ಮಂಗಳೂರು : ಕಾರ್ಕಳದ ಕ್ರಿಯೇಟಿವ್ ಪುಸ್ತಕ ಮನೆ ಮತ್ತು ಕನ್ನಡ ವಿಭಾಗ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇದರ ಸಹಯೋಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವಿಶೇಷ ಪ್ರಕಟಣೆ ‘ಭೂತಾರಾಧನೆ’ ಮಾಯದ ನಡೆ ಜೋಗದ ನುಡಿ ಡಾ. ಕೆ. ಚಿನ್ನಪ್ಪ ಗೌಡರ ಸಂಶೋಧನಾ ಕೃತಿ ಬಿಡುಗಡೆ ಸಮಾರಂಭವನ್ನು ದಿನಾಂಕ 20 ಡಿಸೆಂಬರ್ 2025ರಂದು ಅಪರಾಹ್ನ 3-00 ಗಂಟೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್.ಸಿ.ಆರ್.ಐ. ಬ್ಲಾಕ್ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರಾದ ಅಶ್ವತ್ ಎಸ್.ಎಲ್. ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಾಹಿತಿ ಮತ್ತು ಜಾನಪದ ವಿದ್ವಾಂಸರಾದ ಡಾ. ಬಿ.ಎ. ವಿವೇಕ ರೈ ಇವರು ಕೃತಿ ಅನಾವರಣಗೊಳಿಸಲಿದ್ದಾರೆ. ಸಾಹಿತಿ ಮತ್ತು ವಿಮರ್ಶಕರಾದ ಡಾ. ರಾಜಶೇಖರ್ ಹಳೆಮನೆ ಇವರು ಕೃತಿ ಅವಲೋಕನ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ದೈವ ನರ್ತಕ ಶೇಖರ ಪರವ ಇವರನ್ನು ಸನ್ಮಾನಿಸಲಾಗುವುದು.

