Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ಜಂಗಮ ಕಲೆಕ್ಟಿವ್ಸ್‌ ತಂಡದಿಂದ ನಾಟಕ ಪ್ರದರ್ಶನ
    Drama

    ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ಜಂಗಮ ಕಲೆಕ್ಟಿವ್ಸ್‌ ತಂಡದಿಂದ ನಾಟಕ ಪ್ರದರ್ಶನ

    August 23, 2024No Comments4 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ‘ಗುರುತು’ ಅನ್ನುವುದು ಕೆಲವರಿಗೆ ಹೆಮ್ಮೆಯಾದರೆ, ಕೆಲವರಿಗದು ಅಸಹ್ಯ, ಹಿಂಸೆ, ಜೀವನದ್ದುದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ. ಹಲವು ಬಾರಿ ‘ಉಳಿವಿಗಾಗಿ’ ಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇ’ ಬದುಕು’ ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುವುದು ಸಾಗದ ದಾರಿಯಾಗಿ ಕಂಡು ದಣಿವಾಗುತ್ತದೆ. ದಣಿವಾಗುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡುವಂತೆಯೂ ಇರುವುದಿಲ್ಲ. ಕತ್ತಲ ದಾರಿಯಲ್ಲಿ ಮಿಂಚುಹುಳುಗಳಿಗಾಗಿ ಜೀವ ಆತುಕೊಳ್ಳಬೇಕಾಗುತ್ತದೆ. ಆಗ ಕತ್ತಲೊಂದು ಸಂಭ್ರಮ ಬೆಳಕೊಂದು ಸಂಭ್ರಮ. ಹೀಗೆ ಗುರುತಿನ ಸುತ್ತ ಇರುವ ಹಲವು ಸಂಕೀರ್ಣ ವೀರೋಧಭಾಸಗಳನ್ನು ಎದುರುಗೊಳ್ಳುವ ಕಥನಗಳ ಗೊಂಚಲು’ ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’. ಇಲ್ಲಿ ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘Waiting for a Visa’ ಒಂದು ರೂಪಕವಾಗಿ ಕಂಡು ಅವರು ನಿಜಕ್ಕೂ ಪ್ರವೇಶ ಕೇಳುತ್ತಿರುವುದು ಎಲ್ಲಿಗೆ ? ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ.

    ಜಂಗಮ ಕಲೆಕ್ಟಿವ್ ಬೆಂಗಳೂರು ಪ್ರಸ್ತುತ ಪಡಿಸುವ ಈ ನಾಟಕದ ಪಠ್ಯ ಆಕರ : ಎನ್.ಕೆ. ಹನುಮಂತಯ್ಯ, ಚಂದ್ರಶೇಕರ್ ಕೆ., ರಚನೆ, ವಿನ್ಯಾಸ, ನಿರ್ದೇಶನ : ಲಕ್ಷ್ಮಣ್ ಕೆ.ಪಿ. ಮತ್ತು ಡ್ರಮಟರ್ಗ್ : ವಿ.ಎಲ್. ನರಸಿಂಹಮೂರ್ತಿ. ಪ್ರದರ್ಶನ ಪಠ್ಯ ವಿನ್ಯಾಸ ಹಾಗೂ ನಟನೆ ಮರಿಯಮ್ಮ ಚೂಡಿ, ಚಂದ್ರ ಶೇಕರ್ ಕೆ., ಶ್ವೇತಾರಾಣಿ ಹೆಚ್. ಕೆ. ಭರತ್ ಡಿಂಗ್ರಿ ಇವರಿಂದ ಮಂಜು ನಾರಾಯಣ್ ಬೆಳಕಿನ ವಿನ್ಯಾಸ ಮಾಡಿದ್ದಾರೆ. ಲಕ್ಷ್ಮಣ ಕೆ.ಪಿ., ಚಂದ್ರಶೇಖರ ಕೆ., ಶ್ವೇತ ರಾಣಿ ಹೆಚ್.ಕೆ., ಮರಿಯಮ್ಮ, ಭರತ ಡಿಂಗ್ರಿ ಮತ್ತು ವಿ.ಎಲ್. ನರಸಿಂಹಮೂರ್ತಿ ಇವರುಗಳು ಈ ನಾಟಕದಲ್ಲಿ ನಟಿಸಿದ್ದಾರೆ.

