ಮಂಗಳೂರು : ಕೂಟ ಮಹಾಜಗತ್ತು (ರಿ.) ಸಾಲಿಗ್ರಾಮ ಇದರ ಮಂಗಳೂರು ಅಂಗ ಸಂಸ್ಥೆಯವರು ಆಯೋಜಿಸಿದ್ದ ‘ನಮ್ಮವರು ನಮ್ಮ ಹೆಮ್ಮೆ’ ಕಾರ್ಯಕ್ರಮವು ದಿನಾಂಕ 09 ಫೆಬ್ರವರಿ 2025ರಂದು ಪಾಂಡೇಶ್ವರದ ಗುರು ನರಸಿಂಹ ಸಭಾಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೂಟ ಸಮಾಜದ ಐದು ಜನ ಸಾಧಕರಿಗೆ ‘ಕೂಟ ಸಮಾಜದ ಕಣ್ಮಣಿ’ ಎಂಬ ಬಿರುದು ಪ್ರಧಾನ ಮಾಡಲಾಯಿತು. ಸಮಾರಂಭದ ಸಾಂಸ್ಕೃತಿಕ ವೇದಿಕೆಯಲ್ಲಿ ಭರತಾಂಜಲಿ (ರಿ.) ಕೊಟ್ಟಾರ ಮಂಗಳೂರು ಇವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ‘ಭರತನಾಟ್ಯ ಸಂಭ್ರಮ’ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನವನ್ನು ಪ್ರಸ್ತುತಗೊಳಿಸಿದರು. ಕೊನೆಯಲ್ಲಿ ಸಂಸ್ಥೆಯ ಕಲಾ ಗುರುಗಳನ್ನು ಗೌರವಿಸಲಾಯಿತು.