Subscribe to Updates

    Get the latest creative news from FooBar about art, design and business.

    What's Hot

    ಮಕ್ಕಳ ಕಲಾ ಲೋಕದ ಅಧ್ಯಕ್ಷರಾಗಿ ರಮೇಶ ಎಂ. ಬಾಯಾರು

    February 23, 2026

    ರಂಗ ವಿಮರ್ಶೆ | ಎಳೆ ಪ್ರತಿಭೆಗಳಿಗೆ ಸಾಕ್ಷಿಯಾದ ರಂಗ ಪ್ರಯೋಗಗಳು

    February 23, 2026

    ಮಂಗಳೂರು ವಿ.ವಿ. ಕಾಲೇಜಿನಲ್ಲಿ ಹಿರಿಯ ಲೇಖಕಿ ರೋಹಿಣಿಗೆ ಅಭಿನಂದನೆ

    February 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ವತಿಯಿಂದ ‘ಭರತಮುನಿ ಜಯಂತಿ’ 
    Bharathanatya

    ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ವತಿಯಿಂದ ‘ಭರತಮುನಿ ಜಯಂತಿ’ 

    April 1, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email


    ಮಂಗಳೂರು : ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಭಾಗಿತ್ವದಲ್ಲಿ ‘ಭರತಮುನಿ ಜಯಂತಿ’ ಕಾರ್ಯಕ್ರಮವು ದಿನಾಂಕ 29-03-2024ರಂದು ಕದ್ರಿ ಮಲ್ಲಿಕಟ್ಟೆಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಜರಗಿತು.
    ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಜಾನಪದ – ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ “ಪ್ರಪಂಚಕ್ಕೆ ನಾಟ್ಯ ಶಾಸ್ತ್ರವನ್ನು ಕೊಡುಗೆಯಾಗಿ ನೀಡಿದ ಭರತಮುನಿ ಸಮಸ್ತ ಮನುಕುಲವು ವೇದ ಶಾಸ್ತ್ರಗಳನ್ನು ಸುಲಭವಾಗಿ ಗ್ರಹಿಸುವಂತೆ ಮಾಡಿದ ಮಹಾ ದಾರ್ಶನಿಕ. ಚತುರ್ವೇದಗಳಿಂದ ಪಠ್ಯ, ಅಭಿನಯ, ಸಂಗೀತ ಮತ್ತು ರಸಗಳನ್ನು ಆಯ್ದು ನೃತ್ಯ ಎನ್ನುವ ಮೋಹಕ ಕಲೆಯನ್ನು ಜಗತ್ತಿಗೆ ಆತ ನಾಟ್ಯ ವೇದದ ರೂಪದಲ್ಲಿ ಪರಿಚಯಿಸಿದ್ದಾನೆ. ವೇದವನ್ನು ಓದದೇ ಇದ್ದರೂ ಭರತ ನೃತ್ಯವನ್ನು ಕಲಿತು, ಕಲಿಸಿ, ಅನುಭವಿಸುವುದರ ಮೂಲಕ ಮಾನವ ಸಮಾಜವು ವೇದದ ಸಾರವನ್ನು ತಿಳಿಯಲು ಸಾಧ್ಯವಾಗಿದೆ. ಸಂಘಟನೆ ಎಲ್ಲಾ ಕ್ಷೇತ್ರದಲ್ಲೂ ಇಂದು ಅವಶ್ಯಕ. ಬೇರೆ ಬೇರೆ ನೃತ್ಯ ಗುರುಗಳು ತಮ್ಮದೇ ತಂಡದೊಂದಿಗೆ ದೇಶವಿದೇಶಗಳಲ್ಲಿ ಪ್ರದರ್ಶನ ನೀಡುತ್ತಿದ್ದರೂ ಕರಾವಳಿ ಭಾಗದ ಎಲ್ಲಾ ಕಲಾವಿದರು ಒಟ್ಟು ಸೇರಿ ಸಂಘಟನಾತ್ಮಕವಾಗಿ ಬೆಳೆದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತಿದ್ದಾರೆ” ಎಂದು ಹೇಳಿದರು.
    ಉಡುಪಿಯ ವಿದ್ವಾನ್ ರಾಮಕೃಷ್ಣ ಕೊಡಂಚ ಅವರು ನಾಟ್ಯ ಶಾಸ್ತ್ರದ ಪ್ರಥಮ ಅಧ್ಯಾಯದ ವಿವರಣೆ ನೀಡಿ ಭರತಮುನಿಗೆ ನುಡಿ ನಮನ ಅರ್ಪಿಸಿದರು. ಕರ್ನಾಟಕ ಕರಾವಳಿ ನೃತ್ಯ ಕಲಾ ಪರಿಷತ್ ಅಧ್ಯಕ್ಷ ವಿದ್ವಾನ್ ಯು.ಕೆ. ಪ್ರವೀಣ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ವಿದ್ವಾನ್ ಸುರೇಶ್ ಅತ್ತಾವರ್ ವೇದಿಕೆಯಲ್ಲಿದ್ದರು. ಪರಿಷತ್ ಪ್ರಧಾನ ಕಾರ್ಯದರ್ಶಿ ವಿದ್ವಾನ್ ಸುಧೀರ್ ರಾವ್ ಕೊಡವೂರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ವಿದುಷಿ ರಾಜಶ್ರೀ ಉಳ್ಳಾಲ್ ವಂದಿಸಿ, ವಿದುಷಿ ಸುಲೋಚನಾ ವಿ.ಭಟ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಇವರ ಶಿಷ್ಯರಿಂದ ನೃತ್ಯ ಪ್ರದರ್ಶನ ಜರಗಿತು.

    Share. Facebook Twitter Pinterest LinkedIn Tumblr WhatsApp Email
    Previous Articleಮತ್ತೆ ಬಂದಿದೆ.. ಎಲ್ಲರ ನೆಚ್ಚಿನ ‘ಚಿಲಿಪಿಲಿ’ ಚಿಣ್ಣರ ಬೇಸಿಗೆ ಶಿಬಿರ | ಏಪ್ರಿಲ್ 14ರಿಂದ ಮೇ 1
    Next Article ಶ್ರೀ ಆಂಜನೇಯ ಮಂತ್ರಾಯಲದಲ್ಲಿ ತಾಳಮದ್ದಳೆ 
    roovari

    Add Comment Cancel Reply


    Related Posts

    ಯಶಸ್ವಿಯಾಗಿ ಸಂಪನ್ನಗೊಂಡ ‘ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ’

    February 20, 2026

    ಕನ್ನಡ ಭವನದಲ್ಲಿ ‘ಕಾಸರಗೋಡು-ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026’ | ಫೆಬ್ರವರಿ 22

    February 20, 2026

    ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ‘ನೃತ್ಯ ಸಿಂಚನ’ | ಫೆಬ್ರವರಿ 21

    February 19, 2026

    ಉಜಿರೆಯಲ್ಲಿ ಧರಿತ್ರಿ ಭಿಡೆ ಮತ್ತು ಹಂಸಿನೀ ಭಿಡೆ ಸಹೋದರಿಯರ ಭರತನಾಟ್ಯ ರಂಗಪ್ರವೇಶ | ಫೆಬ್ರವರಿ 21

    February 19, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.