ಮಂಗಳೂರು : ಪುರಭವನದಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಸಾಯಿ ಶಕ್ತಿ ಬಳಗ ಚಿಲಿಂಬಿ ವತಿಯಿಂದ ಪುರಾಣ ಪುಣ್ಯ ಕಥೆ ‘ಬೊಳ್ಳಿ ಮಲೆತ ಶಿವಶಕ್ತಿಲು’ ತುಳು ಪೌರಾಣಿಕ ನಾಟಕದ ಪ್ರದರ್ಶನ ದಿನಾಂಕ 27-08-2023ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವಧೂತ ವಿನಯ್ ಗುರೂಜಿಯವರು ಮಾತನಾಡುತ್ತಾ “ಯಕ್ಷಗಾನ, ನಾಟಕ ಕಲೆಯಲ್ಲ ಅದೊಂದು ತಪಸ್ಸು. ಮಂಗಳೂರಿನ ಜನರು ಎಲ್ಲರಿಗೂ ಮಂಗಳ ಬಯಸುವವರು, ಕೊರೊನಾ ಬಂದರೂ ತುಳುನಾಡಿನಲ್ಲಿ ಕೋಲ, ತಂಬಿಲ, ನಾಗಾರಾಧನೆ ನಿಂತಿಲ್ಲ. ಮಂಗಳೂರಿನ ಜನರು ಕಲಾವಿದರನ್ನು ಬೆಳೆಸುವ ರೀತಿ ಎಲ್ಲಿಯೂ, ಯಾರೂ ಬೆಳೆಸಲ್ಲ” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಿಕ್ಷಕಿ ಅಹಲ್ಯಾ, ನಟ ಭೋಜರಾಜ್ ವಾಮಂಜೂರು, ಬಿ.ಎಸ್. ಕಾರಂತ್, ನಿರೂಪಕಿ ಪ್ರಿಯಾ ಹರೀಶ್, ಸೌಂಡ್ ಎಂಜಿನಿಯರ್ ಅಶೋಕ್ ಕ್ರಾಸ್ತಾ ಇವರನ್ನು ಸನ್ಮಾನಿಸಲಾಯಿತು. ಕಲಾವಿದರಾದ ನವೀನ್ ಶೆಟ್ಟಿ, ನಾಗೇಶ್ ದೇವಾಡಿಗ, ತಾರಾನಾಥ ಉರ್ವ, ಧನಪಾಲ್ ಶೆಟ್ಟಿ, ತಸ್ಮಯಿ ಕೊಡಿಯಾಲ್ ಬೈಲ್ ಇವರನ್ನು ಗೌರವಿಸಲಾಯಿತು.
ಮಾಜಿ ಶಾಸಕ ಜೆ.ಆರ್. ಲೋಬೊ, ಮಾಜಿ ಸಚಿವ ರಮಾನಾಥ ರೈ, ನಾಟಕದ ಮುಂಬಯಿ ಸಂಚಾಲಕ ಅಜೆಕಾರು ಬಾಲಕೃಷ್ಣ, ನಟ ಮತ್ತು ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಮಾಜಿ ಮೇಯರ್ ಶಶಿಧರ ಹೆಗ್ಡೆ, ನಮ್ಮ ಕುಡ್ಲ ವಾಹಿನಿಯ ಮುಖ್ಯಸ್ಥ ಲೀಲಾಕ್ಷ ಕರ್ಕೇರ, ಬೊಳ್ಳಿ ಮಲೆತ ಶಿವಶಕ್ತಿಲು ನಾಟಕದ ರಚನೆಕಾರ ನವನೀತ್ ಶೆಟ್ಟಿ ಕದ್ರಿ, ಚಿಲಿಂಬಿ ಶಿರಡಿ ಸಾಯಿ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸ್ ಕುಮಾರ್ ದಾಸ್, ಸಾಯಿ ಶಕ್ತಿ ಬಳಗದ ಲಾವಣ್ಯ ವಿಶ್ವಾಸ್ ದಾಸ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಪುರಾಣ ಪುಣ್ಯ ಕಥೆ ಬೊಳ್ಳಿ ಮಲೆತ ಶಿವಶಕ್ತಿಲು ತುಳು ಪೌರಾಣಿಕ ನಾಟಕದ ಪ್ರದರ್ಶನ ನಡೆಯಿತು.