ಕಾಸರಗೋಡು : ಮಧೂರು ನಾಟ್ಯಮಂಟಪ ನೃತ್ಯಸಂಸ್ಥೆಯ ವತಿಯಿಂದ ಭರತನಾಟ್ಯ ಕಲಿಯುವ ಮಕ್ಕಳಿಗಾಗಿ ಎರಡು ದಿನ ಗಳ ನೃತ್ಯ ಕಾರ್ಯಾಗಾರವು ದಿನಾಂಕ 26 ಮತ್ತು 27 ಡಿಸೆಂಬರ್ 2024 ರಂದು ಕಾಸರಗೋಡು ಶ್ರೀ ಎಡನೀರು ಮಠದ ಶ್ರೀ ಭಾರತೀ ಕಲಾ ಸದನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮಾತನಾಡಿ “ಶಾಸ್ತ್ರೀಯ ಕಲೆಗಳಲ್ಲಿ ಒಂದಾದ ಭರತನಾಟ್ಯ ಕಲಿಕೆಯಲ್ಲಿ ಮಕ್ಕಳು ತೊಡಗಿಸಿಕೊಳ್ಳುವುದು ತುಂಬಾ ಒಳ್ಳೆಯ ಬೆಳವಣಿಗೆ. ಅದರಲ್ಲೂ ಇಂತಹ ನೃತ್ಯ ಕಾರ್ಯಾಗಾರಗಳು ಕಲಿಕೆಯ ಅಭಿವೃದ್ಧಿಗೆ ಪ್ರೇರಕ.” ಎಂದು ಹೇಳಿದರು. ನಾಟ್ಯರಂಗ ಪುತ್ತೂರು ಇದರ ನೃತ್ಯ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಕಾರ್ಯಾಗಾರ ನಡೆಸಿಕೊಟ್ಟರು.
ದಿನಾಂಕ 27 ಡಿಸೆಂಬರ್ 2024ರಂದು ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ ಶ್ರೀಮತಿ ಪ್ರಭಾ ರಾಜೆಂದ್ರ ಕಲ್ಲೂರಾಯ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಿ ಶುಭಾರೈಸಿದರು. ಶಿಬಿರಾರ್ಥಿಗಳು ಎರಡು ದಿನಗಳ ಶಿಬಿರದಿಂದ ಆದ ಪ್ರಯೋಜನನ್ನು ಖುಷಿಯಿಂದ ವ್ಯಕ್ತಪಡಿಸಿದರು. ಶಿಬಿರವನ್ನು ನಾಟ್ಯಮಂಟಪದ ನಿರ್ದೇಶಕಿ ನೃತ್ಯಗುರು ಸೌಮ್ಯ ಶ್ರೀಕಾಂತ್ ಸಂಘಟಿಸಿದ್ದರು.