Subscribe to Updates

    Get the latest creative news from FooBar about art, design and business.

    What's Hot

    ತಿಂಗಳ ನಾಟಕ ಸಂಭ್ರಮದಲ್ಲಿ ‘ದಿ ಫೈಯರ್’ ನಾಟಕ ಪ್ರದರ್ಶನ | ಮೇ 17

    May 15, 2025

    ಸಾಹಿತಿ ರತ್ನ ಕುಮಾರ್ ಎಂ. ಇವರಿಗೆ ಕ.ಸಾ.ಪ.ದಿಂದ ಸನ್ಮಾನ

    May 15, 2025

    ಕಯ್ಯಾರರ ಕುರಿತ ಕವನವಾಚನಕ್ಕೆ ಆಹ್ವಾನ

    May 15, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಅನೇಕತೆಯಲ್ಲಿ ಏಕತೆಯನ್ನು ಸಾರಿದ’ ಸಂತ ಶ್ರೇಷ್ಠರು ಸಂತ ಶಿಶುನಾಳ ಶರೀಫರ ಜನ್ಮದಿನಾಚಾರಣೆ
    Literature

    ‘ಅನೇಕತೆಯಲ್ಲಿ ಏಕತೆಯನ್ನು ಸಾರಿದ’ ಸಂತ ಶ್ರೇಷ್ಠರು ಸಂತ ಶಿಶುನಾಳ ಶರೀಫರ ಜನ್ಮದಿನಾಚಾರಣೆ

    July 4, 2024No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಂತ ಶಿಶುನಾಳ ಶರೀಫರ ಜನ್ಮದಿನಾಚಾರಣೆ ಕಾರ್ಯಕ್ರಮವನ್ನು ದಿನಾಂಕ 03-07-2024ರಂದು ಏರ್ಪಡಿಸಲಾಗಿತ್ತು.

    ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು “ಬದುಕಿನ ಹಿರಿಮೆಯನ್ನು ಅರಿತು, ಸಮಾಜದಲ್ಲಿನ ತಾರತಮ್ಯಗಳ ನಿವಾರಣೆಗೆ ಶ್ರಮಿಸಿ ಜಾತಿ ಮತಗಳ ಗಡಿದಾಟಿ ಸಂತಶ್ರೇಷ್ಟ ಎನ್ನಿಸಿಕೊಂಡವರು ಸಂತ ಶಿಶುನಾಳ ಶರೀಫರು. ಕಳಸದ ಗುರು ಗೋವಿಂದ ಭಟ್ಟರಿಂದ ಉಪದೇಶವನ್ನು ಪಡೆದುಕೊಂಡು ಎರಡೂ ಧರ್ಮದವರ ವಿರೋಧವನ್ನು ಎದುರಿಸಿ ಜಾತಿ, ಮತಗಳಿಗಿಂತ ‘ಮಾನವ ಧರ್ಮವೇ ಶ್ರೇಷ್ಠ’ ಎಂದು ಬೋಧಿಸಿದವರು. ‘ಬೋಧ ಒಂದೇ, ಬ್ರಹ್ಮನಾದ ಒಂದೇ, ಸಾಧನೆ ಮಾಡುವ ಹಾದಿ ಒಂದೇ, ಆದಿ ಪದ ಒಂದೇ – ಶಿಶುನಾಳಧೀಶನ ಭಾಷೆ ಒಂದೇ’ ಎಂದು, `ಅನೇಕತೆಯಲ್ಲಿ ಏಕತೆ’ಯನ್ನು ಸಾರಿದರು. ಸಹೋದರತ್ವವನ್ನು ಎತ್ತಿ ಹಿಡಿದು ಮತೀಯ ಸೌಹಾರ್ದವನ್ನು ತೋರಿಸಿದ ದಾರ್ಶನಿಕರು ಕಳಸದ ಗುರುಗೋವಿಂದ ಭಟ್ಟರು ಹಾಗೂ ಶಿಶುನಾಳ ಶರೀಫರು. ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಹಾಗೂ ಸಮತೆಯನ್ನು, ಸಮಭಾವ, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದಂಥ ಸಮಾನತೆಯ ಹರಿಕಾರರು. ಇವರಿಬ್ಬರದು ಅಪರೂಪದ ಗುರು-ಶಿಷ್ಯ ಜೋಡಿ. ಹೀಗಾಗಿ ಇಬ್ಬರನ್ನೂ ಒಟ್ಟಾಗಿಯೇ ಸ್ಮರಿಸುವ ಪರಂಪರೆ ನಡೆದು ಬಂದಿದೆ”.

