ಉಡುಪಿ : ಚೆನ್ನೈಯ ‘ದಕ್ಷಿಣ’ ಇವರು ಪ್ರಸ್ತುತ ಪಡಿಸುವ ಗುರು ದಿವ್ಯಾ ನಾಯರ್ ಇವರ ಶಿಷ್ಯೆ ಮಾನಸ ಇವರ ‘ಭರತನಾಟ್ಯ ರಂಗಪ್ರವೇಶ’ವನ್ನು ದಿನಾಂಕ 30 ಜುಲೈ 2025ರಂದು ಸಂಜೆ ಗಂಟೆ 5-30ಕ್ಕೆ ಉಡುಪಿಯ ಇನ್ಫೋಸಿಸ್ ಯಕ್ಷಗಾನ ಕಲಾರಂಗದಲ್ಲಿ ಆಯೋಜಿಸಲಾಗಿದೆ.
ಶ್ರೀಮತಿ ಮಲ್ಲಿಕಾ ಮತ್ತು ಸಿ.ಕೆ. ಮಂಜುನಾಥ ಇವರ ಪುತ್ರಿಯಾಗಿರುವ ಮಾನಸ ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳನ್ನು ಉತ್ತಮ ಶ್ರೇಣಿಯಲ್ಲಿ ಪೂರೈಸಿರುತ್ತಾರೆ. 2019ರಲ್ಲಿ ಯುವ ಕಲಾ ಪ್ರಶಸ್ತಿ ದೊರಕಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರದ ವಿದ್ಯಾರ್ಥಿ ವೇತನವನ್ನು ಪಡೆದಿರುತ್ತಾರೆ.