ಮಂಗಳೂರು : ತುಳು ಕೂಟ (ರಿ) ಕುಡ್ಲ ಇದರ ವತಿಯಿಂದ ವಿಷು ಸಂಕ್ರಮಣದ ವಿಶೇಷತೆಯನ್ನು ಸಾರುವ ತುಳುವರ ‘ಬಿಸು ಪರ್ಬೊ ಸಂಭ್ರವೊ’ ಕಾರ್ಯಕ್ರಮವು ದಿನಾಂಕ 14-04-2024ರ ಆದಿತ್ಯವಾರದಂದು ಸಂಜೆ 3-30 ಗಂಟೆಗೆ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಮಂಗಳಾದೇವಿ ಆಡಳಿತ ಮೊಕ್ತೇಸರರಾದ ಶ್ರೀ ಅರುಣ್ ಕುಮಾರ್ ಐತಾಳ್ ಇವರು ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದು, ತುಳು ಕೂಟ (ರಿ) ಕುಡ್ಲ ಇದರ ಅಧ್ಯಕ್ಷರಾದ ಮರೋಳಿ ಬಿ. ದಾಮೋದರ ನಿಸರ್ಗ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ನಮ್ಮ ಕುಡ್ಲದ ತುಳು ವಾರ್ತಾ ವಾಚಕಿ ಡಾ. ಪ್ರಿಯಾ ಹರೀಶ್ ವಿಷುವಿನ ವಿಶೇಷತೆಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದಲ್ಲಿ ಅಪ್ರಕಟಿತ ತುಳು ನಾಟಕಕ್ಕಾಗಿ ತುಳುಕೂಟ ಸಂಯೋಜಿಸಿದ ಸ್ಪರ್ಧೆಯ ವಿಜೇತರಿಗೆ 2023-2024ನೇ ಸಾಲಿನ ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ’ಯ ಪ್ರಥಮ ಬಹುಮಾನ ಶ್ರೀ ಶಶಿರಾಜ್ ರಾವ್ ಕಾವೂರು, ದ್ವಿತೀಯ ಬಹುಮಾನ ನವೀನ್ ಸುವರ್ಣ ಪಡ್ರೆ ಮತ್ತು ತೃತೀಯ ಬಹುಮಾನ ಎಲ್ಲೂರು ಶ್ರೀ ಆನಂದ ಕುಂದರ್ ಇವರಿಗೆ ಪ್ರದಾನ ಮಾಡಲಾಗುವುದು.
ಮಂಗಳೂರಿನ ಅತ್ತಾವರದ ‘ಚಕ್ರಪಾಣಿ ನೃತ್ಯ ಕಲಾ ಕೇಂದ್ರ’ದ ವಿದ್ವಾನ್ ಸುರೇಶ್ ಅತ್ತಾವರ ಇವರ ನಿರ್ದೇಶನದಲ್ಲಿ ಅವರ ಶಿಷ್ಯ ವೃಂದದವರು ‘ಬಿಸು ನೃತ್ಯ ವೈಭವ’ ಪ್ರಸ್ತುತ ಪಡಿಸಲಿದ್ದಾರೆ.