    ಸೆಪ್ಟೆಂಬರ್ 05ನೇ ತಾರೀಕು ರಂಗಶಂಕರದಲ್ಲಿ ಶೋ ಬುಕ್ ಮಾಡಲು ಲಿಂಕ್ ಉಪಯೋಗಿಸಿ –
    https://in.bookmyshow.com/plays/bob-marley-from-kodihalli/ET00402202

    ಈ ನಾಟಕದ ಮುಂದಿನ ಪ್ರದರ್ಶನಗಳ ವಿವರಗಳು –
    ಮೈಸೂರು – ಆಗಸ್ಟ್ 25
    ಶಿವಮೊಗ್ಗ – ಆಗಸ್ಟ್ 27
    ತುಮಕೂರು – ಆಗಸ್ಟ್ 31

    ಚಿತ್ರದುರ್ಗ – ಸೆಪ್ಟೆಂಬರ್ 01
    ರಂಗಶಂಕರ – ಸೆಪ್ಟೆಂಬರ್ 05
    ತುಮುರಿ – ಸೆಪ್ಟೆಂಬರ್ 28

    ನವದೆಹಲಿ – ಅಕ್ಟೋಬರ್ 24
    ಮುಂಬೈ – ನವೆಂಬರ್ 06
    ಗೋವಾ – ಥೀಯೇಟರ್ ಫೆಸ್ಟಿವಲ್ ನವೆಂಬರ್ 15-20

    ಲಕ್ಷ್ಮಣ ಕೆ.ಪಿ.

    ಲಕ್ಷ್ಮಣ ಒಬ್ಬ ನಟ, ನಿರ್ದೇಶಕ, ನಾಟಕಕಾರ ಮತ್ತು ರಂಗ ವಿನ್ಯಾಸಕ. 2018ರಲ್ಲಿ ಅವರು ಸಿಂಗಾಪುರದ ಇಂಟರ್ಕಲ್ಚರಲ್ ಥಿಯೇಟರ್ ಇನ್ಸ್ಟಿಟ್ಯೂಟ್‌ನಿಂದ ಮತ್ತು 2012ರಲ್ಲಿ ಭಾರತದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಪದವಿ ಪಡೆದರು. ಅವರು ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಾಟಕ ಮಹೋತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರ ಕೆಲಸವು ಮೂಲ ಚಳುವಳಿಗಳು, ಅಂಚಿನ ಸಮುದಾಯಗಳು ಮತ್ತು ಮುಖ್ಯವಾಹಿನಿಯ ಅಂಚಿನಲ್ಲಿರುವ ಸಾಂಸ್ಕೃತಿಕ ಅಭ್ಯಾಸಗಳ ಸುತ್ತ ಕೇಂದ್ರೀಕೃತವಾಗಿದೆ. ರಂಗಭೂಮಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 40 ವರ್ಷದ ಒಳಗಿನ ಯುವ ರಂಗಕರ್ಮಿಗಳಿಗೆ ನೀಡಲಾಗುವ ಶಂಕರ್ ನಾಗ್ ಪ್ರಶಸ್ತಿಯನ್ನು 2023ರಲ್ಲಿ ಲಕ್ಷ್ಮಣ ಪಡೆದರು. ಅಲ್ಲದೆ, ರಂಗಭೂಮಿಗೆ ನೀಡಿದ ಕೊಡುಗೆಗಾಗಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯು ಅವರನ್ನು 2024ರ ಡಿಎಚ್ ಚೇಂಜ್‌ಮೇಕರ್ (ಬದಲಾವಣೆ ತರುವವರು) ಎಂದು ಗೌರವಿಸಿ ಗುರುತಿಸಿದೆ.

