ಉಡುಪಿ : ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು ಮತ್ತು ನೃತ್ಯನಿಕೇತನ ಕೊಡವೂರು ಜಂಟಿ ಆಶ್ರಯದಲ್ಲಿ ಆರಂಭಗೊಂಡಿದ್ದ ‘ನೃತ್ಯ ಶಂಕರ’ ಸರಣಿ ಕಾರ್ಯಕ್ರಮವು ದಿನಾಂಕ 29-01-2024ರ ಸೋಮವಾರ ಸಂಜೆ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ.
ಮಂಗಳೂರಿನ ಮಾನಸ ಕುಲಾಲ್ ನೃತ್ಯ ಪ್ರದರ್ಶನ ನೀಡಲಿದ್ದು, ಈ ಕಾರ್ಯಕ್ರಮವು ಸಂಜೆ ಗಂಟೆ 6.25 ರಿಂದ ನಡೆಯಲಿದೆ. ಕೆ. ಧರ್ಣಪ್ಪ ಸಾಲಿಯಾನ್ ಹಾಗೂ ಜಯಲಕ್ಷ್ಮಿ ಡಿ. ಸಾಲಿಯಾನ್ ದಂಪತಿಗಳ ಸುಪುತ್ರಿಯಾಗಿರುವ ಮಾನಸ ಕುಲಾಲ್ ತನ್ನ ನೃತ್ಯ ಅಭ್ಯಾಸವನ್ನು ಹದಿನೈದು ವರ್ಷಗಳಿಂದ ಮಂಗಳೂರಿನ ಭರತಾoಜಲಿ (ರಿ) ಕೊಟ್ಟಾರ, ನೃತ್ಯ ಸಂಸ್ಥೆಯ ಗುರು ಶ್ರೀಮತಿ ಪ್ರತಿಮಾ ಶ್ರೀಧರ್ ಹಾಗೂ ಗುರು ಶ್ರೀ ಶ್ರೀಧರ ಹೊಳ್ಳ ಇವರಲ್ಲಿ ಪಡೆಯುತ್ತಿದ್ದಾರೆ.
ಭರತನಾಟ್ಯದಲ್ಲಿ ವಿದ್ವತ್ ಪೂರ್ಣಗೊಳಿಸಿರುವ ಇವರು ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿಯ ವತಿಯಿಂದ ಶಿಷ್ಯ ವೇತನವನ್ನು ಪಡೆದಿರುತ್ತಾರೆ.
ಹಲವಾರು ಏಕ ವ್ಯಕ್ತಿ ನೃತ್ಯ ಪ್ರದರ್ಶನಗಳನ್ನು ನೀಡಿರುವ ಇವರು ತನ್ನ ಗುರುಗಳೊಂದಿಗೆ 200 ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಸಕ್ರಿಯ ಹಾಗೂ ಪ್ರಧಾನ ಸದಸ್ಯೆಯಾಗಿ ಭಾಗವಹಿಸಿರುವುದರೊಂದಿಗೆ. ತಮ್ಮ ಗುರುಗಳ ಸಂಸ್ಥೆಯಲ್ಲಿ ಸಹಶಿಕ್ಷಕಿಯಾಗಿಯೂ ಕಲಾಸೇವೆಗೈಯುತ್ತಿದ್ದಾರೆ.
ಪ್ರಸ್ತುತ ದಿ ಭಾರತ್ ಅಕಾಡೆಮಿ ಎoಬ ಶಾಲೆಯಲ್ಲಿ ಅಡ್ಮಿನ್ ಮತ್ತು ಅಕೌಂಟ್ಸ್ ಎಕ್ಸಿಕ್ಯೂಟಿವ್ ಆಗಿ ಉದ್ಯೋಗ ಮಾಡುತ್ತಿರುವ ಇವರು Dfrolics ಎoಬ ನೃತ್ಯ ಸಂಸ್ಥೆಯಲ್ಲಿ ಭರತನಾಟ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.