ಉಪ್ಪಿನಕುದ್ರು : ‘ಪ್ರತಿಭೆ ನಿಮ್ಮದು ವೇದಿಕೆ ನಮ್ಮದು’ 2025ರ ಕಾರ್ಯಕ್ರಮದಡಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ 104ನೇ ತಿಂಗಳ ಕಾರ್ಯಕ್ರಮ ದಿನಾಂಕ 23 ಫೆಬ್ರವರಿ 2025ರಂದು ಶ್ರೀಮತಿ ದೇವಕಿ ಸುರೇಶ್ ಪ್ರಭು ತಲ್ಲೂರು ಇವರ ಪ್ರಾರ್ಥನೆಯೊಂದೆಗೆ ಪ್ರಾರಂಭವಾಯಿತು. ವೇದಿಕೆಯಲ್ಲಿ ಹಿರಿಯ ಗೊಂಬೆಯಾಟ ಕಲಾವಿದ ವೆಂಕಟರಮಣ ಬಿಡುವಾಳ್, ಪ್ರಶಾಂತ್ ನಾಯಕ್, ಅನಿತಾ ಪಿ. ನಾಯಕ್, ಎಮ್. ರತ್ನಾಕರ್ ಪೈ, ಎಮ್. ರಾಜಶ್ರೀ ಆರ್. ಪೈ ಹಾಗೂ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಇವರು ಉಪಸ್ಥಿತರಿದ್ದರು.
ಭರತನಾಟ್ಯ ಯುವ ಕಲಾವಿದೆ ಕುಮಾರಿ ಪ್ರಣೀತಾ ಪ್ರಶಾಂತ್ ನಾಯಕ್ ಕೋಟ ಇವರನ್ನು ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು. ಕೊನೆಯಲ್ಲಿ ಕುಮಾರಿ ಪ್ರಣೀತಾ ಪ್ರಶಾಂತ್ ನಾಯಕ್ ಕೋಟ ಇವರ ಭರತನಾಟ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್, ಬಂಟ್ವಾಡಿಯವರು ಕಾರ್ಯಕ್ರಮ ನಿರೂಪಿಸಿದರು.