    ಚಂದ್ರಶೇಖರ ಕೆ. ನಟ, ನಿರ್ದೇಶಕ, ಹಾಡುಗಾರ, ಬರಹಗಾರ

    ಕನ್ನಡ ರಂಗಭೂಮಿ ಮತ್ತು ಸಿನಿಮಾ ಕ್ಷೇತ್ರದ ಬಹುಮುಖ ಪ್ರತಿಭೆಯ ನಟ. ಹಲವಾರು ಅಂತಾರಾಷ್ಟ್ರೀಯ ರಂಗ ಪ್ರಯೋಗಗಳಲ್ಲಿ ನಟನಾಗಿ ಜಪಾನ್, ಜರ್ಮನಿ, ಲೆಬನಾನ್, ದಕ್ಷಿಣ ಆಫ್ರಿಕಾ, ಸ್ವಿಜರ್ಲ್ಯಾಂಡ್ ದೇಶಗಳನ್ನು ಸುತ್ತಿದ್ದಾರೆ. ಅದಕ್ಕೂ ಮೊದಲು ಜನಮನದಾಟ, ಆದಿಮ, ನೀನಾಸಂ ತಂಡಗಳಲ್ಲಿ ನಟರಾಗಿ ತಂತ್ರಜ್ಞರಾಗಿ ದುಡಿದಿದ್ದಾರೆ. ಗವಿಸಿದ್ದ, ಮಹಾಸಂಪರ್ಕ ಸಿನಿಮಾಗಳಲ್ಲಿ ಮುಖ್ಯ ಪಾತ್ರಧಾರಿಯಾಗಿ ನಟಿಸಿದ್ದಾರೆ. ‘ಕೇರಿ ಹಾಡು’, ‘ಪಂಚಮಪದ’ದಂತಹ ಹೊಸ ಯೋಚನೆಯ ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬೆಂಗಳೂರು ವಿಶ್ವ ವಿದ್ಯಾಲಯದ ಪ್ರದರ್ಶನ ಕಲೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪದವಿ ಪಡೆದಿದ್ದಾರೆ. ಇವರು ಜಂಗಮ ಕಲೆಕ್ಟಿವ್ನ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ತಳಸಮುದಾಯಗಳ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಗಳ ಜೊತೆಯಾಗಿ ನಿರಂತರವಾಗಿ ರಂಗ ಚಳುವಳಿಗಳನ್ನು ಕಟ್ಟುವುದಲ್ಲಿ ತೊಡಗಿಕೊಂಡಿದ್ದಾರೆ. ಸದ್ಯದಲ್ಲೇ ಇವರ ಕಥನಗಳ ಕಟ್ಟೊಂದು ಪ್ರಕಟಣೆಯ ತಯಾರಿಯಲ್ಲಿದೆ. ಸದ್ಯ ‘ಬಾಬ್ ಮಾರ್ಲಿ from ಕೋಡಿಹಳ್ಳಿ’ ನಾಟಕದಲ್ಲಿ ನಟಿಸುತ್ತಿರುವುದು ನಾಟಕದ ಶಕ್ತಿಯನ್ನು ಹೆಚ್ಚಿಸಿದೆ.

