ಬೆಳ್ತಂಗಡಿ : ಕಲಾನಿಕೇತನ ಡಾನ್ಸ್ ಫೌಂಡೇಷನ್ ಇವರ ವತಿಯಿಂದ ಶಾಶ್ವತ ತಾರನಾಥ್ ಇವರ ಭರತನಾಟ್ಯಂ ರಂಗಪ್ರವೇಶ ಕಾರ್ಯಕ್ರಮವು ದಿನಾಂಕ 15 ಫೆಬ್ರವರಿ 2025ರಂದು ಸಂಜೆ 5-00 ಗಂಟೆಗೆ ಬೆಳ್ತಂಗಡಿಯ ಶ್ರೀ ನಾರಾಯಣ ಗುರು ಸಂಕೀರ್ಣ ಆಶಾ ಸಾಲಿಯಾನ್ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಇವರು ಗುರು ವಿದುಷಿ ವಿದ್ಯಾ ಮನೋಜ್ ರವರ ಶಿಷ್ಯೆಯಾಗಿರುತ್ತಾರೆ.
ಕರ್ನಾಟಕ ಕಲಾಶ್ರೀ ಗುರು ವಿದುಷಿ ನಯನ ವಿ. ರೈ, ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲ್ ಮತ್ತು ಮೆಡಿಕಲ್ ಡೈರೆಕ್ಟರ್ ಡಾ. ಗೋಪಾಲಕೃಷ್ಣ ಭಟ್ ಇವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಂಗಪ್ರವೇಶ ಕಾರ್ಯಕ್ರಮದ ನಿರ್ದೇಶನ ಮತ್ತು ನಟ್ಟುವಾಂಗಂನಲ್ಲಿ ವಿದುಷಿ ವಿದ್ಯಾ ಮನೋಜ್, ಹಾಡುಗಾರಿಕೆಯಲ್ಲಿ ಬೆಂಗಳೂರಿನ ವಿದ್ವಾನ್ ನಂದಕುಮಾರ್ ಉಣ್ಣಿಕೃಷ್ಣನ್, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಕಾರ್ತಿಕ್ ವಿಧಾತೃ, ಕೊಳಲಿನಲ್ಲಿ ಉಡುಪಿಯ ವಿದ್ವಾನ್ ನಿತೀಶ್ ಅಮ್ಮನ್ನಾಯ ಮತ್ತು ವೀಣೆಯಲ್ಲಿ ಬೆಂಗಳೂರಿನ ವಿದ್ವಾನ್ ಪ್ರಶಾಂತ್ ರುದ್ರಪಟ್ನ ಸಹಕರಿಸಲಿದ್ದಾರೆ.