ಮಂಗಳೂರು : ಮಧುರತರಂಗ (ರಿ.), ದ.ಕ. ಮಂಗಳೂರು ಅರ್ಪಿಸುವ ಶ್ರೀ ಲಕ್ಷ್ಮೀ ವೆಂಕಟರಮಣ ಮಠ ಪೋಳ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಹಕಾರದೊಂದಿಗೆ ‘ಭಾವ-ಗಾನಾಮೃತ ಸಮೂಹ ಗಾಯನ’ 2023ನೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜ್ಯೂ. ರಾಜ್‌ಕುಮಾರ್ ಖ್ಯಾತಿಯ, ಕರ್ನಾಟಕ ಸ್ವರಕಂಠೀರವ, ಸ್ವರತಪಸ್ವಿ ಜಗದೀಶ ಶಿವಪುರ ಮತ್ತು ಬಳಗದವರಿಂದ ದಿನಾಂಕ 22-11-2023ನೇ ಬುಧವಾರ ಸಂಜೆ ಗಂಟೆ 4.30ರಿಂದ ಪೋಳ್ಯ ಶ್ರೀವಾರಿ ವೇದಿಕೆ, ಶ್ರೀನಿವಾಸ ಸಭಾಭವನದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವನ್ನು ಶ್ರೀ ಲಕ್ಷ್ಮೀವೆಂಕಟರಮಣ ಪೋಳ್ಯ ಮಠದ ಅಧ್ಯಕ್ಷರಾದ ಶ್ರೀ ಉಮಾಶಂಕರ ಎದುರ್ಕಳ ಇವರು ಜ್ಯೋತಿ ಬೆಳಗಿ ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಇವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹಿರಿಯ ಗಾಯಕ ಕಲಾವಿದರಾದ ಶ್ರೀ ಪ್ರಭಾಕರ ಆಚಾರ್ಯ ಎನ್. ವಿಟ್ಲ ಮತ್ತು ಕಲ್ಲಚ್ಚು ಪ್ರಕಾಶನದ ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಪುರಸ್ಕೃತ ಶ್ರೀ ಮಹೇಶ್ ಆರ್ ನಾಯಕ್ ಇವರುಗಳನ್ನು ಸನ್ಮಾನಿಸಲಾಗುವುದು.
ಮಧುರತರಂಗದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ತಮಗೆಲ್ಲರಿಗೂ ಆದರದ ಸ್ವಾಗತ ಕೋರಿದ್ದಾರೆ.