ಮಂಗಳೂರು : ಗಾನ ನೃತ್ಯ ಅಕಾಡೆಮಿ (ರಿ.) ಮಂಗಳೂರು ಇವರು ಪ್ರಸ್ತುತ ಪಡಿಸುವ ಗುರು ವಿದ್ಯಾಶ್ರೀ ರಾಧಾಕೃಷ್ಣ ಇವರ ಶಿಷ್ಯೆ ಕುಮಾರಿ ಮಹತಿ ಪಾವನಸ್ಕರ ಇವರ ‘ಭರತನಾಟ್ಯ ರಂಗಪ್ರವೇಶ’ವು ದಿನಾಂಕ 12-05-2024ರಂದು ಸಂಜೆ 5-30ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾಶ್ರೀ ಗುರು ಉಳ್ಳಾಲ ಮೋಹನ್ ಕುಮಾರ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕ ಶ್ರೀ ಹರಿನಾರಾಯಣ ಆಸ್ರಣ್ಣ ಮತ್ತು ಬಂಟ್ವಾಳದ ಕಶೆಕೋಡಿ ಸೂರ್ಯ ನಾರಾಯಣ ಭಟ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಭರತನಾಟ್ಯ ಕಾರ್ಯಕ್ರಮಕ್ಕೆ ನಟುವಾಂಗಂನಲ್ಲಿ ಗುರು ವಿದ್ಯಾಶ್ರೀ ರಾಧಾಕೃಷ್ಣ, ಹಾಡುಗಾರಿಕೆಯಲ್ಲಿ ಚೆನ್ನೈಯ ವಿದ್ವಾನ್ ಶ್ರೀಕಾಂತ್ ಗೋಪಾಲ ಕೃಷ್ಣನ್, ಮೃದಂಗದಲ್ಲಿ ಚೆನ್ನೈಯ ವಿದ್ವಾನ್ ಕಾರ್ತಿಕೇಯನ್ ರಮಾನಾಥನ್, ಕೊಳಲು ಬೆಂಗಳೂರಿನ ವಿದ್ವಾನ್ ರಘು ನಂದನ್ ರಾಮಕೃಷ್ಣ ಮತ್ತು ವೀಣೆಯಲ್ಲಿ ಚೆನ್ನೈಯ ವಿದ್ವಾನ್ ಅನಂತ ನಾರಾಯಣ ಇವರುಗಳು ಸಹಕರಿಸಲಿದ್ದಾರೆ.
 
 
 
 
									 
					