    ಶ್ವೇತ ರಾಣಿ ಹೆಚ್.ಕೆ. ನಟಿ, ನಿರ್ದೇಶಕಿ,ವಿನ್ಯಾಸಕಿ

    ಚಿಕ್ಕಂದಿನಿಂದಲೇ ದಲಿತ ಚಳುವಳಿಯ ಒಡನಾಟದಲ್ಲಿ ಬೆಳೆದಿರುವ ಶ್ವೇತಾ ಕನ್ನಡ ರಂಗಭೂಮಿಯ ಹೊಸ ತಲೆಮಾರಿನ ಮಹತ್ವದ ನಿರ್ದೇಶಕರು ‘ನಟನೆ’ಯನ್ನು ತಮ್ಮ ವಿಶೇಷ ಅಧ್ಯಯನ ವಿಷಯವಾಗಿಸಿಕೊಂಡು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಪದವಿ ಪಡೆದಿದ್ದಾರೆ. NSD ಪದವಿಯ ನಂತರ ನೀನಾಸಂ ರಂಗಶಿಕ್ಷಣ ಕ್ಷೇತ್ರದಲ್ಲಿ ಕೆಲವು ವರ್ಷ ನಟನೆಯ ಶಿಕ್ಷಕಿಯಾಗಿ ಕೆಲಸ ಮಾಡಿದ್ದಾರೆ. ಸಾಣೆಹಳ್ಳಿಯ ರಂಗಶಾಲೆಯಲ್ಲಿ ಪ್ರಿನ್ಸಿಪಾಲ್ ಆಗಿ ಒಂದು ವರ್ಷ ಶಾಲೆ ನಡೆಸಿದ ಅನುಭವವಿದೆ. ಕರ್ನಾಟಕದ ಹಲವು ತಂಡಗಳಿಗೆ ತಪ್ಪಿದ ಎಳೆ, ಸೀಗಲ್, ಡಂಪ್, ಫೀದ್ರಾ, ವಾರ್ಷಿಕೋತ್ಸವ, ಈ ಲಯ ಆ ಲಯ, ಆತಂಕವಾದಿಯ ಆಕಸ್ಮಿಕ ಸಾವು ನಾಟಕಗಳು ಸೇರಿ ಇನ್ನು ಹಲವು ಮಹತ್ವದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ರಂಗ ವಿನ್ಯಾಸ ಮತ್ತು ವಸ್ತ್ರವಿನ್ಯಾಸದಲ್ಲಿ ವಿಶೇಷ ಪರಿಣಿತಿ ಇರುವ ಶ್ವೇತಾ ಹತ್ತಾರು ನಾಟಕಗಳಲ್ಲಿ ವಿನ್ಯಾಸಕಿಯಾಗಿ ದುಡಿದು ಆ ಪ್ರಯೋಗಗಳಿಗೆ ಭಿನ್ನ ಆಯಾಮಗಳನ್ನು ಸೃಷ್ಟಿಸಿದ್ದಾರೆ. ಸದ್ಯದಲ್ಲೇ ಅವರ ಅನುವಾದಿತ ಕೃತಿಯೊಂದು ಪ್ರಕಟವಾಗಲಿದೆ.

    ಮರಿಯಮ್ಮ : ನಟಿ, ಹಾಡುಗಾತಿ,ರಂಗಶಿಕ್ಷಕಿ

    ಕಳೆದ ಹನ್ನೆರಡು ವರ್ಷಗಳಿಂದ ಕಲಾವಿದೆಯಾಗಿ, ಗಾಯಕಿಯಾಗಿ, ಮಕ್ಕಳನಾಟಕ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಮರಿಯಮ್ಮರವರ ಊರು ಆಂಧ್ರಪ್ರದೇಶದ ಚೂಡಿ. ರಾಯಲಸೀಮಾ ಮಣ್ಣಿನ ಬದುಕು ಇವರ ದನಿಗೆ ಮತ್ತು ನಟನೆಗೆ ಆ ನೆಲದ ಘಮಲನ್ನು ನೀಡಿದೆ. ಅಜ್ಜಿಯಿಂದ ಕಲಿತ ಸೋಬಾನೆ ಹಾಡು, ಗೌರಿಹಾಡು, ಮಾರಿ ಹಾಡುಗಳು ಇವರ ಸಂಗೀತದ ಕುರಿತ ಜ್ಞಾನವನ್ನು ಲೋಕದೃಷ್ಟಿಯನ್ನು ವಿಸ್ತರಿಸಿವೆ. ಸಂಪ್ರದಾಯಿಕ ಶಾಲಾ ಶಿಕ್ಷಣ ಬಿಟ್ಟು ಪರ್ಯಾಯ ಕಲಿಕೆಗಳ ಮೂಲಕ ವಿದ್ಯಾಭ್ಯಾಸ ಪಡೆದಿದ್ದಾರೆ. ಬೆಂಗಳೂರಿನ ವಿಸ್ತಾರ ಸಂಸ್ಥೆಯಲ್ಲಿ ಬಹು ಶಿಸ್ತಿನ ಕಲಿಕೆಗಳಿಗೆ ತೆರೆದುಕೊಂಡ ಅನುಭವ ಇವರಿಗಿದೆ. ಮುಂದೆ ಸಾಣೇಹಳ್ಳಿ ರಂಗಶಾಲೆಯಲ್ಲಿ ಒಂದು ವರ್ಷ ರಂಗಶಿಕ್ಷಣ ಪಡೆದು ಮುಂದೆ ಶಿವಸಂಚಾರ, ರಾಯಚೂರು ಸಮುದಾಯ, ಶಿವಮೊಗ್ಗ ರಂಗಾಯಣ, ಕಲಬುರ್ಗಿ ರಂಗಾಯಣದಲ್ಲಿ ಕಲಾವಿದೆಯಾಗಿ ಕರ್ನಾಟಕದದ್ಯಂತ ನಾಟಕಗಳ ಭಿನ್ನ ಪಾತ್ರ ಮೂಲಕ ಗುರುತಿಸಿಕೊಂಡಿದ್ದಾರೆ. ಒಂದು ವರ್ಷ ವಿಸ್ತಾರ ರಂಗ ಶಾಲೆಯಲ್ಲಿ ರಂಗಶಿಕ್ಷಕಿಯಾಗಿ ಪಾಠ ಮಾಡಿದ್ದಾರೆ. ಪಂಚಮಪದ ನಾಟಕದ ಇವರ ಹಾಡುಗಾರಿಕೆಗೆ ದನಿಗೆ ಇವರಿಗೊಂದು ಹೊಸ ಅಭಿಮಾನಿ ಬಳಗವೇ ಸೃಷ್ಟಿಯಾಗಿದೆ.

