9 ಮಾರ್ಚ್ 2023 ಮಂಗಳೂರು: ಕನ್ನಡ ಸಾರಸ್ವತ ಲೋಕದ ಹಿರಿಯ ವಿದ್ವಾಂಸ ದಿ. ಮುಳಿಯ ತಿಮ್ಮಪ್ಪಯ್ಯ ಇವರ ಸ್ಮರಣಾರ್ಥ ಮುಳಿಯ “ತಿಮ್ಮಪ್ಪಯ್ಯ ಪ್ರಶಸ್ತಿ” ನೀಡಲಾಗುತ್ತಿದೆ. ಖ್ಯಾತ ವಿದ್ವಾಂಸ ಡಾ| ಬಿ.ಎ. ವಿವೇಕ ರೈಯವವರು ಅಧ್ಯಕ್ಷರಾಗಿರುವ ಈ ಆಯ್ಕೆ ಸಮಿತಿಯು ಈ ಪ್ರಶಸ್ತಿಗೆ ಹಿರಿಯ ಲೇಖಕಿ ಚಿಂತಕಿ ಹಾಗೂ ಸಂಶೋಧಕಿ ಬಿ.ಎಂ. ರೋಹಿಣಿಯವರು ಆಯ್ಕೆ ಮಾಡಿದೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಪ್ರದಾನ ಮಾಡುವ ಈ ಪ್ರಶಸ್ತಿಯ ಹತ್ತು ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಮಾರ್ಚ್ 25ರಂದು ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಹಿರಿಯ ಲೇಖಕಿ ಚಿಂತಕಿ ಹಾಗೂ ಸಂಶೋಧಕಿ ಬಿ.ಎಂ. ರೋಹಿಣಿಯವರು ಮುಳಿಯ “ತಿಮ್ಮಪ್ಪಯ್ಯ ಪ್ರಶಸ್ತಿ”ಗೆ ಆಯ್ಕೆ
Previous Articleಅಕ್ಷತಾರಾಜ್ ಪೆರ್ಲರ ‘ಅವಲಕ್ಕಿ ಪವಲಕ್ಕಿ’ ಪುಸ್ತಕ ಲೋಕಾರ್ಪಣೆ
