ್ದಾರೆ.