    ಭರತ ಡಿಂಗ್ರಿ : ನಟ, ಸಂಗೀತಗಾರ, ಹಾಡುಗಾರ

    ಕನ್ನಡ ರಂಗಭೂಮಿಯ ಹೊಸ ತಲೆಮಾರಿನ ಭರವಸೆಯ ನಟರಲ್ಲಿ ಒಬ್ಬರಾದ ಭರತ್, ರಾಯಚೂರು ನೆಲದ ಹೋರಾಟ ಪರಂಪರೆಯ ಭಾಗವಾಗಿ ಬೆಳೆದವರು. ಚಿಕ್ಕವಯಸ್ಸಿನಿಂದಲೇ ದಲಿತ ಚಳವಳಿಯ ಹಾಡುಗಾರರಾದ ಡಿಂಗ್ರಿ ನರಸಪ್ಪ ಅವರ ಬೆನ್ನಿಗೆ ಬಿದ್ದು ಬೀದಿ ನಾಟಕಗಳನ್ನ ಮಾಡುತ್ತ ಕಲೆ ಮತ್ತು ಹೋರಾಟದ ಪಾಠ ಕಲಿತವರು. ತಮಟೆ ಸೇರಿ ಚರ್ಮವಾದ್ಯಗಳನ್ನು ನುಡಿಸುವುದರಲ್ಲಿ ಇವರಿಗೆ ವಿಶೇಷ ಪರಿಣಿತಿ ಇದೆ. ನೀನಾಸಂನಲ್ಲಿ ಥಿಯೇಟರ್ ಇನ್ಸ್ಟಿಟ್ಯೂಟ್ ನಿಂದ ಪದವಿ ಪಡೆದು, ಬೆಂಗಳೂರಿನ ಸಂವಾದ-ಬುದಕು ಕಮ್ಯೂನಿಟಿ ಯಲ್ಲಿ ಡಿಪ್ಲೋಮಾ ಇನ್ ಜರ್ನಲಿಸಂ ಮಾಡಿ, ಡಿಜಿಟಲ್ ಮೀಡಿಯಾದಲ್ಲಿ ವಿಡಿಯೋ ಜರ್ನಲಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ರಂಗಭೂಮಿಯಲ್ಲಿ ನಾಟಕಗಳಿಗೆ ಸಂಗೀತ ನಿರ್ದೇಶನ ಮತ್ತು ನಿರ್ವಹಣೆ ಮಾಡುತ್ತಾ ಕರ್ನಾಟಕದ ಹಲವು ತಂಡಗಳಲ್ಲಿ ಕೆಲಸ ಮಾಡಿದ್ದಾರೆ. ದೆಹಲಿಯಲ್ಲಿ ನಡೆದ ಮೆಟಾ ಥಿಯೇಟರ್ ಅವಾರ್ಡ್ ಅನ್ನುವ ರಾಷ್ಟ್ರಮಟ್ಟದ ಥಿಯೆಟರ್ ಫೆಸ್ಟಿವಲ್ ನಲ್ಲಿ ಭಾಗವಹಿಸಿ “ಅತ್ಯುತ್ತಮ ಪೋಷಕ ನಟ” ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚಿಗೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ, ತಮಟೆ ಶಿಬಿರವನ್ನು ಆಯೋಜಿಸಿ ‘ತಮಟೆ ವಾದನ’ ಕಲಿಕೆ ಜೊತೆಗೆ ಸಂವಿಧಾನ ಸಾಕ್ಷರತೆಯ ಚಳುವಳಿ ರೂಪಿಸುವ ಹಾದಿ ಹಿಡಿದಿದ್ದಾರೆ.

