ಬೆಂಗಳೂರು : ಕಳೆದ 55 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದು, ತನ್ನದೇ ಆದ ಮಹತ್ವದ ಸ್ಥಾನವನ್ನು ಪಡೆದಿರುವ ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ಕಾಲೇಜು ಹೊಸ ಶೈಕ್ಷಣಿಕ ವರ್ಷದ ಪತ್ರಿಕೋದ್ಯಮದ ತರಗತಿಗಳನ್ನು ಆರಂಭಿಸುತ್ತಿದೆ. ಆಗಸ್ಟ್ 2023ರಿಂದ ಆರಂಭವಾಗಲಿರುವ ಒಂದು ವರ್ಷದ ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮದ ಪ್ರವೇಶಕ್ಕೆ ಅರ್ಹರಿಂದ ಅರ್ಜಿಆಹ್ವಾನಿಸಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿರುವ ಹಲವು ಸಾಧಕರು ಇಲ್ಲಿ ವಿಶೇಷ ತರಬೇತಿ ನೀಡಲಿದ್ದಾರೆ. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಕಾರ್ಪೊರೇಟ್ ಜರ್ನಲಿಸಂ ಈ ಮೂರೂ ಕ್ಷೇತ್ರದಲ್ಲಿ ಇಲ್ಲಿ ವಿಶೇಷ ತರಬೇತಿ ನಡೆಯಲಿದ್ದು, ಕಾಲಕ್ಕೆ ತಕ್ಕಂತೆ ಪಠ್ಯಕ್ರಮದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಲಾಗಿದೆ. ಆನ್‌ಲೈನ್ ಪತ್ರಿಕೋದ್ಯಮ, ಸಾಮಾಜಿಕ ಜಾಲ ತಾಣಗಳ ನಿಯಂತ್ರಣ ಹಾಗೂ ನಿರ್ವಹಣೆಯಂತಹ ನೂತನ ಬೆಳವಣಿಗೆಗಳನ್ನು ಕಲಿಸಲಾಗುವುದು. ಯಾವುದೇ ಪದವಿ ಪಡೆದವರು ಅರ್ಜಿಸಲ್ಲಿಸಬಹುದಾಗಿದೆ. ತರಗತಿಗಳು ಆಗಸ್ಟ್ ತಿಂಗಳ ಮೊದಲ ವಾರದಿಂದ ಆರಂಭವಾಗಲಿದೆ. ಪ್ರವೇಶಕ್ಕೆ ಮತ್ತು ಇತರ ವಿವರಗಳಿಗೆ ಬೆಳಿಗ್ಗೆ 10ರಿಂದ ಸಂಜೆ 6ಗಂಟೆಯವರೆಗೂ ಭಾರತೀಯ ವಿದ್ಯಾ ಭವನದ ಕಚೇರಿಯನ್ನು ಸಂಪರ್ಕಿಸಬಹುದು.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9538181140