ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಬಿತ್ತಿ’ ದಿನಾಚರಣೆ ಹಾಗೂ ವಾರ್ಷಿಕ ಚಟುವಟಿಕೆಗಳ ಬಿಡುಗಡೆ ಸಮಾರಂಭವು ದಿನಾಂಕ 28 ಅಕ್ಟೋಬರ್ 2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ವಾರ್ಷಿಕ ಚಟುವಟಿಕೆಯನ್ನು ಬಿಡುಗಡೆಗೊಳಿಸಿ ‘ಬರವಣಿಗೆಯ ಮಹತ್ವ’ದ ಕುರಿತು ಉಪನ್ಯಾಸ ನೀಡಲು ಆಗಮಿಸಿದ ಕಾರ್ಕಳ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಲೋಚನಾ ಪಚ್ಚಿನಡ್ಕ ಮಾತನಾಡಿ “ಬದುಕಿನಲ್ಲಿ ಆತಂಕಗಳು, ಸವಾಲುಗಳು ಸಹಜ. ಎಲ್ಲಾ ಕಾಲದ ಸಮಾಜದಲ್ಲೂ ಭಯ, ಕ್ರೌರ್ಯ, ಅನಾಚಾರಗಳು ಇರುತ್ತವೆ. ಆದರೆ ಅದನ್ನೇ ಮುಂದು ಮಾಡಿ ಭರವಸೆಯನ್ನು ಕಳೆದುಕೊಳ್ಳದಿರಿ. ನಿಮ್ಮ ನಡವಳಿಕೆ ಮತ್ತು ಬರವಣಿಗೆಯಲ್ಲಿ ಇವನ್ನು ಮೀರುವ, ಮಾನವತೆಯ ಕಡೆಗೆ ಹೆಜ್ಜೆ ಹಾಕುವ ಪ್ರಯತ್ನವನ್ನು ಮುಂದುವರಿಸಿ. ಕನ್ನಡ ಭಾಷೆ ನಮ್ಮ ಭಾವದ ಭಾಷೆ. ಕನ್ನಡಿಗರಾಗಿರುವುದಕ್ಕೆ ನಾವು ಹೆಮ್ಮೆ ಪಡಬೇಕು. ಸಾಹಿತ್ಯದ ಓದು ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.” ಎಂದರು.
ಅಧ್ಯಕ್ಷತೆ ವಹಿಸಿದ ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಸೋಮಣ್ಣ ಮಾತನಾಡಿ “ಕನ್ನಡ ವಿಭಾಗದ ಬಿತ್ತಿ ಪತ್ರಿಕೆಗೆ 33 ವರ್ಷಗಳ ಇತಿಹಾಸವಿದೆ. ಅನೇಕ ಕನ್ನಡದ ಬರಹಗಾರರನ್ನು ರೂಪಿಸಿದ ಹೆಗ್ಗಳಿಕೆ ಇದಕ್ಕಿದೆ. ಓದು ಮತ್ತು ಬರವಣಿಗೆ ಮನುಷ್ಯನ ಆಲೋಚನೆಯನ್ನು ಉತ್ತಮಗೊಳಿಸುತ್ತದೆ.” ಎಂದರು.
ಸಮಾರಂಭದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೌಡ, ಡಾ. ಧನಂಜಯ ಕುಂಬ್ಳೆ, ಡಾ. ಯಶುಕುಮಾರ್ ಹಾಗೂ ‘ಬಿತ್ತಿ’ ಪತ್ರಿಕೆಯ ಸಂಪಾದಕಿ ಸಂಧ್ಯಾ ಎನ್. ಉಪಸ್ಥಿತರಿದ್ದರು. ಕನ್ನಡ ಎಂ.ಎ. ವಿದ್ಯಾರ್ಥಿಗಳಾದ ಶಂಕರಿ, ರೇಷ್ಮಾ ಎಂ. ಬಾರಿಗ, ಸಲೀಂ ಸುಳ್ಯ ಕವಿತೆ ವಾಚಿಸಿದರು.
‘ಬಿತ್ತಿ’ ಪತ್ರಿಕೆಯ ಸಂಪಾದಕಿ ಸಂಧ್ಯಾ ಎನ್. ಸ್ವಾಗತಿಸಿ, ಉಪಸಂಪಾದಕಿ ಪ್ರತೀಕ್ಷಾ ನಿರೂಪಿಸಿ, ಪೂಜಾ ವಂದಿಸಿದರು.
Subscribe to Updates
Get the latest creative news from FooBar about art, design and business.
Previous Articleಲೋಕಾರ್ಪಣೆಗೊಂಡ ಪ್ರೊ. ಎ.ವಿ. ನಾವಡ ಸಂಪಾದಿಸಿದ ‘ಮುದ್ದಣ ಕೃತಿ ಕರಜನ’
Related Posts
Comments are closed.