    ವಿ.ಎಲ್. ನರಸಿಂಹಮೂರ್ತಿ

    ವಿ.ಎಲ್. ನರಸಿಂಹಮೂರ್ತಿ ದಲಿತ ಸಂಘರ್ಷ ಸಮಿತಿಯ ಚಳವಳಿಯನ್ನು ಸಕ್ರಿಯವಾಗಿ ಅನುಸರಿಸುತ್ತಿದ್ದಾರೆ ಮತ್ತು ಕರ್ನಾಟಕದಲ್ಲಿ ದಲಿತ ಚಳವಳಿ ಹಾಗೂ ಅಂಬೇಡ್ಕರ್ ಬರಹಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಅವರ ತುಲನಾತ್ಮಕ ವಿಮರ್ಶೆ ಮತ್ತು ಬರಹಗಳು ಕರ್ನಾಟಕದ ಯುವ ಕಲಾವಿದರು ಮತ್ತು ಬರಹಗಾರರಿಗೆ ನಿರ್ಣಾಯಕ ಚಿಂತನೆಗೆ ಅವಕಾಶ ನೀಡುತ್ತವೆ. ಅವರು ಸಿನಿಮಾ, ರಂಗಭೂಮಿ ಮತ್ತು ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಆಸಕ್ತಿಯಿಂದ ಬರೆಯುವ ಲೇಖಕರಾಗಿದ್ದಾರೆ. ಪ್ರಸ್ತುತ ಅವರು ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    Share. Facebook Twitter Pinterest LinkedIn Tumblr WhatsApp Email
    Previous Articleಜ್ಞಾನಸೌಧ ಸಭಾಂಗಣದಲ್ಲಿ ‘ಶ್ರಾವಣ ಸಮ್ಮೇಳನ 2024’ | ಆಗಸ್ಟ್ 25
    Next Article ವೈವಿಧ್ಯಮಯ ಭರತನಾಟ್ಯ ಕಾರ್ಯಕ್ರಮ ‘ಪದ್ಮ ಪಲ್ಲವ’
    roovari

    Comments are closed.

    Related Posts

    ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ’ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ | ಮೇ 11

    May 8, 2025

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025

    ಸಮಾರೋಪಗೊಂಡ ರಜಾರಂಗು ‘ಚಂದಕ್ಕಿ ಬಾರೆ ಕಥೆ ಹೇಳೆ’ ಬೇಸಿಗೆ ಶಿಬಿರ

    May 5, 2025

    ಮೈಸೂರು ಮತ್ತು ಬೆಂಗಳೂರಿನಲ್ಲಿ ‘ಎದೆಗೆ ಬಿದ್ದ ಅಕ್ಷರ’ ನಾಟಕ ಪ್ರದರ್ಶನ | ಮೇ 04

    May 3, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.