ಚೆನ್ನೈ : ಶ್ರೀ ಶಂಕರ ಭಟ್ ಮತ್ತು ಶ್ರೀಮತಿ ಸುನೀತಾ ಭಟ್ ಇವರ ಸುಪುತ್ರಿ ಕುಮಾರಿ ಭವ್ಯ ಭಟ್. ಪ್ರಸ್ತುತ ಮಡಿಕೇರಿಯಲ್ಲಿ ವಾಸವಾಗಿರುವ ಇವರು ಮೈಸೂರು ವಿಶ್ವ ವಿದ್ಯಾನಿಲಯದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಕರ್ನಾಟಕ ಸಂಗೀತದ ಕುರಿತು ‘ಚೆನ್ನೈ ಕಲಾನಿಧಿ ಫೌಂಡೇಶನ್’ ಆಯೋಜಿಸಿದ ಪ್ರಬಂಧ ರಚನಾ ಸ್ಪರ್ಧೆಯಲ್ಲಿ ಇವರು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ. ಈ ಬಹುಮಾನ ‘Carnatic Music – In Popular Culture’ ಎಂಬ ಪ್ರಬಂಧಕ್ಕೆ ಲಭಿಸಿದೆ. ಕರ್ನಾಟಕ ಮತ್ತು ತಮಿಳುನಾಡಿನಿಂದ ಭಾಗವಹಿಸಿದ 150ಕ್ಕೂ ಮಿಕ್ಕ ಸ್ಪರ್ಧಿಗಳ ಲೇಖನಗಳ ಪೈಕಿ ಭವ್ಯ ಭಟ್ ಅವರ ಪ್ರಬಂಧವು ವಿದ್ವತ್ ಪೂರ್ಣವಾಗಿದ್ದು, ಕರ್ನಾಟಕ ಸಂಗೀತದ ಕುರಿತು ವಿಶೇಷ ಒಳನೋಟಗಳನ್ನು ನೀಡುವುದರಲ್ಲಿ ಯಶಸ್ವಿಯಾಗಿದೆ. ಉತ್ತಮ ಭಾಷಾ ಪ್ರೌಢಿಮೆಯನ್ನು ಮೆರೆದಿರುವ ಲೇಖಕಿಗೆ ಉತ್ತಮ ಭವಿಷ್ಯವಿದೆ ಎಂದು ತೀರ್ಪುಗಾರರು ಅಭಿಪ್ರಾಯ ಪಟ್ಟಿದ್ದಾರೆ.
ಈ ಬಹುಮಾನವು 5000 ರೂಪಾಯಿಗಳ ನಗದು, ಪ್ರಶಸ್ತಿ ಪತ್ರ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಜುಲೈ ಕೊನೆಯ ವಾರದಲ್ಲಿ ಚೆನ್ನೈಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ನಡೆಯಲಿದೆ. ಸಾಹಿತ್ಯ ಗಂಗಾ ಬಳಗದ ಪ್ರತಿಭೆಯಾಗಿರುವ ಭವ್ಯ ಭಟ್ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಕನ್ನಡ ಸಾಹಿತ್ಯ ಮತ್ತು ಸಂಗೀತದ ಕುರಿತು ಅಪಾರ ಆಸಕ್ತಿಯುಳ್ಳ ಇವರ ಲೇಖನಗಳು ಈಗಾಗಲೇ ಪ್ರಕಟವಾಗಿವೆ. ಭವ್ಯ ಭಟ್ ಅವರಿಗೆ ಸಾಹಿತ್ಯ ಗಂಗಾ ಸಂಸ್ಥೆಯ ಮುಖ್ಯಸ್ಥ ವಿಕಾಸ ಹೊಸಮನಿ ಮತ್ತು ಸಂಚಾಲಕ ಡಾ. ಸುಭಾಷ್ ಪಟ್ಟಾಜೆಯವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.