ಮಂಗಳೂರು : ಕಲಾಸೂರ್ಯ ನೃತ್ಯಾಲಯ ಮಂಗಳೂರು ಇವರು ಇತ್ತೀಚಿನ ಕೆಲವು ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿರುವ ಸಂಸ್ಥೆ. ವಿದ್ವಾನ್ ದೀಪಕ್ ಕುಮಾರ್ ಪುತ್ತೂರು ಇವರ ಶಿಷ್ಯೆಯಾದ ವಿದುಷಿ ಸೌಜನ್ಯ ಪಡ್ವೆಟ್ನಾಯರವರು ನೃತ್ಯ ಶಿಕ್ಷಕಿಯಾಗಿದ್ದು, ದಿನಾಂಕ 10 ಆಗಸ್ಟ್ 2025ರಂದು ಮಂಗಳೂರಿನ ಕಾಪಿಕಾಡಿನ ಶ್ರೀರಾಮ ನಿವಾಸದಲ್ಲಿ ‘ಕಲಾಭವ’ ಎಂಬ ಸರಣಿ ನೃತ್ಯ ಕಾರ್ಯಕ್ರಮದ ಮೊದಲ ಆವೃತ್ತಿಯನ್ನು ಉದ್ಘಾಟನೆ ಮಾಡಲಾಯಿತು.
ಈ ಕಾರ್ಯಕ್ರಮವನ್ನು ನಿವಾಸದ ಮಾಲಕರಾದ ಶ್ರೀ ರಮೇಶ ಭಟ್ ಸರವು ಉದ್ಘಾಟಿಸಿ, ಪ್ರಾಸ್ತಾವಿಕ ಮಾತಿನಲ್ಲಿ ಸೌಜನ್ಯಾರವರ ಪತಿ ಶ್ರೀ ವಿಕ್ರಂ ಪಡ್ವೆಟ್ನಾಯರವರು ಕಾರ್ಯಕ್ರಮದ ಉದ್ದೇಶಗಳನ್ನು ವಿವರವಾಗಿ ತಿಳಿಸಿದರು. ಸಂಸ್ಥೆಯ ವಿದ್ಯಾರ್ಥಿನಿ ಕುಮಾರಿ ಸ್ನೇಹ ಭಾಪಟ್ ಪ್ರಾರ್ಥನೆಗೈದರು. ಸಂಸ್ಥೆಯ ಶಿಕ್ಷಕಿ ವಿ. ಸೌಜನ್ಯ ಪಡ್ವೆಟ್ನಾಯರವರು ಸ್ವಾಗತಗೈದರು. ನಂತರ ಪುತ್ತೂರಿನ ಪ್ರಖ್ಯಾತ ಭರತನಾಟ್ಯ ದಂಪತಿ – ಕಲಾದೀಪ ಎಂದು ಹೆಸರು ಪಡೆದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾರವರ ಅಮೋಘ ಭರತನಾಟ್ಯ ಕಾರ್ಯಕ್ರಮ ನಡೆದು ಪ್ರೇಕ್ಷಕರು ಬಹಳ ಸಂಭ್ರಮಪಟ್ಟರು. ಕೊನೆಯಲ್ಲಿ ಅಭ್ಯಾಗತರಾದ ಸರವು ರಮೇಶ್ ಭಟ್ ಅಲ್ಲದೆ ಶ್ರೀಮತಿ ರೇಶ್ಮಾ ಮತ್ತು ಶ್ರೀಮತಿ ಸತ್ಯಶೀಲರವರು ತಮ್ಮ ಅಭಿಪ್ರಾಯ, ಮೆಚ್ಚುಗೆಯನ್ನು ವೇದಿಕೆಯಲ್ಲಿ ಹಂಚಿಕೊಂಡರು.