ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಮತ್ತು ಪ್ರೊ. ಕ.ವೆಂ. ರಾಜಗೋಪಾಲ್ ಜನ್ಮ ಶತಮಾನೋತ್ಸವ ಸಮಿತಿ ಇವರ ಜಂಟಿ ಆಶ್ರಯದಲ್ಲಿ ರಂಗಚಿಂತಕ ಪ್ರೊ. ಕ.ವೆಂ. ರಾಜಗೋಪಾಲ್ ‘ಜನ್ಮ ಶತಮಾನೋತ್ಸವ’ ಕಾರ್ಯಕ್ರಮವನ್ನು ದಿನಾಂಕ 13 ಡಿಸೆಂಬರ್ 2025ರಂದು ಮಧ್ಯಾಹ್ನ 3-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ರಂಗ ಚಿಂತಕ ಡಾ. ಕೆ. ಮರುಳಸಿದ್ಧಪ್ಪ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಮಾನ್ಯ ಶಾಸಕರಾದ ಬಿ.ಕೆ. ಹರಿಪ್ರಸಾದ್ ಇವರು ಉದ್ಘಾಟನೆ ಮಾಡಲಿದ್ದಾರೆ. ಹಿರಿಯ ಸಾಹಿತಿ ಡಾ. ಹಂ. ಪ. ನಾಗರಾಜಯ್ಯ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಡಾ. ಕೆ.ವಿ. ನಾಗರಾಜಮೂರ್ತಿ ಇವರು ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಂಜೆ 7-30 ಗಂಟೆಗೆ ಪ್ರದರ್ಶನ ಕಲಾ ವಿಭಾಗ ತಂಡದವರಿಂದ ‘ಅನುಗ್ರಹ’ ನಾಟಕ ಪ್ರದರ್ಶನಗೊಳ್ಳಲಿದೆ. ಮಧ್ಯಾಹ್ನ 3-30 ಗಂಟೆಗೆ ಪ್ರೊ. ಕ. ವೆಂ. ರಾಜಗೋಪಾಲ್ ವ್ಯಕ್ತಿತ್ವ – ಒಡನಾಟ ಒಂದು ಅವಲೋಕನ ಕಾರ್ಯಕ್ರಮದಲ್ಲಿ ಪ್ರಸಿದ್ಧ ಕವಿ ಡಾ. ಹೆಚ್.ಎಸ್. ಶಿವಪ್ರಕಾಶ್ ಇವರು ‘ನಾ. ಕಂಡಂತೆ ಕ. ವೆಂ.’, ವಿಮರ್ಶಕರಾದ ಪ್ರೊ. ಹೆಚ್. ಎಸ್. ರಾಘವೇಂದ್ರ ರಾವ್ ಇವರು ‘ಕ. ವೆಂ. ವ್ಯಕ್ತಿತ್ವ’ ಮತ್ತು ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಜೆ. ಶ್ರೀನಿವಾಸ ಮೂರ್ತಿ ಇವರು ‘ಕ. ವೆಂ. ಒಡನಾಟ’ದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ.