    “ದಿನನಿತ್ಯ ನಡೆಯುವ ಘಟನೆಗಳನ್ನು ಶರೀಫರು ತತ್ವಪದಗಳಲ್ಲಿ ವಿವರಿಸಿ ಅದಕ್ಕೆ ಆಧ್ಯಾತ್ಮಿಕ ಹಿನ್ನೆಲೆ ನೀಡುತ್ತಿದ್ದರು. ‘ಕೋಡಗನ ಕೋಳಿ ನುಂಗಿತ್ತಾ’, ‘ಬಿದ್ದಿಯಬ್ಬೆ ಮುದುಕಿ’, ‘ಹಾವು ತುಳಿದೇನೆ’, ‘ಎಂಥ ಮೋಜಿನ ಕುದುರಿ’, ‘ಗುಡಿಯ ನೋಡಿರಣ್ಣ’, ‘ತರವಲ್ಲ ತಗೀ ನಿನ್ನ ತಂಬೂರಿ’, ‘ಏನ್ ಕೊಡ ಎನ್ ಕೊಡವಾ’, ‘ಸೋರುತಿಹುದು ಮನೆಯ ಮಾಳಿಗಿ’, ‘ಕುಂಬಾರಕೀ ಈಕೆ ಕುಂಬಾರಕಿ’, ‘ಗುಡು ಗುಡಿಯ ಸೇದಿ ನೋಡೋ’ ಮುಂತಾದ ತತ್ವಪದಗಳು ಇಂದಿಗೂ ಜನಸಾಮಾನ್ಯರ ಬಾಯಲ್ಲಿ ನಲಿಯುತ್ತಿವೆ. ಶರೀಫರು ರಚಿಸಿದ ಒಟ್ಟು 410 ತತ್ವ ಪದಗಳು ಈವರೆಗೂ ದಾಖಲಾಗಿದ್ದು, ಅವುಗಳಲ್ಲಿ ದೇವಸ್ತುತಿ, ಗುರುಸ್ತುತಿ, ದಂಡಕ, ಕಾಲಜ್ಞಾನ, ಲಾವಣಿ, ಅಲಾವಿ ಪದಗಳು ಸೇರಿವೆ. ಜೊತೆಗೆ ಗುಣಾತ್ಮಕ ಹಿನ್ನೆಲೆಯಲ್ಲಿ ಬರೆದ ನೀತಿಯನ್ನು ಒಳಗೊಂಡ ಇನ್ನೂ ಅನೇಕ ರಚನೆಗಳಿವೆ. ಹೀಗೆ ತತ್ವ ಪದ ಹಾಡಿ ತತ್ವ ಬೋಧನೆ ಮಾಡಿದವರು ಶರೀಫರು. ದಂಡಕಗಳನ್ನು ಹೇಳಿ ದೇವಿ-ದೇವತೆಯರನ್ನು ಸ್ತುತಿಸಿದರು. ಮಂಗಳಾರತಿಯನ್ನು ಹಾಡಿ ಸರ್ವರಿಗೂ ಮಂಗಳವನ್ನು ಬಯಸಿದರು. ಆದ್ದರಿಂದಲೇ ಶರೀಫರು ‘ಸರ್ವ ಜನರ ಸಂತ’ರಾದರು. ಶರೀಫರ ಕುರಿತು ಇಂದು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಸಂಶೋಧನೆ ಮತ್ತು ವಿಶ್ಲೇಷಣೆಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ”.

