ಶ್ರೀಲಂಕಾ: ಉಳ್ಳಾಲ ನಾಟ್ಯನಿಕೇತನದ ನಿರ್ದೇಶಕಿ, ನೃತ್ಯಗುರು, ಕರ್ನಾಟಕ ಕಲಾಶ್ರೀ ಪುರಸ್ಕೃತ ವಿದುಷಿ ರಾಜಶ್ರೀ ಉಳ್ಳಾಲ್ ನಿರ್ದೇಶನದಲ್ಲಿ ಶ್ರೀಲಂಕಾದ ಜಾಫ್ನಾದಲ್ಲಿ ನಡೆದ ಭರತನಾಟ್ಯ, ಸ್ಯಾಕ್ಸೋಫೋನ್ ಮತ್ತು ಮೃದಂಗ ನಾದವೈಭವಂ ಕಾರ್ಯಕ್ರಮವು ದಿನಾಂಕ 23-07-2023ರಂದು ನಡೆದಿದ್ದು, ಹಿರಿಯ ಕಲಾವಿದೆಯರ ತಂಡ ಭರತನಾಟ್ಯ ಪ್ರದರ್ಶನ ನೀಡಿದೆ.
ನಾಟ್ಯ ನಿಕೇತನದ ವಿದುಷಿ ರಾಜಶ್ರೀ ಉಳ್ಳಾಲ್, ವಗ್ಗ ನಾಟ್ಯ ನಿಕೇತನದ ವಿನುತಾ ಪ್ರವೀಣ್ ಗಟ್ಟಿ, ಪುತ್ತೂರು ನೃತ್ಯೋಪಾಸನಾ ಕಲಾ ಕೇಂದ್ರದ ನೃತ್ಯಗುರು ಶಾಲಿನಿ ಆತ್ಮಭೂಷಣ್, ಚಂದ್ರಿಕಾ, ಕವಿತಾ ಯಶ್‌ಪಾಲ್, ಡಾ.ಪ್ರಿಯಾ ದಿಲ್‌ರಾಜ್ ಆಳ್ವ, ಮತ್ತು ದಿವ್ಯಾ ಸಂದೀಪ್ ನೃತ್ಯ ಪ್ರದರ್ಶನ ನೀಡಿದರು. ಹಾಗೂ ಕಲಾರತ್ನ ಜಯರಾಮ ಮಂಗಳೂರು, ಯುವ ಕಲಾಮಣಿ ಪುತ್ತೂರು ನಿಕ್ಷಿತ್ ಬೆಂಗಳೂರು, ಡಾ.ಎರ್ಲಾಲೈ ಶಿವಶಕ್ತಿನಾಥನ್, ಡಾ.ಟಿ.ಎನ್.ರಘುನಾಥನ್ ಇವರಿಂದ ಸ್ಯಾಕ್ರೋಫೋನ್ ಮತ್ತು ಮೃದಂಗ ನಾದವೈಭವಂ ನಡೆಯಿತು.
ಈ ಕಾರ್ಯಕ್ರಮಕ್ಕೆ ಮಂಗಳೂರಿನ ಕೃಷ್ಣಪ್ಪ ಮನೋಹರ್ ಸಹಕರಿಸಿದರು. ಜಾಫ್ನಾದ ಚುನ್ನಕಂ ಎಂಬಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎಲಾಕಲಿ ವೆಸ್ಟ್ ಶ್ರೀವಿನಯಾಗರ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಸಹಯೋಗ ನೀಡಿತು.