ಬೆಂಗಳೂರು : ಖ್ಯಾತ ಭರತನಾಟ್ಯ ಕಲಾವಿದೆ ಹಂಸ ಮೊಯ್ಲಿ ಇವರು ದಿನಾಂಕ 30-06-2024ರ ಭಾನುವಾರದಂದು ಬೆಂಗಳೂರಿನಲ್ಲಿ ನಿಧನರಾದರು.
ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಕೇಂದ್ರ ಸಚಿವರಾದ ಎಂ.ವೀರಪ್ಪ ಮೊಯ್ಲಿ ಇವರ ಪುತ್ರಿಯಾದ 46 ವರ್ಷದ ಹಂಸ ಮೊಯ್ಲಿ ಖ್ಯಾತ ಭರತನಾಟ್ಯ ಕಲಾವಿದೆ ಮತ್ತು ಪ್ರಾಯೋಗಿಕ ನೃತ್ಯ ಸಂಯೋಜಕಿಯಾಗಿದ್ದು, ದೇವದಾಸಿಯರ ಜೀವನವನ್ನು ಆಧರಿಸಿದ ತಮಿಳು ಚಲನಚಿತ್ರ ‘ಶೃಂಗಾರಂ’ನಲ್ಲಿ ನಟಿಸಿದ್ದರು ಮತ್ತು ಅಧ್ಯಾತ್ಮ, ಯೋಗ ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