    “ತ್ರಿಕಾಲ ಜ್ಞಾನಿಯಾಗಿದ್ದ ಗುರುಗೋವಿಂದ ಭಟ್ಟರು ತಮ್ಮ ಅಂತ್ಯದ ದಿನಗಳು ಸಮೀಪವಾಗುತ್ತಿರುವುದನ್ನು ಅರಿತು ಒಂದು ದಿನ ಶಿಷ್ಯರೆಲ್ಲರನ್ನು ಕರೆದು ‘ನನಗಾ ವಾಂತಿ ಬರೋಂಗ ಆಗ್ತಿದೆ. ಅದ್ರೆ ನಾ ಮಾಡೋ ವಾಂತಿ ಎಲ್ಲೂ ಚೆಲ್ಲಬಾರದು. ಯಾರೂ ತುಳೀಬಾರದು, ಅಂತಹ ಜಾಗ ನೋಡ್ರಪ್ಪಾ’ ಎಂದರು. ಸುತ್ತ ನೆರೆದ ಶಿಷ್ಯರೆಲ್ಲ ಗಾಬರಿಯಾದರು. ಅಷ್ಟು ಹೊತ್ತಿಗೆ ಶರೀಫರು ಅಲ್ಲಿಗೆ ಓಡೋಡಿ ಬಂದರು. ತಮ್ಮ ದೇಹವನ್ನು ಯಾರೂ ತುಳಿಯಲು ಸಾಧ್ಯವಿಲ್ಲ ಎಂದರಿತು, ತಮ್ಮ ಬೊಗಸೆಯನ್ನು ಗುರುಗಳ ಮುಂದೆ ಒಡ್ಡಿದರು, ಗುರುಗಳು ಬೊಗಸೆಯಲ್ಲಿ ಮಾಡಿದ ವಾಂತಿಯನ್ನೇ ‘ಉತ್ಕಷ್ಟ ಪ್ರಸಾದ’ ಎಂದು ಶರೀಫರು ಕುಡಿದು ಬಿಟ್ಟರು. ಈ ಮೂಲಕ ಗುರು ಗೋವಿಂದ ಭಟ್ಟರು ತಮ್ಮೊಳಗಿನ ಆಧ್ಯಾತ್ಮ ಹಾಗೂ ಜ್ಞಾನಶಕ್ತಿಯನ್ನು ಶರೀಫರಿಗೆ ಧಾರೆಯೆರೆದರು. ಇದರ ಫಲವಾಗಿ ಶರೀಫರಲ್ಲೂ ಜ್ಞಾನ ಹಾಗೂ ಜಾಗೃತಶಕ್ತಿ ಮೂಡಿತು. ತಮ್ಮ ಗುರುಗಳು ದೇಹಾಂತ್ಯವಾದ ವರ್ಷ 1870ರ ನಂತರ 19 ವರ್ಷಗಳ ಕಾಲ ಸಾಧನೆಗಳನ್ನು ಮಾಡಿ ಇನ್ನಷ್ಟು ಮಹಾಮಹಿಮರಾದರು. ಶರೀಫರು ಕನ್ನಡದ ಮೊದಲ ಮುಸ್ಲಿಂ ಕವಿ ಎನ್ನುವುದಕ್ಕಿಂತ ಜಾತಿಧರ್ಮವನ್ನು ಮೀರಿದ ದಾರ್ಶನಿಕ ಎನ್ನುವುದು ಸೂಕ್ತ”

    “ಗುರುಗಳಿಂದ ಕಾಲಜ್ಞಾನ ತಿಳಿದ ಶರೀಫರು ಮುಂದೆ ಒದಗಲಿರುವ ಅಪತ್ತುಗಳನ್ನು ಮೊದಲೇ ಗ್ರಹಿಸಿ, ಎಲ್ಲರನ್ನೂ ಎಚ್ಚರಿಸಿದರು. ಮುಂದೆ ಗುರುಗಳಾದ ಗೋವಿಂದ ಭಟ್ಟರಂತೆ ಶರೀಫರು ಕೂಡ ತಮ್ಮ ಅಂತ್ಯಕಾಲ ಸಮೀಪವಾಗುತ್ತಿರುವುದನ್ನು ಜ್ಞಾನಶಕ್ತಿಯಿಂದ ತಿಳಿದು. ‘ಬಿಡತೀನಿ ದೇಹ ಬಿಡತೇನಿ, ಕೊಡತೀನಿ ಭೂಮಿಗೆ, ಇಡತೀನಿ ಮಹಿಮರ ನಡತೀ ಹಿಡಿದು, ಜೀವನ ಬಾಧೆಗೆದ್ದು ಶಿವಲೋಕದೊಳಗೆ ನಾ’ ಎಂದು ನುಡಿದು ದೇಹತ್ಯಾಗ ಮಾಡಿ ಅಖಂಡದಲ್ಲಿ ನಿಂತರು. ಶಿಶುನಾಳದ ಶರೀಫರ ಗದ್ದುಗೆ ಇಂದಿಗೂ ಕೋಮು ಸೌಹಾರ್ದತೆ, ಹಿಂದೂ-ಮುಸ್ಲಿಂ ಭಾವೈಕ್ಯತೆ, ಭ್ರಾತೃತ್ವದ ಬಂಧುರತೆಗೆ ಸಾಕ್ಷಿಯಾಗಿದ್ದು, ಶರೀಫ-ಗೋವಿಂದ ಭಟ್ಟರ ಜೋಡಿ ಜಾತಿಮತಗಳ ಗಡಿ ದಾಟಿ ಸಾಧಿಸಿದ ಮಾನವತೆಯ ಎತ್ತರಕ್ಕೆ ನಿದರ್ಶನವಾಗಿದೆ. ಇಂದಿನ ಕಾಲಘಟ್ಟದಲ್ಲಿಯೂ ಈ ಅಚ್ಚರಿಯನ್ನು ನಾವು ನೋಡಬಹುದು. ಒಂದೆಡೆ ‘ಅಲ್ಲಾಹೋ ಅಕ್ಬರ್’ ಘೋಷಣೆ ಕೇಳಿ ಬಂದರೆ ಇನ್ನೊಂದೆಡೆ ‘ಹರ ಹರ ಮಹಾದೇವ್’ ಎಂಬ ಉದ್ಗಾರವನ್ನು ಕೇಳಬಹುದು. ಹಿಂದೂಗಳು ಹಣ್ಣು-ಕಾಯಿ ಅರ್ಪಿಸಿದರೆ, ಮುಸ್ಲೀಮರು ಸಕ್ಕರೆ ಅರ್ಪಿಸಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಪ್ರತಿಯೊಬ್ಬ ಕನ್ನಡಿಗರೂ ಶಿಶುನಾಳಕ್ಕೆ ಭೇಟಿ ನೀಡಿ ಈ ಭಾವೈಕ್ಯತೆಯ ದರ್ಶನವನ್ನು ಪಡೆಯಬಹುದು. ಸಂತ ಶಿಶುನಾಳ ಶರೀಫರ ಚಿಂತನೆಗಳು ಇಂದಿಗೆ ಹೆಚ್ಚು ಪ್ರಸ್ತುತವಾಗಿದೆ” ಎಂದು ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು. ಕಾರ್ಯಕ್ರಮದಲ್ಲಿ ಸಂತ ಶಿಶುನಾಳ ಶರೀಫ ಮತ್ತು ಗೋವಿಂದ ಭಟ್ಟರ ಜೋಡಿ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

    Share. Facebook Twitter Pinterest LinkedIn Tumblr WhatsApp Email
    Previous Article‘ಯಕ್ಷನಂದನ’ ಆಂಗ್ಲ ಭಾಷಾ ಯಕ್ಷಗಾನ ತಂಡದ ವಾರ್ಷಿಕೋತ್ಸವ
    Next Article ಸುರತ್ಕಲ್ಲಿನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೈಂಡ್ ಮ್ಯಾಜಿಕ್ – ಜ್ಞಾಪಕ ಶಕ್ತಿ ವರ್ಧನಾ ವಿಶಿಷ್ಟ ಕಾರ್ಯಾಗಾರ
    roovari

    Add Comment Cancel Reply


    Related Posts

    ಸಾಹಿತಿ ರತ್ನ ಕುಮಾರ್ ಎಂ. ಇವರಿಗೆ ಕ.ಸಾ.ಪ.ದಿಂದ ಸನ್ಮಾನ

    May 15, 2025

    ಕಯ್ಯಾರರ ಕುರಿತ ಕವನವಾಚನಕ್ಕೆ ಆಹ್ವಾನ

    May 15, 2025

    ಪುಸ್ತಕ ವಿಮರ್ಶೆ | ವಿಜಯಲಕ್ಷ್ಮಿ ಶಾನುಭೋಗ್ ಇವರ ‘ವ್ಯೂಹ’ (ಕಥಾಸಂಕಲನ)

    May 15, 2025

    ಸುಳ್ಯದ ಕನ್ನಡ ಭವನದಲ್ಲಿ ಮಕ್ಕಳ ಕಥಾ ರಚನೆ ಕಾರ್ಯಾಗಾರ | ಮೇ 30

    May 15, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.